ಲಕ್ನೋ ತಂಡಕ್ಕೆ ಗಾಯಾಳು ಮುಹ್ಸಿನ್ ಖಾನ್ ಸ್ಥಾನಕ್ಕೆ ಶಾರ್ದುಲ್ ಠಾಕೂರ್

Update: 2025-03-21 22:07 IST
Shardul Thakur

ಶಾರ್ದುಲ್ ಠಾಕೂರ್ | PC : PTI

  • whatsapp icon

ಲಕ್ನೋ: ಕಳೆದ ವರ್ಷ ನಡೆದ ಐಪಿಎಲ್ 2025ರ ಹರಾಜಿನಲ್ಲಿ ಮಾರಾಟವಾಗದೆ ಉಳಿದಿರುವ ಆಲ್‌ರೌಂಡರ್ ಶಾರ್ದುಲ್ ಠಾಕೂರ್ ಇದೀಗ ಲಕ್ನೋ ಸೂಪರ್ ಜಯಂಟ್ಸ್ (ಎಲ್‌ಎಸ್‌ಜಿ)ನೊಂದಿಗೆ ಐಪಿಎಲ್ ಗುತ್ತಿಗೆಗೆ ಸಹಿ ಹಾಕಲು ಸಜ್ಜಾಗಿದ್ದಾರೆ. ಲಕ್ನೋ ಸೂಪರ್ ಜಯಂಟ್ಸ್‌ನ 2025 ಋತುವಿನ ಸಿದ್ಧತೆಗಳು ಆರಂಭಗೊಂಡಂದಿನಿಂದಲೇ ಠಾಕೂರ್ ತಂಡದೊಂದಿಗಿದ್ದಾರೆ. ಅವರು ಗಾಯಗೊಂಡಿರುವ ಮುಹ್ಸಿನ್ ಖಾನ್ ಸ್ಥಾನದಲ್ಲಿ ಆಡಲಿದ್ದಾರೆ.

ಅವರು ತಂಡಕ್ಕೆ ಸೇರ್ಪಡೆಯಾಗಿರುವ ಬಗ್ಗೆ ಅಧಿಕೃತ ಘೋಷಣೆ ಇನ್ನಷ್ಟೇ ಹೊರಬೀಳಬೇಕಾಗಿದೆ. ಆದರೆ, ತಂಡದ ನಿರ್ಧಾರದ ಬಗ್ಗೆ ಠಾಕೂರ್‌ಗೆ ತಿಳಿಸಲಾಗಿದೆ ಎನ್ನುವುದು ತಿಳಿದುಬಂದಿದೆ. ಈ ಬಾರಿಯ ಐಪಿಎಲ್‌ನ ತನ್ನ ಮೊದಲ ಪಂದ್ಯವನ್ನು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಆಡಲು ವಿಶಾಖಪಟ್ಟಣಮ್‌ಗೆ ಹೋಗುವ ಲಕ್ನೋ ತಂಡದ ಜೊತೆಗೆ ಅವರೂ ಹೋಗಲಿದ್ದಾರೆ.

ಮುಹ್ಸಿನ್ ಗಾಯಗೊಂಡಿರುವ ಹಿನ್ನೆಲೆಯಲ್ಲಿ, ಕಳೆದ 3 ತಿಂಗಳಿನಲ್ಲಿ ಯಾವುದೇ ಮಟ್ಟದ ಕ್ರಿಕೆಟ್‌ನಲ್ಲಿದ ಆಡಲು ಅವರಿಗೆ ಸಾಧ್ಯವಾಗಿಲ್ಲ. ಬಳಿಕ, ಅವರು ಎಲ್‌ಎಸ್‌ಜಿಯ ನೆಟ್ ಅಭ್ಯಾಸದ ವೇಳೆ ಬೌಲಿಂಗ್ ಅಭ್ಯಾಸ ನಡೆಸಿದಾಗ ಕಾಲಿನ ಮೀನಖಂಡದ ಗಾಯಕ್ಕೊಳಗಾದರು. ತಂಡದ ಪ್ರಮುಖ ವೇಗಿಗಳು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಯ ಸೆಂಟರ್ ಆಫ್ ಎಕ್ಸಲೆನ್ಸ್ (ಸಿಒಇ)ನಲ್ಲಿ ಈಗಲೂ ಚೇತರಿಸುತ್ತಿರುವ ಹಿನ್ನೆಲೆಯಲ್ಲಿ, ಗಾಯಾಳುವಿನ ಸ್ಥಾನಕ್ಕೆ ಇನ್ನೊಬ್ಬ ಆಟಗಾರನನ್ನು ತೆರವು ಅನಿವಾರ್ಯತೆಗೆ ತಂಡದ ಆಡಳಿತ ಒಳಗಾಗಿದೆ.

