ಐಪಿಎಲ್ 2024: ಡೆಲ್ಲಿ ಕ್ಯಾಪಿಟಲ್ಸ್ ನಾಯಕನಾಗಿ ರಿಷಭ್ ಪಂತ್ ನೇಮಕ

Update: 2024-03-20 16:25 GMT

ರಿಷಭ್ ಪಂತ್ | Photo: X 

ಹೊಸದಿಲ್ಲಿ: ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ ಗೆ  ರಿಷಭ್ ಪಂತ್ ರನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕರನ್ನಾಗಿ ನೇಮಿಸಲಾಗಿದೆ ಎಂದು ಫ್ರಾಂಚೈಸಿಯು ಮಂಗಳವಾರ ತಿಳಿಸಿದೆ.

ವಿಕೆಟ್ಕೀಪರ್-ಬ್ಯಾಟರ್ ಪಂತ್ 14 ತಿಂಗಳ ನಂತರ ವೃತ್ತಿಪರ ಕ್ರಿಕೆಟ್ ಗೆ ವಾಪಸಾಗಿದ್ದಾರೆ. ವಿಶಾಖಪಟ್ಟಣದ ವಿಝಾಗ್ ನಲ್ಲಿ ನಡೆದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪೂರ್ವ ತಯಾರಿ ಶಿಬಿರದಲ್ಲೂ ಭಾಗವಹಿಸಿದ್ದರು.

ರಿಷಭ್ರನ್ನು ನಮ್ಮ ನಾಯಕರನ್ನಾಗಿ ಸ್ವಾಗತಿಸುವುದಕ್ಕೆ ನಮಗೆ ಸಂತೋಷವಾಗುತ್ತಿದೆ. ಅವರು ನಮ್ಮ ತಂಡದೊಂದಿಗೆ ಆಡುವುದನ್ನು ನೋಡಲು ಉತ್ಸುಕನಾಗಿದ್ದೇನೆ ಎಂದು ಡೆಲ್ಲಿ ಕ್ಯಾಪಿಟಲ್ಸ್ ಮುಖ್ಯಸ್ಥ ಹಾಗೂ ಸಹ ಮಾಲಿಕ ಪಾರ್ಥ್ ಜಿಂದಾಲ್ ಹೇಳಿದ್ದಾರೆ.

ತನ್ನ ಜೀವನದ ಅತ್ಯಂತ ಸವಾಲಿನ ಹಂತದಲ್ಲಿ ರಿಷಭ್ ಕಠಿಣ ಶ್ರಮಪಟ್ಟಿದ್ದಾರೆ. ಸಹ ಆಟಗಾರರು ಅವರಿಂದ ಸ್ಪೂರ್ತಿ ಪಡೆಯುವುದರಲ್ಲಿ ಅನುಮಾನವಿಲ್ಲ, ನಾಯಕ ರಿಷಭ್ ಹಾಗೂ ಅವರ ತಂಡಕ್ಕೆ ಶುಭಾಶಯಗಳು ಎಂದು ತಂಡದ ಸಹ ಮಾಲಕ ಕಿರಣ್ ಕುಮಾರ್ ಗಾಂಧಿ ಹೇಳಿದ್ದಾರೆ.

ಡೆಲ್ಲಿ ಕ್ಯಾಪಿಟಲ್ಸ್ ಮಾರ್ಚ್ 23ರಂದು ಚಂಡಿಗಡದಲ್ಲಿ ಈ ವರ್ಷದ ಐಪಿಎಲ್ ನ ಮೊದಲ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಎದುರಿಸಲಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News