ಐಪಿಎಲ್ ಹರಾಜು: ದಾಖಲೆಯ ಮೊತ್ತಕ್ಕೆ ಹರಾಜಾದ ಆಸ್ಟ್ರೇಲಿಯದ ಮಿಚೆಲ್ ಸ್ಟಾರ್ಕ್, ಪ್ಯಾಟ್ ಕಮಿನ್ಸ್

Update: 2023-12-19 17:30 GMT

ಮಿಚೆಲ್ ಸ್ಟಾರ್ಕ್, ಪ್ಯಾಟ್ ಕಮಿನ್ಸ್ | Photo: NDTV 

ದುಬೈ: ಆಸ್ಟ್ರೇಲಿಯದ ವೇಗದ ಬೌಲರ್ ಮಿಚೆಲ್ ಸ್ಟಾರ್ಕ್ ಮಂಗಳವಾರ 24.75 ಕೋಟಿ ರೂ.ಗೆ ಕೋಲ್ಕತಾ ನೈಟ್ ರೈಡರ್ಸ್(ಕೆಕೆಆರ್) ತಂಡದ ತೆಕ್ಕೆಗೆ ಸೇರುವ ಮೂಲಕ ಐಪಿಎಲ್ ಹರಾಜು ದಾಖಲೆಗಳನ್ನು ಪುಡಿಗಟ್ಟಿದರು.

ಇದೇ ಮೊದಲ ಬಾರಿ ಭಾರತದಿಂದ ಹೊರಗೆ(ದುಬೈನಲ್ಲಿ)ನಡೆಯುತ್ತಿರುವ ಹರಾಜು ಪ್ರಕ್ರಿಯೆಯಲ್ಲಿ ಇತ್ತೀಚೆಗೆ ಏಕದಿನ ವಿಶ್ವಕಪ್ ಪ್ರಶಸ್ತಿ ವಿಜೇತ ಆಸ್ಟ್ರೇಲಿಯ ತಂಡದ ನಾಯಕ ಪ್ಯಾಟ್ ಕಮಿನ್ಸ್ ದಾಖಲೆಯ ಮೊತ್ತ ಜೇಬಿಗಿಳಿಸಿಕೊಂಡಿದ್ದಾರೆ.

33ರ ಹರೆಯದ ಸ್ಟಾರ್ಕ್ 8 ವರ್ಷಗಳ ವಿರಾಮದ ನಂತರ ಐಪಿಎಲ್ ಗೆ ಪುನರಾಗಮನ ಮಾಡಿದ್ದಾರೆ. ಈ ಹಿಂದೆ ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಪ್ರತಿನಿಧಿಸಿದ್ದರು. ಸ್ಟಾರ್ಕ್ ಅವರು ಸಹ ಆಟಗಾರ ಹಾಗೂ ವಿಶ್ವಕಪ್ ವಿಜೇತ ನಾಯಕ ಪ್ಯಾಟ್ ಕಮಿನ್ಸ್ರನ್ನು ಹಿಂದಿಕ್ಕಿ ದೊಡ್ಡ ಮೊತ್ತಕ್ಕೆ ಹರಾಜಾದರು. ಕಮಿನ್ಸ್ 20.50 ಕೋಟಿ ರೂ. ಮೊತ್ತಕ್ಕೆ ಸನ್ರೈಸರ್ಸ್ ಹೈದರಾಬಾದ್ ತಂಡದ ಪಾಲಾದರು.

ಐಪಿಎಲ್ ಹರಾಜಿನಲ್ಲಿ ರಾಜಸ್ಥಾನ ರಾಯಲ್ಸ್ ತಂಡ ವೆಸ್ಟ್ಇಂಡೀಸ್ ನ ಪವರ್ ಹಿಟ್ಟರ್ ರೋವ್ಮನ್ ಪೊವೆಲ್ರನ್ನು 7.40 ಕೋಟಿ ರೂ.ಗೆ ಖರೀದಿಸಿತು. ಮೂಲ ಬೆಲೆ 1 ಕೋಟಿ ರೂ. ಹೊಂದಿದ್ದ ಪೊವೆಲ್ರನ್ನು ಡೆಲ್ಲಿ ಕ್ಯಾಪಿಟಲ್ಸ್ ಬಿಡುಗಡೆ ಮಾಡಿತ್ತು. ಇದೀಗ ಪೊವೆಲ್ ಅವರ ಅದೃಷ್ಟ ಖುಲಾಯಿಸಿದೆ.

