ದಕ್ಷಿಣ ಆಫ್ರಿಕಾವನ್ನು ಕಾಪಾಡಿದ ಮಿಲ್ಲರ್ ಶತಕ, ಆಸೀಸ್‌ಗೆ 213 ರನ್ ಗುರಿ
ಕೋಲ್ಕತಾ: ಇಲ್ಲಿನ ಈಡೆನ್ ಗಾರ್ಡನ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಐಸಿಸಿ ಏಕದಿನ ಕ್ರಿಕೆಟ್ ಟೂರ್ನಿಯ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯ ತಂಡಗಳ ಪಂದ್ಯಕ್ಕೆ ಮಳೆ ಅಡ್ಡಿಯಾಯಿತು. ಮಳೆ ವಿರಾಮದ ಬಳಿಕ ಪಂದ್ಯ ಆರಂಭವಾದ ಬಳಿಕ ದಕ್ಷಿಣ ಆಪ್ರಿಕಾ ತಂಡ, ಆಸ್ಟ್ರೇಲಿಯಾ ಗೆಲುವಿಗೆ 213 ರನ್ ಗಳ ಸ್ಪರ್ಧಾತ್ಮಕ ಮೊತ್ತದ ಗುರಿ ನೀಡಿದೆ. ತೀರಾ ಹಿನ್ನಡೆ ಅನುಭವಿಸಿದ್ದ ದಕ್ಷಿಣ ಆಫ್ರಿಕಾ ತಂಡ ಅಲ್ಪ ಮೊತ್ತಕ್ಕೆ ಕುಸಿಯುವುದನ್ನು ಡೇವಿಡ್ ಮಿಲ್ಲರ್ ಶತಕ ತಡೆಯಿತು.
ಆಸೀಸ್ ವಿರುದ್ಧ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದ್ದ ದಕ್ಷಿಣ ಆಫ್ರಿಕಾ ಅಕ್ಷರಶಃ ಬ್ಯಾಟಿಂಗ್ ವೈಫಲ್ಯ ಅನುಭವಿಸಿತು. ಓಪನರ್ ಗಳಾದ ತೆಂಬ ಬವುಮ ಶೂನ್ಯಕ್ಕೆ ಹೇಝಲ್ ವುಡ್ಎಸೆತದಲ್ಲಿ ಮೊದಲ ಓವರ್ ನಲ್ಲಿಯೇ ವಿಕೆಟ್ ಕಳೆದುಕೊಂಡರು. ಕ್ವಿಂಟನ್ ಡಿಕಾಕ್ ಕೇವಲ 3 ರನ್ ಗಳಿಸಿ ಮಿಚೆಲ್ ಸ್ಟಾರ್ಕ್ ಬೌಲಿಂಗ್ ನಲ್ಲಿ ಔಟ್ ಆದರು.
ಮೂರನೇ ಕ್ರಮಾಂಕ ದಲ್ಲಿ ಬ್ಯಾಟಿಂಗ್ ಬಂದ ವಾನ್ ಡರ್ ಡುಸ್ಸನ್ 6 ರನ್ ಪೇರಿಸಿದರೆ, ಐಡೆನ್ ಮಾರ್ಕ್ರಾಮ್ 10 ರನ್ ಗಳಿಸಿ ಕ್ರಮವಾಗಿ ಹೇಝಲ್ ವುಡ್ ಹಾಗೂ ಸ್ಟಾರ್ಕ್ ಬೌಲಿಂಗ್ ನಲ್ಲಿ ಪೆವಿಲಿಯನ್ ಸೇರಿಕೊಂಡರು. ದಕ್ಷಿಣ ಆಫ್ರಿಕಾ 11.5 ಓವರ್ ಓಳಗಡೆಯೇ ತನ್ನ ಬ್ಯಾಟಿಂಗ್ ಶಕ್ತಿಯಾಕಿದ್ದ ಪ್ರಮುಖ 4 ಬ್ಯಾಟರ್ ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಸಂದರ್ಭ ಕೆಚ್ಚದೆಯ ಬ್ಯಾಟಿಂಗ್ ಡೇವಿಡ್ ಮಿಲ್ಲರ್ ಪ್ರದರ್ಶಿಸಿದರು.
