ಮ್ಯಾಚ್ ವಿನ್ನಿಂಗ್ ಸೆಂಚುರಿ: ರಿಕಿ ಪಾಂಟಿಂಗ್ ದಾಖಲೆ ಸರಿಗಟ್ಟಲು ಕೊಹ್ಲಿಗೆ ಇನ್ನೊಂದು ಶತಕ ಅಗತ್ಯ

Update: 2023-10-25 17:01 GMT

File Photo

ಹೊಸದಿಲ್ಲಿ : ವಿರಾಟ್ ಕೊಹ್ಲಿ ಬ್ಯಾಟ್ನಲ್ಲಿ ಶ್ರೇಷ್ಠ ಆಧುನಿಕ ಮ್ಯಾಚ್ ವಿನ್ನರ್ ಎನ್ನುವುದರಲ್ಲಿ ಸಂಶಯವೇ ಇಲ್ಲ. ತಂಡದ ಗೆಲುವಿಗಾಗಿ ಗಳಿಸಿರುವ ಅಂತರ್ರಾಷ್ಟ್ರೀಯ ಶತಕಗಳ ಸಂಖ್ಯೆಯಲ್ಲಿ ಆಸ್ಟ್ರೇಲಿಯದ ಮಾಜಿ ನಾಯಕ ರಿಕಿ ಪಾಂಟಿಂಗ್ ದಾಖಲೆಯನ್ನು ಸರಿಗಟ್ಟಲು ಭಾರತದ ಬ್ಯಾಟಿಂಗ್ ಐಕಾನ್ಗೆ ಇನ್ನೊಂದು ಶತಕದ ಅಗತ್ಯವಿದೆ.

ಈಗ ನಡೆಯುತ್ತಿರುವ ಐಸಿಸಿ ವಿಶ್ವಕಪ್ನಲ್ಲಿ ಬಾಂಗ್ಲಾದೇಶ ವಿರುದ್ಧ ಭಾರತ ಆಡಿರುವ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಗಳಿಸಿದ ಶತಕವು ತಂಡಕ್ಕೆ ಗೆಲುವು ತಂದುಕೊಟ್ಟಿತ್ತು. ಇದು ಕೊಹ್ಲಿ ಅವರ 48ನೇ ಏಕದಿನ ಶತಕವಾಗಿತ್ತು. ಎಲ್ಲ ಮಾದರಿಯ ಅಂತರ್ರಾಷ್ಟ್ರೀಯ ಕ್ರಿಕೆಟ್ನಲ್ಲಿ 78ನೇ ಶತಕ ಸಿಡಿಸಿದ ಸಾಧನೆ ಮಾಡಿದರು.

ವಿರಾಟ್ ಕೊಹ್ಲಿ ಒಟ್ಟು 48 ಏಕದಿನ ಶತಕಗಳಲ್ಲಿ 40 ಶತಕಗಳನ್ನು ಭಾರತ ಗೆದ್ದಿರುವ ಪಂದ್ಯಗಳಲ್ಲಿ ಗಳಿಸಿದ್ದರು.

ಕೊಹ್ಲಿ ಗಳಿಸಿರುವ 78 ಅಂತರ್ರಾಷ್ಟ್ರೀಯ ಶತಕಗಳಲ್ಲಿ ಭಾರತವು 54ರಲ್ಲಿ ಗೆಲುವು ದಾಖಲಿಸಿದೆ. ರಿಕಿ ಪಾಂಟಿಂಗ್ ಗಳಿಸಿರುವ 71 ಇಂಟರ್ನ್ಯಾಶನಲ್ ಶತಕಗಳಲ್ಲಿ ಆಸ್ಟ್ರೇಲಿಯವು 55 ಬಾರಿ ಗೆಲುವು ದಾಖಲಿಸಿ ದಾಖಲೆ ನಿರ್ಮಿಸಿದೆ.

ಸಚಿನ್ ತೆಂಡುಲ್ಕರ್ ಗಳಿಸಿರುವ 100 ಅಂತರ್ರಾಷ್ಟ್ರೀಯ ಶತಕಗಳಲ್ಲಿ 53 ಪಂದ್ಯಗಳಲ್ಲಿ ಭಾರತ ಜಯ ಸಾಧಿಸಿತ್ತು.

ಈಗ ನಡೆಯುತ್ತಿರುವ ವಿಶ್ವಕಪ್ನಲ್ಲಿ ಕೊಹ್ಲಿ 5 ಪಂದ್ಯಗಳಲ್ಲಿ ಒಟ್ಟು 354 ರನ್ ಗಳಿಸಿ ಗರಿಷ್ಠ ರನ್ ಸ್ಕೋರರ್ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದಾರೆ. ದಕ್ಷಿಣ ಆಫ್ರಿಕಾದ ಕ್ವಿಂಟನ್ ಡಿಕಾಕ್(5 ಪಂದ್ಯಗಳು, 407 ರನ್)ಮೊದಲ ಸ್ಥಾನದಲ್ಲಿದ್ದಾರೆ. ಭಾರತದ ನಾಯಕ ರೋಹಿತ್ ಶರ್ಮಾ ಒಟ್ಟು 311 ರನ್ ಗಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News