ಅದ್ಭುತ ಕ್ಯಾಚ್ ಹಿಡಿದ ಮುಹಮ್ಮದ್‌ ಸಿರಾಜ್; ಸಾಮಾಜಿಕ ಜಾಲತಾಣಗಳಲ್ಲಿ ಪ್ರಶಂಸೆ

Update: 2024-09-30 13:39 IST
ಅದ್ಭುತ ಕ್ಯಾಚ್ ಹಿಡಿದ ಮುಹಮ್ಮದ್‌ ಸಿರಾಜ್; ಸಾಮಾಜಿಕ ಜಾಲತಾಣಗಳಲ್ಲಿ ಪ್ರಶಂಸೆ

Photo: X/ BCCI

  • whatsapp icon

ಕಾನ್ಪುರ: ತಮ್ಮ ಬೌಲಿಂಗ್ ನಲ್ಲಿ ನಾಯಕ ರೋಹಿತ್ ಶರ್ಮ ಹಿಡಿದ ಅಮೋಘ ಕ್ಯಾಚ್ ನಿಂದ ಪ್ರೇರಣೆಗೊಂಡವರಂತೆ, ಆರ್.ಅಶ್ವಿನ್ ಬೌಲಿಂಗ್ ನಲ್ಲಿ ಶಕೀಬ್ ಅಲ್ ಹಸನ್ ಅವರು ಬಾರಿಸಿದ್ದ ಚೆಂಡನ್ನು ಮುಹಮ್ಮದ್ ಸಿರಾಜ್ ಅದ್ಭುತವಾಗಿ ಕ್ಯಾಚ್ ಹಿಡಿದು, ಪ್ರೇಕ್ಷಕರ ಮನಸೂರೆಗೊಂಡರು.

ಮೂರನೆ ದಿನ ಒಂದೂ ಎಸೆತ ಕಾಣದೆ ರದ್ದಾಗಿದ್ದ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಎರಡನೆ ಟೆಸ್ಟ್ ಪಂದ್ಯ ನಾಲ್ಕನೆಯ ದಿನದಾಟ ಇಂದು ಪ್ರಾರಂಭಗೊಂಡಿತು. ಪಂದ್ಯ ಪ್ರಾರಂಭಗೊಳ್ಳುತ್ತಿದ್ದಂತೆಯೆ ಬಾಂಗ್ಲಾದೇಶಕ್ಕೆ ಆಘಾತ ನೀಡಿದ ಜಸ್ಪ್ರೀತ್ ಬೂಮ್ರಾ, ಮುಷ್ಫಿಕುರ್ ರಹೀಮ್ ವಿಕೆಟ್ ಕಿತ್ತರು. ನಂತರ, ಮುಹಮ್ಮದ್ ಸಿರಾಜ್ ಬೌಲಿಂಗ್ ನಲ್ಲಿ ನಾಯಕ ರೋಹಿತ್ ಶರ್ಮ ಹಿಡಿದ ಅಮೋಘ ಕ್ಯಾಚ್ ಗೆ ಲಿಟನ್ ದಾಸ್ ನಿರ್ಗಮಿಸಿದರು.

ಇದಾದ ನಂತರ, ಆರ್. ಅಶ್ವಿನ್ ಬಾಲನ್ನು ಆಕಾಶದೆತ್ತರ ಸಿಕ್ಸರ್ ಗೆ ಸಿಡಿಸಿದ್ದ ಶಕೀಬ್ ಅಲ್ ಹಸನ್, ಮುಹಮ್ಮದ್ ಸಿರಾಜ್ ಅದ್ಭುತವಾಗಿ ಕ್ಯಾಚ್ ಹಿಡಿದಿದ್ದರಿಂದ ಪೆವಿಲಿಯನ್ ಗೆ ಮರಳಿದರು.

ಇತ್ತೀಚಿನ ವರದಿಗಳ ಪ್ರಕಾರ, ಭೋಜನ ವಿರಾಮದ ವೇಳೆಗೆ ಬಾಂಗ್ಲಾದೇಶ ತಂಡವು ಆರು ವಿಕೆಟ್ ನಷ್ಟಕ್ಕೆ 205 ರನ್ ಗಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News