ಆಕಾಶ್ ದೀಪ್, ಆವೇಶ್ ಖಾನ್ ಮತ್ತು ಮಯಾಂಕ್ ಯಾದವ್ ಮುಂತಾದ ವೇಗಿಗಳು ಲಕ್ನೋ ತಂಡಕ್ಕೆ ಇನ್ನಷ್ಟೇ ಸೇರ್ಪಡೆಯಾಗಬೇಕಾಗಿದೆ. ಆಕಾಶ್ ದೀಪ್ ಮತ್ತು ಮಯಾಂಕ್ ಅವರು ಸೆಂಟರ್ ಆಫ್ ಎಕ್ಸಲೆನ್ಸ್‌ನಲ್ಲಿ ಚೇತರಿಸುತ್ತಿದ್ದರೆ, ಆವೇಶ್ ಮಂಡಿ ಗಾಯದಿಂದ ಚೇತರಿಸಿದ ಬಳಿಕ ತಂಡದ ಸಂಪರ್ಕಕ್ಕೆ ಇನ್ನೂ ಬಂದಿಲ್ಲ.

ವೇಗದ ಮೂಲಕ ಸಂಚಲನ ಮೂಡಿಸಿರುವ ಮಯಾಂಕ್ ಯಾದವ್, ನೆಟ್ಸ್‌ನಲ್ಲಿ ಕಡಿಮೆ ವೇಗದಲ್ಲಿ ಬೌಲಿಂಗ್ ಮಾಡಲು ಆರಂಭಿಸಿದ್ದಾರೆ. ಆದರೆ, ಅವರು ಸ್ಪರ್ಧಾತ್ಮಕ ಪಂದ್ಯದಲ್ಲಿ ಆಡುವ ದೈಹಿಕ ಕ್ಷಮತೆಯಿಂದ ತುಂಬಾ ದೂರವೇ ಇದ್ದಾರೆ.

ತಂಡದ ಪ್ರಮುಖ ವೇಗದ ಬೌಲರ್‌ಗಳ ಅನುಪಸ್ಥಿತಿಯಲ್ಲಿ, ಶಾರ್ದುಲ್ ತಂಡದ ವೇಗದ ಬೌಲಿಂಗ್ ಘಟಕದ ಮುಂದಾಳತ್ವ ವಹಿಸಲಿದ್ದಾರೆ. ಅವರೀಗ ತಂಡದಲ್ಲಿರುವ ಅತ್ಯಂತ ಅನುಭವಿ ಬೌಲರ್ ಆಗಿದ್ದಾರೆ.

ಐಪಿಎಲ್: ಸಾರ್ವಕಾಲಿಕ ದಾಖಲೆಗಳು (ವಾ)

ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್) 18ನೇ ಆವೃತ್ತಿಗೆ ಶನಿವಾರ ಚಾಲನೆ ಸಿಗಲಿದ್ದು, ಹತ್ತು ತಂಡಗಳು ಕ್ರಿಕೆಟ್‌ನ ಎಲ್ಲಾ ವಿಭಾಗಗಳಲ್ಲೂ ಮೇಲುಗೈ ಸಾಧಿಸಲು ಯತ್ನಿಸಲಿವೆ.

ಈ ಸಂದರ್ಭದಲ್ಲಿ ಹಿಂದಿನ ಆವೃತ್ತಿಗಳ ಶ್ರೇಷ್ಠ ಸಾಧನೆಗಳು ಮತ್ತು ದಾಖಲೆಗಳತ್ತ ಇಲ್ಲಿ ಒಂದು ನೋಟವನ್ನು ಹರಿಸಲಾಗಿದೆ.