ಕಳೆದ ವರ್ಷದ ಹರಾಜಿನಲ್ಲಿ 13.25 ಕೋಟಿ ರೂ.ಗೆ ಹೈದರಾಬಾದ್ ತಂಡಕ್ಕೆ ಹರಾಜಾಗಿದ್ದ ಇಂಗ್ಲೆಂಡ್‌ ನ ಹ್ಯಾರಿ ಬ್ರೂಕ್ ಈ ಬಾರಿ ಡೆಲ್ಲಿ ಕ್ಯಾಪಿಟಲ್ಸ್ ತಂಡ 4 ಕೋಟಿ ರೂ.ಗೆ ಖರೀದಿಸಿದೆ.

ಆಸ್ಟ್ರೇಲಿಯದ ವಿಶ್ವಕಪ್ ಫೈನಲ್ ಹೀರೊ ಟ್ರಾವಿಸ್ ಹೆಡ್ ಸನ್ರೈಸರ್ಸ್ ಹೈದರಾಬಾದ್ ತಂಡಕ್ಕೆ 6.8 ಕೋಟಿ ರೂ.ಗೆ ಬಿಕರಿಯಾದರು.

ನ್ಯೂಝಿಲ್ಯಾಂಡ್‌ ನ ರಚಿನ್ ರವೀಂದ್ರರನ್ನು ತಮ್ಮ ತೆಕ್ಕೆಗೆ ಸೇರಿಸಿಕೊಳ್ಳಲು ಪಂಜಾಬ್ ಕಿಂಗ್ಸ್, ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಪ್ರಯತ್ನಿಸಿದವು. ಆದರೆ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಆಲ್ರೌಂಡರ್ ರವೀಂದ್ರರನ್ನು 1.8 ಕೋಟಿ ರೂ.ಗೆ ತನ್ನ ವಶಕ್ಕೆ ಪಡೆಯಿತು. ಚೆನ್ನೈ ತಂಡವು ಕಿವೀಸ್ ನ ಇನ್ನೋರ್ವ ಆಲ್ರೌಂಡರ್ ಡ್ಯಾರಿಲ್ ಮಿಚೆಲ್ರನ್ನು 14 ಕೋಟಿ ರೂ.ಗೆ ಹಾಗೂ ಶಾರ್ದೂಲ್ ಠಾಕೂರ್ರನ್ನು 4 ಕೋಟಿ ರೂ.ಗೆ ಖರೀದಿಸಿತು.

ಪಂಜಾಬ್ ಕಿಂಗ್ಸ್ ತಂಡ ಹರ್ಷಲ್ ಪಟೇಲ್ರನ್ನು 11.75 ಕೋಟಿ ರೂ.ಗೆ ತನ್ನ ಸುಪರ್ದಿಗೆ ಪಡೆಯಿತು.

ಐಪಿಎಲ್ ಹರಾಜಿನಲ್ಲಿ ಮಾರಾಟಗೊಂಡ ಆಟಗಾರರ ಪಟ್ಟಿ

ಆಟಗಾರರು ದೇಶ ತಂಡಗಳು ಮೂಲ ಬೆಲೆ ಮಾರಾಟವಾದ ಬೆಲೆ

ರೋವ್ಮನ್ ಪೊವೆಲ್ ವೆಸ್ಟ್ಇಂಡೀಸ್ ರಾಜಸ್ಥಾನ 1 ಕೋಟಿ ರೂ. 7.40 ಕೋಟಿ ರೂ.

ಹ್ಯಾರಿ ಬ್ರೂಕ್ ಇಂಗ್ಲೆಂಡ್ ಡೆಲ್ಲಿ 2 ಕೋಟಿ ರೂ. 4.00 ಕೋಟಿ ರೂ.

ಟ್ರಾವಿಸ್ ಹೆಡ್ ಆಸ್ಟ್ರೇಲಿಯ ಹೈದರಾಬಾದ್ 2 ಕೋಟಿ ರೂ. 6.80 ಕೋಟಿ ರೂ.

ವನಿಂದು ಹಸರಂಗ ಶ್ರೀಲಂಕಾ ಹೈದರಾಬಾದ್ 1.50 ಕೋಟಿ ರೂ. 1.50 ಕೋಟಿ ರೂ.

ರಚಿನ್ ರವೀಂದ್ರ ನ್ಯೂಝಿಲ್ಯಾಂಡ್ ಸಿಎಸ್ಕೆ 50 ಲಕ್ಷ ರೂ. 1.80 ಕೋಟಿ ರೂ.

ಶಾರ್ದೂಲ್ ಠಾಕೂರ್ ಭಾರತ ಸಿಎಸ್ಕೆ 2 ಕೋಟಿ ರೂ. 4.00 ಕೋಟಿ ರೂ.

