ಝಂಪಾ ಬೌಲಿಂಗ್‌ ಮೋಡಿ, ಮ್ಯಾಕ್ಸ್‌ ʼವಿನ್‌ʼ ಆಟ

Update: 2023-10-25 15:17 GMT

PHOTO : cricketworldcup.com

ಹೊಸದಿಲ್ಲಿ:ಇಲ್ಲಿನ ಅರುಣ್ ಜೇಟ್ಲಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ 2023 ಟೂರ್ನಿಯ ಪಂದ್ಯದಲ್ಲಿ ನೆದರ್ಲ್ಯಾಂಡ್ಸ್ ವಿರುದ್ಧ ಆಸ್ಟ್ರೇಲಿಯ 309 ರನ್ ಗಳ ಬೃಹತ್ ಅಂತರದ ಗೆಲುವು ಸಾಧಿಸಿದೆ.

ವಿಶ್ವಕಪ್ ಇತಿಹಾಸದ ಗ್ಲೇನ್ ಮಾಕ್ಸ್ ವೆಲ್ ಅಬ್ಬರದ ವೇಗದ ಶತಕ ಹಾಗೂ ಡೇವಿಡ್ ವಾರ್ನರ್ ಸಮಯೋಚಿತ ಶತಕದ ಬ್ಯಾಟಿಂಗ್ ನೆರವಿನಿಂದ ಆಸ್ಟ್ರೇಲಿಯ 399 ರನ್ ಗಳ ಬೃಹತ್ ಮೊತ್ತ ಪೇರಿಸಿತು. ಈ ಕಠಿಣ ಗುರಿ ಬೆನ್ನತ್ತಿದ ನೆದರ್ಲ್ಯಾಂಡ್ಸ್ ತಂಡ 90 ರನ್ ಗೆ ಆಲೌಟ್ ಆಗುವ ಮೂಲಕ ಆಸ್ಟ್ರೇಲಿಯ ಟೂರ್ನಿಯ ಬೃಹತ್ ಅಂತರದ ಗೆಲುವು ಸಾಧಿಸಿತು.

ಆಸೀಸ್ ನೀಡಿದ 400 ರನ್ ಬೃಹತ್ ಗುರಿ ಬೆನ್ನತ್ತಿದ ನೆದರ್ಲ್ಯಾಂಡ್ಸ್ ಪೆವಿಲಿಯನ್ ಪರೇಡ್ ನಡೆಸಿತು. ವಿಕ್ರಮಜಿತ್ ಸಿಂಗ್ ಬಾರಿಸಿದ 25 ರನ್ ನೆದರ್ಲ್ಯಾಂಡ್ಸ್ ಇನ್ನಿಂಗ್ಸ್ ನ ಗರಿಷ್ಟ ಸ್ಕೋರ್ ಆಗಿತ್ತು. ನೆದರ್ಲ್ಯಾಂಡ್ಸ್ ಪರ ಮಾಕ್ಸ್ ಓʼಡೌಡ್( 6)ಕಾಲಿನ್ ಅಕೆರ್ಮಾನ್ (10) ಸೌಬ್ರಾಂಡ್ (11)ಬಾಸ್ ಡೆ ಲೀಡೆ (4) ತೇಜ ನಿದಾಮರು (14) ವಾನ್ ಬೀಕ್(0) ವಾನ್ ಡೆರ್ ಮರ್ವೆ (0) ಎಡ್ವಡ್ಸ್ (12), ವಾನ್‌ ಮೀಕರನ್‌ ಶೂನ್ಯ ಸುತ್ತಿದರು.

ಆಸ್ಟ್ರೇಲಿಯ ಪರ ಆಡಂ ಝಾಂಪ 4 ವಿಕೆಟ್ ಪಡೆದರೆ ಮಿಷೆಲ್ ಮಾರ್ಷ್ 2, ಮಿಷೆಲ್ ಸ್ಟಾರ್ಕ್, ಜೋಸ್ ಹೇಝಲ್ ವುಡ್, ಪ್ಯಾಟ್‌ ಕಮ್ಮಿನ್ಸ್ ತಲಾ ಒಂದು ವಿಕೆಟ್ ಪಡೆದರು.

ನೆದರ್ಲ್ಯಾಂಡ್ಸ್ ವಿರುದ್ಧ ಟಾಸ್ ಗೆದ್ದ ಆಸ್ಟ್ರೇಲಿಯಾ ನಾಯಕ ಪ್ಯಾಟ್ ಕಮ್ಮಿನ್ಸ್ ಬ್ಯಾಟಿಂಗ್ ಆಯ್ದುಕೊಂಡರು. ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ 3 ಪಂದ್ಯಗಳ ಪೈಕಿ 2 ಪಂದ್ಯ ಡಿಫೆಂಡ್ ಮಾಡಿದ ತಂಡಗಳೇ ಗೆಲುವು ಸಾಧಿಸಿದ್ದವು.

