ಇಂಗ್ಲೆಂಡ್ ಮಾಜಿ ಬ್ಯಾಟರ್ ಗ್ರಹಾಂ ಥೋರ್ಪೆ ನಿಧನ

Update: 2024-08-05 15:02 GMT

ಗ್ರಹಾಂ ಥೋರ್ಪೆ | PC : PTI 

ಲಂಡನ್: ಇಂಗ್ಲೆಂಡ್ ನ ಮಾಜಿ ಬ್ಯಾಟರ್ ಗ್ರಹಾಂ ಥೋರ್ಪೆ (55 ವರ್ಷ)ನಿಧನರಾಗಿದ್ದಾರೆ. ಇಂಗ್ಲೆಂಡ್ ಕ್ರಿಕೆಟ್ ಮಂಡಳಿಯು (ಇಸಿಬಿ) ಥೋರ್ಪೆ ನಿಧನದ ಸುದ್ದಿಯನ್ನು ದೃಢಪಡಿಸಿದೆ.

ಥೋರ್ಪೆ 1993ರಿಂದ 2005ರ ತನಕ ಇಂಗ್ಲೆಂಡ್ ಪರ 100 ಟೆಸ್ಟ್ ಹಾಗೂ 82 ಏಕದಿನ ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದು ಎಡಗೈ ಬ್ಯಾಟರ್ ಟೆಸ್ಟ್ ಕ್ರಿಕೆಟ್ ನಲ್ಲಿ 44.66ರ ಸರಾಸರಿಯಲ್ಲಿ 16 ಶತಕಗಳ ಸಹಿತ 6,744 ರನ್ ಗಳಿಸಿದ್ದರು.

ಥೋರ್ಪೆಯ ನಿಧನಕ್ಕೆ ತೀವ್ರ ಆಘಾತ ವ್ಯಕ್ತಪಡಿಸಿರುವ ಇಸಿಬಿ, ಗ್ರಹಾಂ ನಿಧನದಿಂದ ನಮಗಾಗಿರುವ ಆಘಾತವನ್ನು ವಿವರಿಸಲು ಸೂಕ್ತ ಪದಗಳು ಸಿಗುತ್ತಿಲ್ಲ. ಇಂಗ್ಲೆಂಡ್ ನ ಓರ್ವ ಅತ್ಯುತ್ತಮ ಬ್ಯಾಟರ್ಗಿಂತಲೂ ಮಿಗಿಲಾಗಿ ಅವರು ಕ್ರಿಕೆಟ್ ಕುಟುಂಬದ ಪ್ರೀತಿಯ ಸದಸ್ಯರಾಗಿದ್ದರು. ವಿಶ್ವದೆಲ್ಲೆಡೆ ಅಭಿಮಾನಿಗಳಿಂದ ಗೌರವಿಸಲ್ಪಟ್ಟಿದ್ದರು. 13 ವರ್ಷಗಳ ಅಂತರರಾಷ್ಟ್ರೀಯ ಕ್ರಿಕೆಟ್ ಜೀವನದಲ್ಲಿ ಅವರ ಸಾಧನೆಗಳು ಅವರ ಸಹ ಆಟಗಾರರು, ಇಂಗ್ಲೆಂಡ್ ಹಾಗೂ ಸರ್ರೆ ಬೆಂಬಲಿಗರಿಗೆ ಸಾಕಷ್ಟು ಖುಷಿಕೊಟ್ಟಿದೆ. ಕೋಚ್ ಆಗಿ ಇಂಗ್ಲೆಂಡ್ ತಂಡ ಎಲ್ಲ ಮಾದರಿ ಕ್ರಿಕೆಟ್ ನಲ್ಲಿ ಅಮೋಘ ಗೆಲುವು ದಾಖಲಿಸಲು ಮಾರ್ಗದರ್ಶನ ನೀಡಿದ್ದರು. ಕ್ರೀಡೆಗೆ ನೀಡಿದ ಅಸಾಧಾರಣ ಕೊಡುಗೆಗಳಿಗಾಗಿ ನಾವು ಯಾವಾಗಲೂ ಗ್ರಹಾಂ ಅವರನ್ನು ನೆನಪಿಸಿಕೊಳ್ಳುತ್ತೇವೆ ಎಂದು ಇಸಿಬಿ ಹೇಳಿಕೆಯೊಂದರಲ್ಲಿ ತಿಳಿಸಿದೆ.

2005ರಲ್ಲಿ ನಿವೃತ್ತಿಯಾದ ನಂತರ ಥೋರ್ಪೆ ಅವರು ಆಸ್ಟ್ರೇಲಿಯದಲ್ಲಿ ಕೋಚಿಂಗ್ ವೃತ್ತಿ ಆರಂಭಿಸಿದ್ದರು. 2010ರಿಂದ 2022ರ ತನಕ ಇಂಗ್ಲೆಂಡ್ ಕೋಚ್ ಆಗುವ ಮೊದಲು ನ್ಯೂ ಸೌತ್ ವೇಲ್ಸ್ ನಲ್ಲಿ ಕಾರ್ಯನಿರ್ವಹಿಸಿದ್ದರು.

ಥೋರ್ಪೆ ಅವರನ್ನು ಮಾರ್ಚ್ 2022ರಲ್ಲಿ ಅಫ್ಘಾನಿಸ್ತಾನದ ಕೋಚ್ ಆಗಿ ನೇಮಿಸಲಾಗಿತ್ತು. ಆದರೆ ಅವರು ತಂಡವನ್ನು ಸೇರುವ ಮೊದಲೇ ಗಂಭೀರ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಥೋರ್ಪೆ ಸಾವಿನ ಕಾರಣವನ್ನು ಘೋಷಿಸಲಾಗಿಲ್ಲ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News