ಶ್ರೀಲಂಕಾ ವಿರುದ್ಧದ ಪ್ರಥಮ ಟೆಸ್ಟ್: ಇಂಗ್ಲೆಂಡ್ 358 ರನ್‌ಗೆ ಆಲೌಟ್

Update: 2024-08-23 16:25 GMT

PC : NDTV 

ಮ್ಯಾಂಚೆಸ್ಟರ್: ವಿಕೆಟ್ ಕೀಪರ್-ಬ್ಯಾಟರ್ ಜಮಿ ಸ್ಮಿತ್ ಆಕರ್ಷಕ ಶತಕದ(111 ರನ್, 148 ಎಸೆತ)ಸಹಾಯದಿಂದ ಇಂಗ್ಲೆಂಡ್ ತಂಡ ಶ್ರೀಲಂಕಾ ವಿರುದ್ಧದ ಪ್ರಥಮ ಟೆಸ್ಟ್ ನ 3ನೇ ದಿನವಾದ ಶುಕ್ರವಾರ ತನ್ನ ಮೊದಲ ಇನಿಂಗ್ಸ್ ನಲ್ಲಿ 358 ರನ್ ಗಳಿಸಿ ಸರ್ವಪತನವಾಗಿದೆ. ಆದರೆ 122 ರನ್ ಇನಿಂಗ್ಸ್ ಮುನ್ನಡೆ ಪಡೆಯುವಲ್ಲಿ ಯಶಸ್ವಿಯಾಗಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡಿದ್ದ ಶ್ರೀಲಂಕಾ ತಂಡ 236 ರನ್ ಗೆ ಆಲೌಟಾಗಿತ್ತು. ಇಂದು 6 ವಿಕೆಟ್ ಗಳ ನಷ್ಟಕ್ಕೆ 259 ರನ್ ನಿಂದ ಬ್ಯಾಟಿಂಗ್ ಮುಂದುವರಿಸಿದ ಇಂಗ್ಲೆಂಡ್ ತಂಡದ ಪರ ಸ್ಮಿತ್ 136 ಎಸೆತಗಳಲ್ಲಿ 7 ಬೌಂಡರಿ, 1 ಸಿಕ್ಸರ್ ಸಹಾಯದಿಂದ ಚೊಚ್ಚಲ ಶತಕ ಪೂರೈಸಿದರು. ಮಾರ್ಕ್ ವುಡ್ 22 ರನ್ ಗಳಿಸಿದರು.

ಶ್ರೀಲಂಕಾದ ಪರ ಅಸಿತ್ ಫೆರ್ನಾಂಡೊ(4-103), ಪ್ರಭಾತ್ ಜಯಸೂರ್ಯ(3-85) ಹಾಗೂ ವಿಶ್ವ ಫೆರ್ನಾಂಡೊ(2-73) 9 ವಿಕೆಟ್ಗಳನ್ನು ಹಂಚಿಕೊಂಡರು.

ತನ್ನ ಎರಡನೇ ಇನಿಂಗ್ಸ್ ಆರಂಭಿಸಿರುವ ಶ್ರೀಲಂಕಾ ಕ್ರಿಕೆಟ್ ತಂಡ 30 ಓವರ್ಗಳ ಅಂತ್ಯಕ್ಕೆ 107 ರನ್ ಗೆ 4 ವಿಕೆಟ್ ಗಳನ್ನು ಕಳೆದುಕೊಂಡಿದೆ. ಆ್ಯಂಜೆಲೊ ಮ್ಯಾಥ್ಯೂಸ್(ಔಟಾಗದೆ 48)ಹಾಗೂ ಕಮಿಂದು ಮೆಂಡಿಸ್(6 ರನ್)ಕ್ರೀಸ್ ನಲ್ಲಿದ್ದಾರೆ. ನಿಶಾನ್ ಮದುಷ್ಕ(0)ಹಾಗೂ ಕುಸಾಲ್ ಮೆಂಡಿಸ್(0) ಶೂನ್ಯಕ್ಕೆ ಔಟಾದರು. ಡಿ.ಕರುಣರತ್ನೆ(27ರನ್)ಎರಡಂಕೆ ದಾಟಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News