►ಅತ್ಯಂತ ಯಶಸ್ವಿ ತಂಡಗಳು

1. ಮುಂಬೈ ಇಂಡಿಯನ್ಸ್- 5 ಪ್ರಶಸ್ತಿಗಳು- 2013, 2015, 2017, 2019 ಮತ್ತು 2020

2. ಚೆನ್ನೈ ಸೂಪರ್ ಕಿಂಗ್ಸ್- 5 ಪ್ರಶಸ್ತಿಗಳು- 2010, 2011, 2018, 2021 ಮತ್ತು 2023

3. ಕೋಲ್ಕತ ನೈಟ್ ರೈಡರ್ಸ್- 3 ಪ್ರಶಸ್ತಿಗಳು- 2012, 2014, 2024

►ಒಟ್ಟು ಗರಿಷ್ಠ ರನ್‌ಗಳು

1. ವಿರಾಟ್ ಕೊಹ್ಲಿ (ಆರ್‌ಸಿಬಿ)- 8,004

2. ಶಿಖರ್ ಧವನ್ (ಡಿಸಿ, ಡಿಸಿಎಚ್, ಎಮ್‌ಐ, ಪಿಬಿಕೆಎಸ್, ಎಸ್‌ಆರ್‌ಎಚ್)- 6,769

3. ರೋಹಿತ್ ಶರ್ಮಾ (ಡಿಸಿಎಚ್, ಎಮ್‌ಐ)- 6,628

4. ಡೇವಿಡ್ ವಾರ್ನರ್ (ಡಿಸಿ, ಎಸ್‌ಆರ್‌ಎಚ್)- 6,565

5. ಸುರೇಶ್ ರೈನಾ (ಸಿಎಸ್‌ಕೆ, ಜಿಎಲ್)- 5,528

►ಗರಿಷ್ಠ ರನ್

1. ಕ್ರಿಸ್ ಗೇಲ್- 66 ಎಸೆತಗಳಲ್ಲಿ 175- ಆರ್‌ಸಿ Vs ಪುಣೆ ವಾರಿಯರ್ಸ್

2. ಬ್ರೆಂಡನ್ ಮೆಕಲಮ್- 73 ಎಸೆತಗಳಲ್ಲಿ 158 ಅಜೇಯ- ಕೆಕೆಆರ್ Vs ಆರ್‌ಸಿಬಿ

3. ಕ್ವಿಂಟನ್ ಡಿ ಕಾಕ್- 70 ಎಸೆತಗಳಲ್ಲಿ 140 ಅಜೇಯ- ಎಲ್‌ಎಸ್‌ಜಿ Vs ಕೆಕೆಆರ್

4. ಎಬಿ ಡಿ ವಿಲಿಯರ್ಸ್- 59 ಎಸೆತಗಳಲ್ಲಿ 133- ಆರ್‌ಸಿಬಿ Vs ಎಮ್‌ಐ

5. ಕೆ.ಎಲ್. ರಾಹುಲ್- 69 ಎಸೆತಗಳಲ್ಲಿ 132 ಅಜೇಯ- ಪಿಬಿಕೆಎಸ್ Vs ಆರ್‌ಸಿಬಿ

►ಒಟ್ಟು ಗರಿಷ್ಠ ವಿಕೆಟ್‌ಗಳು

1. ಯಜುವೇಂದ್ರ ಚಾಹಲ್ (ಎಮ್‌ಐ, ಆರ್‌ಸಿಬಿ, ಆರ್‌ಆರ್)- 205

2. ಪಿಯೂಶ್ ಚಾವ್ಲಾ(ಸಿಎಸ್‌ಕೆ, ಕೆಕೆಆರ್, ಪಿಬಿಕೆಸ್, ಎಮ್‌ಐ)- 192

3. ಡ್ವಾಯ್ನ್ ಬ್ರಾವೊ (ಸಿಎಸ್‌ಕೆ, ಜಿಎಲ್, ಎಮ್‌ಐ)- 183

4. ಭುವನೇಶ್ವರ ಕುಮಾರ್ (ಪಿಡಬ್ಲ್ಯುಐ, ಎಸ್‌ಆರ್‌ಎಚ್)- 181

5. ಸುನೀಲ್ ನರೇನ್ (ಕೆಕೆಆರ್)- 180

►ಗರಿಷ್ಠ ಪಂದ್ಯಗಳು

1. ಎಮ್.ಎಸ್. ಧೋನಿ (ಸಿಎಸ್‌ಕೆ, ಆರ್‌ಪಿಎಸ್)- 264

2. ದಿನೇಶ್ ಕಾರ್ತಿಕ್ (ಡಿಸಿ, ಜಿಎಲ್, ಕೆಕೆಆರ್, ಪಿಬಿಕೆಎಸ್, ಎಮ್‌ಐ, ಆರ್‌ಸಿಬಿ)- 257

