ಆಫ್ರಿಕಾ ಗೆಲುವಿಗೆ 15 ಓವರ್ ಗಳಲ್ಲಿ 152 ರನ್ ಗುರಿ ನೀಡಿದ ಭಾರತ
ಗ್ಕೆಬರ್ಹಾ: ಇಲ್ಲಿನ ಸೇಂಟ್ ಜಾರ್ಜ್ ಪಾರ್ಕ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ದ್ವಿತೀಯ ಟಿ20 ಪಂದ್ಯದಲ್ಲಿ ಭಾರತ ತಂಡ ದಕ್ಷಿಣ ಆಫ್ರಿಕಾ ಗೆಲುವಿಗೆ 15 ಓವೆರ್ ಗಳಲ್ಲಿ 152 ರನ್ ಗುರಿ ನೀಡಿದೆ.
ಮೊದಲು ಬ್ಯಾಟ್ ಬೀಸಿದ್ದ ಭಾರತ 19.3 ಓವರ್ ಗಳಲ್ಲಿ 180 ರನ್ ಗಳಿಸಿತ್ತು. ಈ ವೇಳೆ ಮಳೆ ಅಡ್ಡಿಯಾಗಿದ್ದರಿಂದ ಮೊದಲ ಇನ್ನಿಂಗ್ಸ್ ಕೊನೆಗೊಳಿಸಿ ದಕ್ಷಿಣ ಆಫ್ರಿಕಾಗೆ ಬ್ಯಾಟಿಂಗ್ ಆಹ್ವಾನ ನೀಡಲಾಯಿತು.
ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿರುವ ಭಾರತ ತನ್ನ ಮೊದಲ ಪಂದ್ಯ ಮಳೆಯಿಂದ ಕಳೆದುಕೊಂಡಿತ್ತು. ಆದರೆ ದ್ವಿತೀಯ ಟಿ20 ಪಂದ್ಯದಲ್ಲಿ ಆರಂಭದಲ್ಲಿ ತುಂತುರು ಮಳೆ ಕಂಡು ಬಂದರೂ ಬಳಿಕ ಮಳೆ ಕಡಿಮೆಯಾದ ಪರಿಣಾಮ ಪಂದ್ಯ ಆರಂಭವಾಯಿತು. ಆದರೆ ಮೊದಲ ಇನ್ನಿಂಗ್ಸ್ ನ ಕಡೇ ಓವರ್ ನಲ್ಲಿ ಮಳೆ ಮತ್ತೆ ಕಾಣಿಸಿಕೊಂಡಿದ್ದರಿಂದ ಪಂದ್ಯವನ್ನು ನಿಯಮದಂತೆ ಕೊನೆಗೊಳಿಸಿ. ದಕ್ಷಣ ಆಫ್ರಿಕಾಗೆ ಬ್ಯಾಟಿಂಗ್ ಮಾಡಲು ಗುರಿ ನೀಡಲಾಯಿತು.
ಈ ಪಂದ್ಯದಲ್ಲಿ ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ತಂಡ ಭಾರತದ ವಿರುದ್ಧ ಬೌಲಿಂಗ್ ಆಯ್ದುಕೊಂಡಿತು. ಇತ್ತ ಬ್ಯಾಟಿಂಗ್ ಆರಂಭಿಸಿದ ಭಾರತ ತಂಡಕ್ಕೆ ಮಾರ್ಕೊ ಜಾನ್ಸನ್ ಹಾಗೂ ವಿಲಿಯಮ್ಸ್ ಜೋಡಿ ಆಘಾತ ನೀಡಿತು. ಆರಂಭಿಕರಾದ ಯಶಸ್ವಿ ಜೈಸ್ವಾಲ್ ಶುಬ್ಮನ್ ಗಿಲ್ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು. ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಬಂದ ತಿಲಕ್ ವರ್ಮಾ 29 ರನ್ ಗಳಿಸಿದರೆ, ನಾಯಕ ಸೂರ್ಯಕುಮಾರ್ ಯಾದವ್ 5 ಬೌಂಡರಿ 3 ಸಿಕ್ಸರ್ ಸಹಿತ 56 ರನ್ ಬಾರಿಸಿ ಶಂಸಿ ಸ್ಪಿನ್ ಬಲೆಗೆ ಬಿದ್ದರು. ಬಳಿಕ ಭಾರತದ ರನ್ ವೇಗಕ್ಕೆ ಚಾಲನೆ ನೀಡಿದ ರಿಂಕು ಸಿಂಗ್ 9 ಬೌಂಡರಿ 2 ಸಿಕ್ಸರ್ ಸಹಿತ ಅಜೇಯ 68 ರನ್ ಬಾರಿಸಿದರು.
ಜಿತೇಶ್ ಶರ್ಮಾ 1 , ರವೀಂದ್ರ ಜಡೇಜಾ 19, ಅರ್ಶದೀಪ್ ಶೂನ್ಯಕ್ಕೆ ವಿಕೆಟ್ ಕಳೆದುಕೊಂಡರು.
ದಕ್ಷಿಣ ಆಫ್ರಿಕಾ ಪರ ಉತ್ತಮ ಪ್ರದರ್ಶನ ನೀಡಿದ ಜೇರಾಲ್ಡ್ 3 ವಿಕೆಟ್ ಪಡೆದರು. ಮಾರ್ಕೊ ಜಾನ್ಸನ್, ವಿಲಿಯಮ್ಸ್, ಶಂಸಿ ಹಾಗೂ ಮಾರ್ಕ್ರಮ್ ತಲಾ ಒಂದು ವಿಕೆಟ್ ಕಬಳಿಸಿದರು.