ತವರಿನಲ್ಲೇ ಭಾರತಕ್ಕೆ ʼವೈಟ್‌ವಾಶ್ʼ ಮುಖಭಂಗ: ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ಆಕ್ರೋಶ

Update: 2024-11-03 16:24 IST
photo of Rohit Sharma

ರೋಹಿತ್‌ ಶರ್ಮಾ (Photo: PTI)

  • whatsapp icon

ಮುಂಬೈ: ಇದೇ ಪ್ರಥಮ ಬಾರಿಗೆ ಭಾರತ ತಂಡವು ವಿದೇಶಿ ತಂಡವೊಂದರೆದುರು ತವರಿನಲ್ಲಿ ಟೆಸ್ಟ್ ಸರಣಿ‌ಯಲ್ಲಿ 0-3 ʼವೈಟ್‌ವಾಶ್ʼ ಮುಖಭಂಗಕ್ಕೆ ಒಳಗಾಗಿದೆ. ಪ್ರವಾಸಿ ನ್ಯೂಝಿಲೆಂಡ್ ತಂಡದ ವಿರುದ್ಧದ ಟೆಸ್ಟ್ ಸರಣಿಯಲ್ಲಿ 0-3 ಅಂತರದಲ್ಲಿ ಮಂಡಿಯೂರಿದೆ. ಸರಣಿಯುದ್ದಕ್ಕೂ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ ಭಾರತ ತಂಡದ ವಿರುದ್ಧ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಭಾರತದ ಕಳಪೆ ಪ್ರದರ್ಶನದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಸಾಮಾಜಿಕ ಜಾಲತಾಣ ಬಳಕೆದಾರರೊಬ್ಬರು, “ಮಹನೀಯರೆ ಮತ್ತು ಮಹಿಳೆಯರೆ, ತವರಿನಲ್ಲಿ 0-3ರ ಅಂತರದಲ್ಲಿ ವೈಟ್ ವಾಶ್ ಸಾಧನೆ ಮಾಡಿದ ಪ್ರಪ್ರಥಮ ನಾಯಕ ಮತ್ತು ಕೋಚ್” ಎಂದು ರೋಹಿತ್ ಶರ್ಮ ಮತ್ತು ಗೌತಮ್ ಗಂಭೀರ್ ಭಾವಚಿತ್ರವನ್ನು ಲಗತ್ತಿಸಿ ವ್ಯಂಗ್ಯವಾಡಿದೆ.

“ಬಿಜೆಪಿ ನಾಯಕ ಅಮಿತ್ ಶಾ ಅವರ ಮಗ ಗೌತಮ್ ಗಂಭೀರ್ ಅನ್ನು ಭಾರತ ತಂಡದ ತರಬೇತುದಾರರನ್ನಾಗಿ ನೇಮಿಸಿದಾಗಿನಿಂದಿನ ಭಾರತ ತಂಡದ ಸಾಧನೆ:

ಶ್ರೀಲಂಕಾದಲ್ಲಿ ಏಕದಿನ ಸರಣಿಯಲ್ಲಿ ಪರಾಭವ

12 ವರ್ಷಗಳ ನಂತರ ತವರಿನಲ್ಲಿ ಸರಣಿ ಸೋಲು

ಇತಿಹಾಸದಲ್ಲೇ ಪ್ರಥಮ ಬಾರಿಗೆ 0-3 ಅಂತರದಲ್ಲಿ ʼವೈಟ್ ವಾಶ್ʼ ಮುಖಭಂಗ

ಬಿಜೆಪಿ ಬಿಸಿಸಿಐ ಅನ್ನು ನಾಶ ಮಾಡಿದೆ” ಎಂದು ಅಂಕಿತ್ ಮಯಾಂಕ್ ಎಂಬವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

“ಬಿಜೆಪಿ ಗೌತಮ್ ಗಂಭೀರ್ ರನ್ನು ಮುಖ್ಯ ತರಬೇತುದಾರರನ್ನಾಗಿ ನೇಮಕ ಮಾಡಿತು. ಅವರು ಭಾರತ ತಂಡದ ತರಬೇತುದಾರರಾಗುತ್ತಿದ್ದಂತೆಯೆ ಭಾರತ ತಂಡವು ಅವಮಾನಕಾರಿ ಸೋಲು ಅನುಭವಿಸಿದೆ. ಗೌತಮ್ ಗಂಭೀರ್, ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮ ತಂಡವನ್ನು ತೊರೆಯಬೇಕು” ಎಂದು ದಿಲೀಪ್ ಎಂಬವರು ಆಗ್ರಹಿಸಿದ್ದಾರೆ.

ಸದ್ಯ ಎಕ್ಸ್ ನಲ್ಲಿ ಭಾರತ ತಂಡದ ವೈಟ್ ವಾಶ್ ಪ್ರದರ್ಶನವು ಟ್ರೆಂಡಿಂಗ್ ಆಗಿದ್ದು, ಬಹುತೇಕ ಎಕ್ಸ್ ಬಳಕೆದಾರರು ತರಬೇತುದಾರ ಗೌತಮ್ ಗಂಭೀರ್, ನಾಯಕ ರೋಹಿತ್ ಶರ್ಮ ಹಾಗೂ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News