3. ರೋಹಿತ್ ಶರ್ಮಾ (ಡಿಸಿಎಚ್, ಎಮ್‌ಐ)- 257

4. ವಿರಾಟ್ ಕೊಹ್ಲಿ (ಆರ್‌ಸಿಬಿ)- 252

5. ರವೀಂದ್ರ ಜಡೇಜ (ಸಿಎಸ್‌ಕೆ, ಜಿಎಲ್, ಕೊಚ್ಚಿ, ಆರ್‌ಆರ್)- 240

►ಗರಿಷ್ಠ ಕ್ಯಾಚ್‌ಗಳು

1. ವಿರಾಟ್ ಕೊಹ್ಲಿ (ಆರ್‌ಸಿಬಿ)- 114

2. ಸುರೇಶ್ ರೈನಾ (ಸಿಎಸ್‌ಕೆ, ಜಿಎಲ್)- 109

3. ಕೀರನ್ ಪೊಲಾರ್ಡ್ (ಎಮ್‌ಐ)- 103

4. ರವೀಂದ್ರ ಜಡೇಜ (ಸಿಎಸ್‌ಕೆ, ಜಿಎಲ್, ಕೊಚ್ಚಿ, ಆರ್‌ಆರ್)- 103

5. ರೋಹಿತ್ ಶರ್ಮಾ (ಡಿಸಿಎಚ್, ಎಮ್‌ಐ)- 101

►ಅತಿ ಹೆಚ್ಚು ವಿಜಯದ ಅಂತರ

1. ಡೆಲ್ಲಿ ಡೇರ್ ಡೆವಿಲ್ಸ್ ವಿರುದ್ಧ ಮುಂಬೈ ಇಂಡಿಯನ್ಸ್‌ಗೆ 146 ರನ್ ಜಯ

2. ಗುಜರಾತ್ ಲಯನ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ 144 ರನ್ ಜಯ

3. ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಕೋಲ್ಕತ್ತಾ ನೈಟ್ ರೈಡರ್ಸ್‌ಗೆ 140 ರನ್ ಜಯ

4. ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ 138 ರನ್ ಜಯ

5. ಪುಣೆ ವಾರಿಯರ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ 130 ರನ್ ಜಯ

►ಗರಿಷ್ಠ ಮೊತ್ತಗಳು

1. ಎಸ್‌ಆರ್‌ಎಚ್ Vs ಆರ್‌ಸಿಬಿ- 287/3

2. ಎಸ್‌ಆರ್‌ಎಚ್ Vs ಎಮ್‌ಐ- 277/3

3. ಕೆಕೆಆರ್ Vs ಡಿಸಿ- 272/7

4. ಎಸ್‌ಆರ್‌ಎಚ್ Vs ಡಿಸಿ- 266/7

5. ಆರ್‌ಸಿಬಿ Vs ಪುಣೆ ವಾರಿಯರ್ಸ್- 263/5

►ಕನಿಷ್ಠ ಮೊತ್ತಗಳು

1. ಆರ್‌ಸಿಬಿ Vs ಕೆಕೆಆರ್- 49

2. ಆರ್‌ಆರ್ Vs ಆರ್‌ಸಿಬಿ- 58

3. ಆರ್‌ಆರ್ Vs ಆರ್‌ಸಿಬಿ- 59

4. ಡೆಲ್ಲಿ ಡೇರ್‌ಡೆವಿಲ್ಸ್ Vs ಎಮ್‌ಐ- 66

5. ಡೆಲ್ಲಿ ಡೇರ್‌ಡೆವಿಲ್ಸ್ Vs ಕಿಂಗ್ಸ್ ಇಲೆವೆನ್ ಪಂಜಾಬ್- 67

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News