ಚುನಾವಣೆ ಇದ್ದರೂ ಐಪಿಎಲ್ ಭಾರತದಲ್ಲೇ?

Update: 2024-01-10 16:00 GMT

ಹೊಸದಿಲ್ಲಿ: ಲೋಕಸಭಾ ಚುನಾವಣೆ ನಡೆಯುವ ಹೊರತಾಗಿಯೂ 2024ರ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಭಾರತದಲ್ಲೇ ನಡೆಯುವ ನಿರೀಕ್ಷೆಯಿದೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಯ ಮೂಲವೊಂದು ತಿಳಿಸಿದೆ.

ಐಪಿಎಲ್ ಮಾರ್ಚ್ 22ರಂದು ಆರಂಭಗೊಳ್ಳುವ ನಿರೀಕ್ಷೆಯಿದೆ. ಸುಮಾರು ಅದೇ ಸಮಯದಲ್ಲಿ ಚುನಾವಣಾ ದಿನಾಂಕಗಳ ಘೋಷಣೆಯಾಗುವ ಸಾಧ್ಯತೆಯೂ ಇದೆ.

ಆದಾಗ್ಯೂ, ಇಂಡಿಯನ್ ಪ್ರೀಮಿಯರ್ ಲೀಗ್ ಭಾರತದಲ್ಲೇ ನಡೆಯುವುದು ಎಂದು ವಿಶ್ವಾಸಾರ್ಹ ಬಿಸಿಸಿಐ ಮೂಲವೊಂದು ಖಚಿತಪಡಿಸಿದೆ ಎಂದು ಎಎನ್ಐ ವರದಿ ಮಾಡಿದೆ.

‘‘ಲೋಕಸಭಾ ಚುನಾವಣೆಯೂ ಅದೇ ಸಮಯದಲ್ಲಿ ನಡೆಯಲಿರುವುದರಿಂದ ದೇಶಿ ಕ್ರಿಕೆಟ್ ಪಂದ್ಯಾವಳಿಯನ್ನು ದೇಶದ ಹೊರಗಡೆ ವರ್ಗಾಯಿಸುವ ಯೋಜನೆಯಿಲ್ಲ. ಆ ಸಮಯದಲ್ಲಿ ಪಂದ್ಯಗಳನ್ನು ಏರ್ಪಡಿಸಲು ಯಾವುದಾದರೂ ರಾಜ್ಯಕ್ಕೆ ಸಕಾರಣಗಳಿದ್ದರೆ, ಪಂದ್ಯಗಳನ್ನು ಇನ್ನೊಂದು ರಾಜ್ಯಕ್ಕೆ ವರ್ಗಾಯಿಸಲಾಗುವುದು’’ ಎಂದು ಬಿಸಿಸಿಐ ಮೂಲ ತಿಳಿಸಿದೆ.

ಆಟಗಾರರ ಹರಾಜು ಕಳೆದ ತಿಂಗಳು ದುಬೈಯಲ್ಲಿ ನಡೆದಿದೆ. ಬಳಿಕ, ತಂಡಗಳನ್ನು ಅಂತಿಮಗೊಳಿಸಲಾಗಿದೆ.

ಕಳೆದ ಋತುವಿನಲ್ಲಿ ಮಹೇಂದ್ರ ಸಿಂಗ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ಪ್ರಶಸ್ತಿ ಗೆದ್ದಿದೆ. ಈ ಬಾರಿ ಪ್ರಶಸ್ತಿ ಉಳಿಸಿಕೊಳ್ಳುವುದನ್ನು ಅದು ಎದುರು ನೋಡುತ್ತಿದೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News