ಇತ್ತ ಬ್ಯಾಟಿಂಗ್ ಗೆ ಬಂದ ಆಸ್ಟ್ರೇಲಿಯಾದ ಆರಂಭಿಕ ಬ್ಯಾಟರ್ ಮಿಷೆಲ್ ಮಾರ್ಷ್ ತಂಡ 28 ಗಳಿಸುರುವಾಗಳೇ ಕೇವಲ 9 ರನ್ ಗೆ ವಾನ್ ಬೀಕ್ ಬೌಲಿಂಗ್ ನಲ್ಲಿಔಟ್ ಆದರು. ಬಳಿಕ ಜೊತೆಯಾದ ಡೇವಿಡ್ ವಾರ್ನರ್ ಹಾಗೂ ಸ್ಟೀವನ್ ಸ್ಮಿತ್ ಜೋಡಿ ಎಚ್ಚರಿಕೆಯಿಂದ ಬ್ಯಾಟ್ ಬೀಸಿದರು.ಆರಂಭದಲ್ಲಿ ನಿಧಾನಗತಿ ರನ್ ಕಳೆಹಾಕಿದ ಈರ್ವರು ತಂಡದ ಮೊತ್ತ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರವಹಿಸಿದರು. ಸ್ಟೀವನ್ ಸ್ಮಿತ್ 9 ಬೌಂಡರಿ 1 ಸಿಕ್ಸರ್ ನೆರವಿನಿಂದ 71 ರನ್ ಗಳಿಸಿ ಅರ್ಧಶತಕ ಬಾರಿಸಿ ಆರ್ಯನ್ ದತ್ ಗೆ ವಿಕೆಟ್ ನೀಡಿ ನಿರ್ಗಮಿಸಿದರೆ , ಎಡಗೈ ಬ್ಯಾಟರ್ ಡೇವಿಡ್ ವಾರ್ನರ್ 93 ಎಸೆತಗಳಲ್ಲಿ 11 ಬೌಂಡರಿ 3 ಸಿಕ್ಸರ್ ಸಹಿತ 104 ರನ್ ಸಿಡಿಸುವ ಮೂಲಕ ತಮ್ಮ 22 ನೇ ಶತಕ ಪೂರೈಸಿ ಸಂಭ್ರಮಿಸಿದರು. ಮಾರ್ನಸ್ ಲಬುಶೇನ್ 7 ಬೌಂಡರಿ 2 ಸಿಕ್ಸರ್ ಸಹಿತ 62 ರ್ ಗಳಿಸಿ ಬಾ ಡೆ ಲೀಡೆ ವಿಕೆಟ್ ಒಪ್ಪಿಸುದರೊಂದಿಗೆ ತಮ್ಮ ಉಪಯುಕ್ತ ಇನ್ನಿಂಗ್ಸ್ ಕೊನೆಗೊಳಿಸಿದರು.ಜೋಸ್ ಇಂಗ್ಲಿಸ್ 8 ರನ್ ಗೆ ಗಳಿಸಿದರೆ

ಕ್ಯಾಮರೋನ್ ಗ್ರೀನ್ 8 ರನ್ ಗೆ ಸೈಬ್ರಾಂಡ್ ನೇರ ಎಸೆತ ವಿಕೆಟ್ ಗೆ ಬಡಿದ ಪರಿಣಾಮ ರನೌಟ್ ಗೆ ಬಲಿಯಾದರು. ಕೊನೆಯಲ್ಲಿ ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿದ ಗ್ಲೇನ್ ಮಾಕ್ಸ್ ವೆಲ್ ದಾಖಲೆಯ ಶತಕದ ಮೂಲಕ ತಂಡವನ್ನು380 ರ ಗಡಿ ದಾಟುವಂತೆ ಮಾಡಿದರು. ಕೇವಲ 42 ಎಸೆತ ಎದುರಿಸಿದ ಗ್ಲೇನ್ ಮಾಕ್ಸ್ ವೆಲ್ 9 ಬೌಂಡರಿ 8 ಸಿಕ್ಸರ್ 106 ರನ್ ದಾಖಲಿಸುವ ಮೂಲಕ ಅತೀ ವೇಗದ ಶತಕ ಸಿಡಿಸಿದ ದಾಖಲೆ ತಮ್ಮ ಹೆಸರಿಗೆ ಮಾಡಿಕೊಂಡರು.

ನೆದರ್ಲ್ಯಾಂಡ್ಸ್ ಪರ ಲೊಗನ್ ವಾನ್ ಬೀಕ್ 4 ವಿಕೆಟ್ ಪಡೆದರೆ ಬಾಸ್ ಡೆ ಲೀಡೆ 2 ಹಾಗೂ ಆರ್ಯನ್ ದತ್‌ ಒಂದು ವಿಕೆಟ್ ಪಡೆದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News