ವೆಸ್ಟ್‌ಇಂಡೀಸ್ ವಿರುದ್ಧ ಮೊದಲ ಏಕದಿನ ಪಂದ್ಯದಲ್ಲಿ ಚರ್ಚೆಗೆ ಗ್ರಾಸವಾದ ಹಾರ್ದಿಕ್ ಪಾಂಡ್ಯ ರನೌಟ್

Update: 2023-07-28 14:40 GMT

ಬಾರ್ಬಡೋಸ್, ಜು.28: ಭಾರತ ಹಾಗೂ ವೆಸ್ಟ್‌ಇಂಡೀಸ್ ನಡುವೆ ನಡೆದಿರುವ ಮೊದಲ ಏಕದಿನ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ರನೌಟಾಗಿರುವ ಸನ್ನಿವೇಶವು ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಬ್ಯಾಟರ್ ಇಶಾನ್ ಕಿಶನ್ ಬೌಲರ್ ಯಾನಿಕ್ ಕ್ಯಾರಿಯಾ ಎಸೆದ ಚೆಂಡನ್ನು ಅವರತ್ತ ಬಾರಿಸಿದರು. ಚೆಂಡು ಯಾನಿಕ್ ಕೈ ಯಿಂದ ಪುಟಿದೆದ್ದು ನಾನ್‌ಸ್ಟ್ರೈಕ್ ಸ್ಟಂಪ್‌ಗೆ ಅಪ್ಪಳಿಸಿತು. ಆಗ ನಾನ್‌ಸ್ಟ್ರೈಕ್‌ನಲ್ಲಿದ್ದ ಹಾರ್ದಿಕ್ ಪಾಂಡ್ಯ ಕ್ರೀಸ್ ಬಿಟ್ಟು ನಿಂತಿದ್ದರು. ಬೈಲ್ಸ್ ಬೀಳುವಾಗ ಪಾಂಡ್ಯ ಅವರ ಬ್ಯಾಟ್ ಕ್ರೀಸ್‌ನಿಂದ ಮೇಲಿತ್ತ್ತು. ಹೊಸ ನಿಯಮದ ಪ್ರಕಾರ ಪಾಂಡ್ಯಗೆ ನಾಟೌಟ್ ತೀರ್ಪು ನೀಡಬೇಕೆಂದು ಸಾಮಾಜಿಕ ಜಾಲತಾಣದಲ್ಲಿ ಕ್ರಿಕೆಟ್ ಅಭಿಮಾನಿಗಳು ವಾದಿಸಿದ್ದಾರೆ. ಬ್ಯಾಟ್ ನೆಲದ ಮೇಲಿತ್ತು. ಪಾಂಡ್ಯ ಕ್ರೀಸ್‌ಗೆ ಮರಳಲು ಯತ್ನಿಸಿದಾಗ ಬ್ಯಾಟ್ ಮೇಲೆ ಹಾರಿತ್ತು. ವೆಸ್ಟ್‌ಇಂಡೀಸ್ ಪರವಾಗಿ ನಿರ್ಧಾರ ತಾಳಿರುವ ಮೂರನೇ ಅಂಪೈರ್ ಇದನ್ನೆಲ್ಲ ಗಮನಿಸಿರಲಿಲ್ಲ.

ರನೌಟ್‌ಗೆ ಸಂಬಂಧಿಸಿದ ಹೊಸ ನಿಯಮಗಳ ಪ್ರಕಾರ ಹಾರ್ದಿಕ್‌ಗೆ ಔಟ್ ನೀಡಬಾರದಿತ್ತು. ಅವರ ಬ್ಯಾಟ್ ಮೇಲಕ್ಕೆ ಪುಟಿದೇಳುವ ಮೊದಲು ಅದು ನೆಲದಲ್ಲಿತ್ತು ಎಂದು ಓರ್ವ ಟ್ವೀಟ್ ಬಳಕೆದಾರ ಹೇಳಿದ್ದಾರೆ.

ಎಡಗೈ ಸ್ಪಿನ್ನರ್‌ಗಳಾದ ಕುಲದೀಪ್ ಯಾದವ್ ಹಾಗೂ ರವೀಂದ್ರ ಜಡೇಜ ಅವರ ಅಮೋಘ ಬೌಲಿಂಗ್, ಕಿಶನ್ 52 ರನ್ ನೆರವಿನಿಂದ ಭಾರತ ತಂಡ ವೆಸ್ಟ್‌ಇಂಡೀಸ್ ವಿರುದ್ಧ 27 ಓವರ್‌ಗಳು ಬಾಕಿ ಇರುವಾಗಲೇ 5 ವಿಕೆಟ್ ಅಂತರದಿಂದ ಜಯ ಸಾಧಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Sathish

contributor

Byline - ವಾರ್ತಾಭಾರತಿ

contributor

Similar News