ಮೂರನೇ ಕ್ರಮಾಂಕ ದಲ್ಲಿ ಬ್ಯಾಟಿಂಗ್ ಬಂದ ವಾನ್ ಡರ್ ಡುಸ್ಸನ್ 6 ರನ್ ಪೇರಿಸಿದರೆ, ಐಡೆನ್ ಮಾರ್ಕ್ರಾಮ್ 10 ರನ್ ಗಳಿಸಿ ಕ್ರಮವಾಗಿ ಹೇಝಲ್ ವುಡ್ ಹಾಗೂ ಸ್ಟಾರ್ಕ್ ಬೌಲಿಂಗ್ ನಲ್ಲಿ ಪೆವಿಲಿಯನ್ ಸೇರಿಕೊಂಡರು. ದಕ್ಷಿಣ ಆಫ್ರಿಕಾ 11.5 ಓವರ್ ಓಳಗಡೆಯೇ ತನ್ನ ಬ್ಯಾಟಿಂಗ್ ಶಕ್ತಿಯಾಕಿದ್ದ ಪ್ರಮುಖ 4 ಬ್ಯಾಟರ್ ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಸಂದರ್ಭ ಕೆಚ್ಚದೆಯ ಬ್ಯಾಟಿಂಗ್ ಡೇವಿಡ್ ಮಿಲ್ಲರ್ ಪ್ರದರ್ಶಿಸಿದರು. 116 ಎಸೆತ ಎದುರಿಸಿದ ಮಿಲ್ಲರ್ 8 ಬೌಂಡರಿ 5 ಸಿಕ್ಸರ್ ಸಹಿತ 101 ರನ್ ಪೇರಿಸಿ ಹರಿಣಗಳ ಸ್ಪರ್ಧಾತ್ಮಕ ಮೊತ್ತಕ್ಕೆ ರನ್ ಕೂಡಿಸಿದರು.
ಹೆನ್ರಿ ಕ್ಲಾಸನ್ 4 ಬೌಂಡರಿ 2 ಸಿಕ್ಸರ್ ಸಹಿತ 47 ರನ್ ಬಾರಿಸಿ ಹೆಡ್ ಎಸೆತದಲ್ಲಿ ಔಟ್ ಆಗುವ ಮೂಲಕ ಅರ್ಧಶತಕ ವಂಚಿತರಾದರು. ಮಾರ್ಕೊ ಜಾನ್ಸನ್ 0 ,ಜೆರಾಲ್ಡ್ 19 ,ಮಹರಾಜ್ 4 ರನ್ ಹಾಗೂ ಶಂಸಿ 1 ರನ್ ಗಳಿಸಿದರು. 49.4 ಓವರ್ ನಲ್ಲಿ ರಬಾಡ 10 ರನ್ ಗೆ ಪ್ಯಾಟ್ ಕಮ್ಮಿನ್ಸ್ ಬೌಲಿಂಗ್ ನಲ್ಲಿ ವಿಕೆಟ್ ಒಪ್ಪಿಸುವ ಮೂಲಕ ದಕ್ಷಿಣ ಆಫ್ರಿಕಾ 212 ರನ್ ಗೆ ಆಲೌಟ್ ಆಯಿತು.
ಆಸ್ಟ್ರೇಲಿಯ ಪರ ಮಿಚೆಲ್ ಸ್ಟಾರ್ಕ್ ಹಾಗೂ ಪ್ಯಾಟ್ ಕಮ್ಮಿನ್ಸ್ ತಲಾ ಮೂರು ವಿಕೆಟ್ ಪಡೆದರು. ಜೋಸ್ ಹೇಝಲ್ ವುಡ್, ಟ್ರಾವಿಸ್ ಹೆಡ್ ತಲಾ ಎರಡು ವಿಕೆಟ್ ಕಬಳಿಸಿದರು.