ಕ್ರಿಕೆಟ್ ವಿಶ್ವ ಸಮರಕ್ಕೆ ಕ್ಷಣಗಣನೆ: ಗೂಗಲ್ ಡೂಡಲ್‌ನಲ್ಲೂ ರಾರಾಜಿಸಿದ 'ವಿಶ್ವಕಪ್'
ಹೊಸದಿಲ್ಲಿ: ಇಂದಿನಿಂದ ಪ್ರಾರಂಭವಾಗಲಿರುವ ಐಸಿಸಿ ಪುರುಷರ ವಿಶ್ವಕಪ್ ಕ್ರಿಕೆಟ್ ಗಾಗಿ ಗೂಗಲ್ ಸಂಸ್ಥೆಯು ಡೂಡಲ್ ಮೂಲಕ ಗೌರವ ಸಲ್ಲಿಸಿದೆ. ಈ ಬಾರಿ ಭಾರತವು ವಿಶ್ವಕಪ್ ಪಂದ್ಯಾವಳಿಯ ಆತಿಥ್ಯ ವಹಿಸುತ್ತಿದ್ದು, 1975ರಲ್ಲಿ ಪ್ರಾರಂಭವಾದ ನಂತರ ಈ ಬಾರಿಯದು 13ನೇ ಆವೃತ್ತಿಯ ವಿಶ್ವಕಪ್ ಆಗಿದೆ. ಅಧಿಕೃತ ವಿವರಗಳ ಪ್ರಕಾರ, 10 ರಾಷ್ಟ್ರೀಯ ತಂಡಗಳು ವಿಶ್ವಕಪ್ ನಲ್ಲಿ ಸೆಣಸಲಿವೆ.
ಈ ಬಾರಿಯ ಐಸಿಸಿ ಪುರುಷರ ವಿಶ್ವಕಪ್ ಕ್ರಿಕೆಟ್ ನಲ್ಲಿ ಒಟ್ಟು 45 ಪಂದ್ಯಗಳನ್ನು ಆಡಲಾಗುತ್ತದೆ. ಎಲ್ಲ ತಂಡಗಳೂ ವಿಶ್ವಕಪ್ ನಲ್ಲಿ ಭಾಗವಹಿಸಿರುವ ಇನ್ನಿತರ ಎಲ್ಲ ತಂಡಗಳೆದುರು ತಲಾ ಒಂದು ಪಂದ್ಯಗಳನ್ನಾಡಲಿವೆ. 13ನೇ ಆವೃತ್ತಿಯ ವಿಶ್ವಕಪ್ ನಲ್ಲಿ ಅಫ್ಘಾನಿಸ್ತಾನ, ಆಸ್ಟ್ರೇಲಿಯಾ, ಬಾಂಗ್ಲಾದೇಶ, ಇಂಗ್ಲೆಂಡ್, ಭಾರತ, ನೆದರ್ ಲೆಂಡ್ಸ್, ನ್ಯೂಝಿಲೆಂಡ್, ಪಾಕಿಸ್ತಾನ, ದಕ್ಷಿಣ ಆಫ್ರಿಕಾ ಹಾಗೂ ಶ್ರೀಲಂಕಾ ತಂಡಗಳು ಭಾಗವಹಿಸುತ್ತಿವೆ.
ಹೀಗಾಗಿ ಗೂಗಲ್ ಸಂಸ್ಥೆಯು, ಈ ಪ್ರತಿಷ್ಠಿತ ಪಂದ್ಯಾವಳಿಯನ್ನು ಇಂದು (ಗುರುವಾರ) ಡೂಡಲ್ ಮೂಲಕ ಆಚರಿಸುತ್ತಿದೆ.