ಅಝ್ಮತುಲ್ಲಾ ಒಮರ್ಝೈ ಅಫ್ಘಾನಿಸ್ತಾನ ಗುಜರಾತ್ 50 ಲಕ್ಷ ರೂ. 50 ಲಕ್ಷ ರೂ.

ಪ್ಯಾಟ್ ಕಮಿನ್ಸ್ ಆಸ್ಟ್ರೇಲಿಯ ಹೈದರಾಬಾದ್ 2 ಕೋಟಿ ರೂ. 20.50 ಕೋಟಿ ರೂ.

ಜೆರಾಲ್ಡ್ ಕೊಯೆಟ್ಝಿ ದ.ಆಫ್ರಿಕಾ ಮುಂಬೈ 2 ಕೋಟಿ ರೂ. 5 ಕೋಟಿ ರೂ.

ಹರ್ಷಲ್ ಪಟೇಲ್ ಭಾರತ ಪಂಜಾಬ್ 2 ಕೋಟಿ ರೂ. 11.75 ಕೋಟಿ ರೂ.

ಡ್ಯಾರಿಲ್ ಮಿಚೆಲ್ ನ್ಯೂಝಿಲ್ಯಾಂಡ್ ಸಿಎಸ್ಕೆ 1 ಕೋಟಿ ರೂ. 14.00 ಕೋಟಿ ರೂ.

ಕ್ರಿಸ್ ವೋಕ್ಸ್ ಇಂಗ್ಲೆಂಡ್ ಪಂಜಾಬ್ 2 ಕೋಟಿ ರೂ. 4.20 ಕೋಟಿ ರೂ.

ಕ್ರಿಸ್ಟಾನ್ ಸ್ಟಬ್ಸ್ ದ.ಆಫ್ರಿಕಾ ಡೆಲ್ಲಿ 50 ಲಕ್ಷ ರೂ. 50 ಲಕ್ಷ ರೂ.

ಕೆ.ಎಸ್.ಭರತ್ ಭಾರತ ಕೆಕೆಆರ್ 50 ಲಕ್ಷ ರೂ. 50 ಲಕ್ಷ ರೂ.

ಚೇತನ್ ಸಕಾರಿಯ ಭಾರತ ಕೆಕೆಆರ್ 50 ಲಕ್ಷ ರೂ. 50 ಲಕ್ಷ ರೂ.

ಅಲ್ಝಾರಿ ಜೋಸೆಫ್ ವಿಂಡೀಸ್ ಆರ್ಸಿಬಿ 1 ಕೋಟಿ ರೂ. 11.50 ಕೋಟಿ ರೂ.

ಉಮೇಶ್ ಯಾದವ್ ಭಾರತ ಗುಜರಾತ್ 2 ಕೋಟಿ ರೂ. 5.80 ಕೋಟಿ ರೂ.

ಶಿವಂ ಮಾವಿ ಭಾರತ ಲಕ್ನೊ 50 ಲಕ್ಷ ರೂ. 6.40 ಕೋಟಿ ರೂ.

ಮಿಚೆಲ್ ಸ್ಟಾರ್ಕ್ ಆಸ್ಟ್ರೇಲಿಯ ಕೆಕೆಆರ್ 2 ಕೋಟಿ ರೂ. 24.75 ಕೋಟಿ ರೂ.

ಉನದ್ಕಟ್ ಭಾರತ ಹೈದರಾಬಾದ್ 50 ಲಕ್ಷ ರೂ. 1.60 ಕೋಟಿ ರೂ.

ಮದುಶಂಕ ಶ್ರೀಲಂಕಾ ಮುಂಬೈ 50 ಲಕ್ಷ ರೂ. 4.60 ಕೋಟಿ ರೂ.

ಸಮೀರ್ ರಿಝ್ವಿ ಭಾರತ ಸಿಎಸ್ಕೆ 20 ಲಕ್ಷ ರೂ. 8.40 ಕೋಟಿ ರೂ.

ಶಾರೂಖ್ ಖಾನ್ ಭಾರತ ಗುಜರಾತ್ 40 ಲಕ್ಷ ರೂ. 7.40 ಕೋಟಿ ರೂ.

ಕುಮಾರ ಕುಶಾಗ್ರ ಭಾರತ ಡೆಲ್ಲಿ 20 ಲಕ್ಷ ರೂ. 7.20 ಕೋಟಿ ರೂ.

ಯಶ್ ದಯಾಳ್ ಭಾರತ ಆರ್ಸಿಬಿ 20 ಲಕ್ಷ ರೂ. 5 ಕೋಟಿ ರೂ.

ಶ್ರೇಯಸ್ ಗೋಪಾಲ್ ಭಾರತ ಮುಂಬೈ 20 ಲಕ್ಷ ರೂ. 20 ಕೋಟಿ ರೂ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News