ಭಾರತದ ಏಕದಿನ ವಿಶ್ವಕಪ್ ತಂಡ ಫೈನಲ್; ಕೆ.ಎಲ್. ರಾಹುಲ್ ವಾಪಸ್, ಸಂಜು ಸ್ಯಾಮ್ಸನ್ ಔಟ್: ವರದಿ

Update: 2023-09-03 05:35 GMT

Sanju samson, Photo: BCCI

ಹೊಸದಿಲ್ಲಿ: ಭಾರತದ ಏಕದಿನ ವಿಶ್ವಕಪ್ 2023 ತಂಡವನ್ನು ಇಂದು ಪ್ರಕಟಿಸುವ ನಿರೀಕ್ಷೆಯಿದೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್ಕರ್ ಅವರು ಶ್ರೀಲಂಕಾಕ್ಕೆ ತೆರಳಿ ತಂಡದ ಆಡಳಿತದೊಂದಿಗೆ ಚರ್ಚೆ ನಡೆಸಿ ತಂಡವನ್ನು ಅಂತಿಮಗೊಳಿಸಿದ್ದಾರೆ ಎಂದು ಮೂಲಗಳು NDTVಗೆ ತಿಳಿಸಿವೆ

. ಬಿಸಿಸಿಐ ಇತ್ತೀಚೆಗೆ ಆಯ್ಕೆ ಮಾಡಿದ ಏಶ್ಯ ಕಪ್ 2023 ತಂಡದಿಂದ ಯಾವುದೇ ದೊಡ್ಡ ಅ ಚ್ಚರಿ ಇಲ್ಲ. ಏಕದಿನ ವಿಶ್ವಕಪ್ ತಂಡದಲ್ಲಿ 15 ಸದಸ್ಯರು ಇರಲಿದ್ದು, ವಿಕೆಟ್-ಕೀಪರ್ ಬ್ಯಾಟರ್ ಸಂಜು ಸ್ಯಾಮ್ಸನ್ಗೆ ಸ್ಥಾನವಿಲ್ಲ. ಆದರೆ ಮತ್ತೆ ಫಿಟ್ ಆಗಿರುವ ಕೆ.ಎಲ್. ರಾಹುಲ್ ಆಯ್ಕೆಯಾಗಿದ್ದಾರೆ

ಅಗರ್ಕರ್ ಅವರು ಏಶ್ಯಕಪ್. ಗೆ ಭಾರತೀಯ ತಂಡವನ್ನು ಘೋಷಿಸಿದಾಗ, ಏಕದಿನ ವಿಶ್ವಕಪ್ ತಂಡವು ಇದೇ ರೀತಿ ಇರಲಿದೆ ಎಂದು ಹೇಳಿದ್ದರು. ಆದಾಗ್ಯೂ, ಏಶ್ಯಕಪ್ ತಂಡದಲ್ಲಿ 17ಸದಸ್ಯರಿದ್ದು ರಾಹುಲ್ ಗೆ ಬ್ಯಾಕ್ ಅಪ್ ಆಗಿ ಸ್ಯಾಮ್ಸನ್ನನ್ನು ಸೇರಿಸಲಾಗಿತ್ತು.

ವಿಶ್ವಕಪ್ ತಂಡವು ಕೇವಲ 15 ಆಟಗಾರರನ್ನು ಒಳಗೊಂಡಿರುವುದರಿಂದ ಮುಖ್ಯ ತಂಡದಿಂದ 2 ಸದಸ್ಯರನ್ನು ತೆಗೆದುಹಾಕುವುದು ಅನಿವಾರ್ಯವಾಗಿದೆ.

ಪಟ್ಟಿಯಿಂದ ಹೊರಗುಳಿಯುವ ಇಬ್ಬರು ಸದಸ್ಯರು ತಿಲಕ್ ವರ್ಮಾ ಮತ್ತು ಪ್ರಸಿದ್ಧ ಕೃಷ್ಣ ಎಂದು ತಿಳಿದು ಬಂದಿದೆ. ವರ್ಮಾ ಏಶ್ಯ ಕಪ್ ಗಾಗಿ ಮೊದಲ ಬಾರಿ ಏಕದಿನ ತಂಡದಲ್ಲಿ ಸ್ಥಾನ ಪಡೆದಿದ್ದರು. , ಸುದೀರ್ಘ ಗಾಯದ ಸಮಸ್ಯೆಯಿಂದ ಚೇತರಿಸಿಕೊಂಡ ನಂತರ ಕೃಷ್ಣ ಅವರನ್ನು ತಂಡಕ್ಕೆ ಸೇರಿಸಲಾಯಿತು. ಜಸ್ಪ್ರೀತ್ ಬುಮ್ರಾ, ಶ್ರೇಯಸ್ ಅಯ್ಯರ್ ಹಾಗೂ ಕೆ.ಎಲ್. ರಾಹುಲ್ ಮೂವರೂ ವಿಶ್ವಕಪ್ ಗಾಗಿ ಭಾರತ ತಂಡದಲ್ಲಿ ಸ್ಥಾನ ಗಳಿಸಿದ್ದಾರೆ.

ಏಶ್ಯಕಪ್ ಗಾಗಿ ಭಾರತೀಯ ತಂಡದಲ್ಲಿ ಆಯ್ಕೆಯಾಗದ ಯಜುವೇಂದ್ರ ಚಹಾಲ್ ಗೆ ವಿಶ್ವಕಪ್ ತಂಡದಲ್ಲಿಯೂ ಸ್ಥಾನ ಸಿಗುವ ಸಾಧ್ಯತೆಯಿಲ್ಲ. ಸೂರ್ಯಕುಮಾರ್ ಯಾದವ್, 50-ಓವರ್ ಮಾದರಿಯಲ್ಲಿ ರನ್ ಗಾಗಿ ಪರದಾಟ ನಡೆಸುತ್ತಿರುವ ಹೊರತಾಗಿಯೂ, ತಂಡದಲ್ಲಿ ತಮ್ಮ ಸ್ಥಾನವನ್ನು ಉಳಿಸಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಭಾರತದ ಸಂಭಾವ್ಯ ವಿಶ್ವಕಪ್ 2023 ತಂಡ:

ರೋಹಿತ್ ಶರ್ಮಾ (ನಾಯಕ), ಹಾರ್ದಿಕ್ ಪಾಂಡ್ಯ (ಉಪ ನಾಯಕ), ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ಕೆ.ಎಲ್. ರಾಹುಲ್( ವಿಕೆಟ್ ಕೀಪರ್), ವಿರಾಟ್ ಕೊಹ್ಲಿ, ಶುಭಮನ್ ಗಿಲ್, ಅಕ್ಷರ್ ಪಟೇಲ್, ರವೀಂದ್ರ ಜಡೇಜ, ಇಶಾನ್ ಕಿಶನ್ (ವಿಕೆಟ್ ಕೀಪರ್) ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ಮುಹಮ್ಮದ್ ಶಮಿ, ಮುಹಮ್ಮದ್ ಸಿರಾಜ್ ಹಾಗೂ ಜಸ್ಪ್ರೀತ್ ಬುಮ್ರಾ

Tags:    

Writer - ವಾರ್ತಾಭಾರತಿ

contributor

Editor - Sathish

contributor

Byline - ವಾರ್ತಾಭಾರತಿ

contributor

Similar News