ವಿಶ್ವಕಪ್ ನಲ್ಲಿ ಮತ್ತೆ ʼವಿಂಡಿಯಾʼ

Update: 2023-10-19 17:15 GMT

PHOTO: Cricketworldcup.com

ಪುಣೆ : ಇಲ್ಲಿನ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ 2023 ಟೂರ್ನಿ ಬಾಂಗ್ಲಾದೇಶ ವಿರುದ್ಧ 7 ವಿಕೆಟ್ ಗೆಲುವಿನೊಂದಿಗೆ ಭಾರತ ವಿಶ್ವಕಪ್ ನಲ್ಲಿ ತನ್ನ ಪಯಣ ಮುಂದುವರಿಸಿದೆ. ಈ ಪಂದ್ಯದಲ್ಲಿ ಕೊಹ್ಲಿ ರೋಚಕ ಶತಕ ದಾಖಲಿಸುವ ಮೂಲಕ ಪಂದ್ಯದ ಕಿಕ್ ಹೆಚ್ಚಿಸಿದರು. ಅಭಿಮಾನಿಗಳು ವಿರಾಟ್ ಶತಕವನ್ನು ತುದಿಗಾಲಲ್ಲಿ ನಿಂತು ಕಾದಿದ್ದು ಈ ಪಂದ್ಯದ ವಿಶೇಷ. 

ರೋಹಿತ್ ಶರ್ಮಾ ಆಕ್ರಮಣಕಾರಿ ಬ್ಯಾಟಿಂಗ್, ಶುಭ ಮನ್ ಗಿಲ್ ಅರ್ಧ ಶತಕ , ವಿರಾಟ್ ಕೊಹ್ಲಿ ಆಕರ್ಷಕ ಶತಕ ನೆರವಿಂದ ಭಾರತ, ಬಾಂಗ್ಲಾದೇಶ ವಿರುದ್ಧ ಗೆಲುವು ಸಾಧಿಸಿತು.

ಭಾರತೀಯ ಬೌಲರ್ ಗಳ ಸಂಘಟಿತ ದಾಳಿ ನಡುವೆ ತಂಝೀದ್ ಹಸನ್ ಹಾಗೂ ಲಿಟನ್ ದಾಸ್ ಅರ್ಧಶತಕದ ಬಲ, ಬಾಂಗ್ಲಾ 256 ರನ್ ಪೇರಿಸಿತು. ಈ ಸ್ಪರ್ದಾತ್ಮಕ ಮೊತ್ತ ಬೆನ್ನತ್ತಿದ ಭಾರತ ಆರಂಭದಲ್ಲೇ ಆಕ್ರಮಣಕಾರಿ ಬ್ಯಾಟಿಂಗ್ ಪ್ರದರ್ಶಿಸಿ ಬಾಂಗ್ಲಾವನ್ನು ಒತ್ತಡಕ್ಕೆ ಸಿಲುಕಿಸಿತು. ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದ ನಾಯಕ ರೋಹಿತ್ ಶರ್ಮಾ 40 ಎಸೆತ ಎದುರಿಸಿ 7 ಬೌಂಡರಿ 2 ಸಿಕ್ಸರ್ ಸಹಿತ 48 ಗಳಸಿ 120 ಸ್ಟ್ರೈಕ್ ರೇಟ್ ನಲ್ಲಿ ಬ್ಯಾಟ್ ಬೀಸಿದರು. ಆದರೆ ಅದನ್ನು ಅರ್ಧಶತಕವಾಗಿ ಪರಿವರ್ತಿಸುವಲ್ಲಿ ಎಡವಿದ ಅವರು ಹಸನ್ ಮಹ್ಮುದ್ ಬೌಲಿಂಗ್ ನಲ್ಲಿ ವಿಕೆಟ್ ಕಳೆದುಕೊಂಡರು ಅವರಿಗೆ ಸಾಥ್ ನೀಡಿದ್ದ ಶುಭ ಮನ್ ಗಿಲ್ ಬಾಲ್ ದಂಡಿಸುವಲ್ಲಿ ಹಿಂದೆ ಬೀಳದೆ 5 ಬೌಂಡರಿ 2 ಸಿಕ್ಸರ್ 53 ರನ್ ಪೇರಿಸಿ ಮೆಹದಿ ಹಸನ್ ಗೆ ವಿಕೆಟ್ ನೀಡಿದರು.

ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಗೆ ಬಂದ ವಿರಾಟ್ ಕೊಹ್ಲಿ ತಂಡದ ರನ್ ರೇಟ್ ಕುಸಿಯಲು ಬಿಡದೆ, ಬ್ಯಾಟ್ ಬೀಸಿದ ಅವರು 6 ಬೌಂಡರಿ 4 ಸಿಕ್ಸರ್ ಸಹಿತ 103 ರನ್ ಬಾರಿಸಿ ತಂಡವನ್ನು ಗುರಿ ಸೇರಿಸುವಲ್ಲಿ ಪ್ರಮುಖ ಪಾತ್ರವಹಿಸಿದರು. ಅವರಿಗೆ ಜೊತೆಯಾಟ ನೀಡಿದ್ದ ಶ್ರೇಯಸ್ ಐಯ್ಯರ್ 19 ರನ್ ಗಳಿಸಿ ಔಟ್ ಆದರೆ ಬಳಿಕ ಬ್ಯಾಟಿಂಗ್ ಬಂದ ಕೆಎಲ್ ರಾಹುಲ್ 34 ರನ್ ಬಾರಿಸಿದರು.

ಬಾಂಗ್ಲಾ ದೇಶ ಪರ ಮೆಹದಿ ಹಸನ್ 2 ವಿಕೆಟ್ ಪಡೆದರೆ ಹಸನ್ ಮಹ್ಮುದ್ ಒಂದು ವಿಕೆಟ್ ಕಬಳಿಸಿದರು.

ಭಾರತದ ವಿರುದ್ಧ ಟಾಸ್ ಗೆದ್ದು ಬಾಂಗ್ಲಾದೇಶ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಬ್ಯಾಟಿಂಗ್ ಗೆ ಬಂದ ಬಾಂಗ್ಲಾ ಬ್ಯಾಟರ್ಸ್ ಭಾರತೀಯ ಬೌಲರ್ ಗಳ ಮೇಲೆ ಸವಾರಿ ಮಾಡಿ ಪರಸ್ಪರ ಅರ್ಧಶಕ ಬಾರಿಸಿದರು. ತಂಝೀದ್ ಅಹ್ಮದ್ 51 ಬಾರಿಸಿ ಕುಲದೀಪ್ ಯಾದವ್ ಗೆ ಎಲ್ ಬಿಡಬ್ಲೂ ಆಗುದರೊಂದಿಗೆ ಬಾಂಗ್ಲಾ ಮೊದಲ ವಿಕೆಟ್ ಕಳೆದುಕೊಡಿತು. ಲಿಟನ್ ದಾಸ್ 7 ಬೌಂಡರಿ ಸಹಿತ 66ರನ್ ಬಾರಿದರು. ಬಳಿಕ ಬ್ಯಾಟ್ ಬೀಸಿದ ನಾಯಕ ಹುಸೈನ್ ಶಾಂಟೋ 8 ರನ್ ಗೆ ಜಡೇಜಾ ಬೌಲಿಂಗ್ ನಲ್ಲಿ ಎಲ್ ಬಿಡಬ್ಲೂ ಆದರೆ ಮೆಹದಿ ಹಸನ್ 3 ರನ್ ಗೆ ಸಿರಾಜ್ ಗೆ ವಿಕೆಟ್ ಒಪ್ಪಿದರು. ತೌಹೀದ್ ಹೃದೊಯ್ 16 ರನ್ ಗೆ ಬಾರಿಸಿ ಶಾರ್ದೂಲ್ ಬೌಲಿಂಗ್ ನಲ್ಲಿ ಔಟ್ ಆದರು. ಭಾರತೀಯ ಬೌಲರ್ ಗಳ ಲಯ ಅರಿತು ಬ್ಯಾಟ್ ಬೀಸುತ್ತಿದ್ದ ಮುಷ್ಫಿಕುರ್ ರಹೀಂ 38 ರನ್ ಗಳಿಸಿರುವಾಗ ಬೂಮ್ರ ಓವರ್ ನಲ್ಲಿ ವಿಕೆಟ್ ಕಳೆದುಕೊಂಡರು. ಜವಬ್ದಾರಿಯುತ ಬ್ಯಾಟಿಂಗ್ ಮಾಡಿದ ಮಾಜಿ ನಾಯಕ ಮಹಮದುಲ್ಲ 46 ರನ್ ಬಾರಿಸಿ ತಂಡದ ಮೊತ್ತ ಹೆಚ್ಚಿಸಿ,ವಿಕೆಟ್ ಒಪ್ಪಿಸಿದರು. ಮುಸ್ತಫಿಝುರ್ರಹ್ಮಾನ್ 1 ರನ್, ಶರೀಫುಲ್ ಇಸ್ಲಾಂ 7 ರನ್ ಗಳಿಸಿದರು.

ಭಾರತದ ಪರ ಮುಹಮ್ಮದ್ ಸಿರಾಜ್, ರವೀಂದ್ರ ಜಡೇಜಾ, ಜಸ್ಪ್ರೀತ್ ಬೂಮ್ರಾ 2 ವಿಕೆಟ್ ಪಡೆದರೆ, ಕುಲದೀಪ್ ಯಾದವ್, ಶಾರ್ದುಲ್ ಠಾಕೂರ್ 1 ವಿಕೆಟ್ ಪಡೆದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News