ಹಾಕಿ ಟೆಸ್ಟ್: 5ನೇ ಪಂದ್ಯದಲ್ಲೂ ಭಾರತಕ್ಕೆ ಸೋಲು; 5-0 ಅಂತರದಿಂದ ಸರಣಿ ಗೆದ್ದ ಆಸ್ಟ್ರೇಲಿಯ

Update: 2024-04-13 17:54 GMT

  Photo Credit: Gary Day

ಪರ್ತ್ (ಆಸ್ಟ್ರೇಲಿಯ): ಆಸ್ಟ್ರೇಲಿಯ ವಿರುದ್ಧದ ಪುರುಷರ ಹಾಕಿ ಟೆಸ್ಟ್ ಸರಣಿಯ ಐದನೇ ಹಾಗೂ ಕೊನೆಯ ಪಂದ್ಯದಲ್ಲಿ ಭಾರತ ಶನಿವಾರ 2-3ರ ಸೋಲುನುಭವಿಸಿದೆ. ಇದರೊಂದಿಗೆ ಭಾರತವು ಎಲ್ಲಾ ಐದು ಪಂದ್ಯಗಳಲ್ಲಿ ಸೋಲನುಭವಿಸಿ ಸರಣಿಯನ್ನು 0-5 ಅಂತರದಿಂದ ಕಳೆದುಕೊಂಡಿದೆ.

ಹಿಂದಿನ ಎಲ್ಲಾ ನಾಲ್ಕು ಪಂದ್ಯಗಳನ್ನು ಸೋತ ಬಳಿಕ, ಭಾರತವು ಪರ್ತ್‍ನಲ್ಲಿ ನಡೆದ ಐದನೇ ಪಂದ್ಯಕ್ಕೆ ತೆರಳಿತ್ತು. ಒಂದು ಪಂದ್ಯದಲ್ಲಾದರೂ ಗೆದ್ದು ಸರಣಿ ಸೋಲಿನ ಅಂತರವನ್ನು ಕಡಿಮೆಗೊಳಿಸುವ ಉದ್ದೇಶ ಅದರದ್ದಾಗಿತ್ತು. ಹಿಂದಿನ ನಾಲ್ಕು ಪಂದ್ಯಗಳನ್ನು ಭಾರತ ಕ್ರಮವಾಗಿ 1-5, 2-4, 1-2 ಮತ್ತು 1-3 ಅಂತರದಿಂದ ಸೋತಿದೆ.

ಮುಂದೆ ಪ್ಯಾರಿಸ್‍ನಲ್ಲಿ ನಡೆಯಲಿರುವ ಒಲಿಂಪಿಕ್ಸ್ ನ ಹಿನ್ನೆಲೆಯಲ್ಲಿ, ಈ ಟೆಸ್ಟ್ ಸರಣಿಯು ಭಾರತಕ್ಕೆ ಮಹತ್ವದ್ದಾಗಿತ್ತು.

ಶನಿವಾರ ಭಾರತದ ಪರವಾಗಿ ನಾಯಕ ಹರ್ಮನ್‍ಪ್ರೀತ್ ಸಿಂಗ್ 4ನೇ ನಿಮಿಷದಲ್ಲಿ ಮತ್ತು ಬಾಬಿ ಸಿಂಗ್ ಧಾಮಿ 53ನೇ ನಿಮಿಷದಲ್ಲಿ ಗೋಲುಗಳನ್ನು ಬಾರಿಸಿದರು.

ಅದೇ ವೇಳೆ, ಆಸ್ಟ್ರೇಲಿಯದ ಪರವಾಗಿ ಜೆರೆಮಿ ಹೇವಾರ್ಡ್ 20ನೇ ನಿಮಿಷದಲ್ಲಿ, ಕೈ ವಿಲೋಟ್ 38ನೇ ನಿಮಿಷದಲ್ಲಿ ಮತ್ತು ಟಿಮ್ ಬ್ರಾಂಡ್ 39ನೇ ನಿಮಿಷದಲ್ಲಿ ಗೋಲುಗಳನ್ನು ಬಾರಿಸಿದರು.

Tags:    

Writer - ವಾರ್ತಾಭಾರತಿ

contributor

Editor - musaveer

contributor

Byline - ವಾರ್ತಾಭಾರತಿ

contributor

Similar News