ಭಾರತದ ಜಾವೆಲಿನ್ ಥ್ರೋ ತಾರೆ ನೀರಜ್ ಚೋಪ್ರಾಗೆ ಶೀಘ್ರದಲ್ಲೇ ಶಸ್ತ್ರಚಿಕಿತ್ಸೆ

Update: 2024-08-10 16:18 GMT

ನೀರಜ್ ಚೋಪ್ರಾ |  PTI 

ಪ್ಯಾರಿಸ್ : ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಜಾವೆಲಿನ್ ಎಸೆತದಲ್ಲಿ ಬೆಳ್ಳಿ ಪದಕ ಜಯಿಸಿರುವ ಭಾರತದ ಜಾವೆಲಿನ್ ಥ್ರೋ ತಾರೆ ಶೀಘ್ರದಲ್ಲೇ ಶಸ್ತ್ರಚಿಕಿತ್ಸೆಗೆ ಒಳಗಾಗಲು ಮುಂದಾಗಿದ್ದಾರೆ. ಈ ವಿಚಾರವನ್ನು ಅವರೇ ಹೇಳಿದ್ದಾರೆ.

ತಾನು ತೊಡೆಯ ಸ್ನಾಯುಗಳಿಗೆ ಸಂಬಂಧಿಸಿದ ತೀವ್ರ ಸಮಸ್ಯೆಯನ್ನು ಎದುರಿಸುತ್ತಿದ್ದು ಶೀಘ್ರದಲ್ಲೇ ಶಸ್ತ್ರಚಿಕಿತ್ಸೆಗೆ ಒಳಗಾಗಬಹುದು ಎಂದು ಚೋಪ್ರಾ ಹೇಳಿದ್ದಾರೆ.

ನನ್ನ ಮನಸ್ಸಿನಲ್ಲಿ ಬಹಳಷ್ಟು ಇದೆ. ನಾನು ಜಾವೆಲಿನ್ ಎಸೆಯುವಾಗ ಶೇ.60-70ರಷ್ಟು ನನ್ನ ಗಮನ ಗಾಯದ ನೋವಿನ ಮೇಲೆ ಇರುತ್ತಿತ್ತು. ನಾನು ಗಾಯಗೊಳ್ಳಲು ಬಯಸುವುದಿಲ್ಲ. ನಾನು ಜಾವೆಲಿನ್ ಎಸೆಯಲು ಹೋದಾಗಲೆಲ್ಲಾ ನನ್ನ ವೇಗವು ಕಡಿಮೆಯಾಗಿರುವುದನ್ನು ನೀವು ನೋಡಿದ್ದೀರಿ ಎಂದು ಅವರು ತಿಳಿಸಿದ್ದಾರೆ.

ಶಸ್ತ್ರಚಿಕಿತ್ಸೆಗೆ ಒಳಗಾಗಲು ವೈದ್ಯರು ನನಗೆ ಸಲಹೆ ನೀಡಿದ್ದರು. ಆದರೆ ನನ್ನ ಶಸ್ತ್ರಚಿಕಿತ್ಸೆಯನ್ನು ಇನ್ನೂ ಮುಂದೂಡುತ್ತಲೇ ಇದ್ದೇನೆ. ಇದು ಒಳ್ಳೆಯ ಬೆಳವಣಿಗೆಯಲ್ಲ. ಕ್ರೀಡೆಯಲ್ಲಿ ಸುದೀರ್ಘವಾಗಿ ಮುಂದುವರಿಯಲು ಫಿಟ್ ಹಾಗೂ ಆರೋಗ್ಯಕರವಾಗಿರಬೇಕು. ಆದರೆ ನಾವು ನಿರ್ಧಾರ ಕೈಗೊಳ್ಳಲು ಸಾಧ್ಯವಾಗದಷ್ಟು ಸ್ಪರ್ಧೆಗಳಿದ್ದವು. ಈಗ ಸಮಯ ಬಂದಿದೆ. ನಮ್ಮ ತಂಡದೊಂದಿಗೆ ಮಾತನಾಡಿ ನಂತರ ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದು ಚೋಪ್ರಾ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News