ಕುಸ್ತಿಪಟು ವಿನೇಶ್ ಫೋಗಟ್ ಗೆ ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಸಂಸ್ಥೆ ನೋಟಿಸ್

Update: 2023-07-14 04:36 GMT

ಹೊಸದಿಲ್ಲಿ: ಡೋಪಿಂಗ್ ವಿರೋಧಿ ನಿಯಮಗಳ ಅಗತ್ಯತೆಗಳನ್ನು ಅನುಸರಿಸುವ ವಿಚಾರದಲ್ಲಿ "ಸ್ಪಷ್ಟ ವೈಫಲ್ಯ" ಕ್ಕಾಗಿ ಭಾರತೀಯ ಕುಸ್ತಿಪಟು ವಿನೇಶ್ ಫೋಗಟ್ ಅವರಿಗೆ ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಸಂಸ್ಥೆ ಗುರುವಾರ ನೋಟಿಸ್ ನೀಡಿದೆ. ನೋಟಿಸ್ ಗೆ ಪ್ರತಿಕ್ರಿಯಿಸಲು ಅವರಿಗೆ ಎರಡು ವಾರಗಳ ಕಾಲಾವಕಾಶ ನೀಡಿದೆ.

ಗಮನಾರ್ಹ ಸಂಗತಿಯೆಂದರೆ, ಕುಸ್ತಿ ಫೆಡರೇಶನ್ ಆಫ್ ಇಂಡಿಯಾ (ಡಬ್ಲ್ಯುಎಫ್ಐ) ಮುಖ್ಯಸ್ಥ ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಪ್ರತಿಭಟನೆ ನಡೆಸಿದ ಕುಸ್ತಿಪಟುಗಳಲ್ಲಿ ವಿನೇಶ್ ಕೂಡ ಸೇರಿದ್ದಾರೆ. ಬ್ರಿಜ್ ಭೂಷಣ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪಗಳನ್ನು ಮಾಡಲಾಗಿದೆ.

ಹಾಲಿ ಏಶ್ಯನ್ ಗೇಮ್ಸ್ ಚಾಂಪಿಯನ್ ಫೋಗಟ್ ಅವರು ಒಲಿಂಪಿಕ್ಸ್ ಡಾಟ್ ಕಾಮ್ ಪ್ರಕಾರ ಗುರುವಾರದಿಂದ ಆರಂಭವಾಗುವ ಬುಡಾಪೆಸ್ಟ್ ಶ್ರೇಯಾಂಕ ಸರಣಿ 2023 ನಲ್ಲಿ ಸ್ಪರ್ಧಾತ್ಮಕ ಕುಸ್ತಿಗೆ ಮರಳಲಿದ್ದಾರೆ.

ಎಡಿಆರ್ ನ ಅಗತ್ಯತೆಗಳನ್ನು ಅನುಸರಿಸಲು ನಿಮ್ಮ ಸ್ಪಷ್ಟವಾದ ವೈಫಲ್ಯದ ಬಗ್ಗೆ ನಿಮಗೆ ತಿಳಿಸಲು ಮತ್ತು ನಾವು ಈ ವಿಷಯದ ಕುರಿತು ಅಂತಿಮ ನಿರ್ಧಾರಕ್ಕೆ ಬರುವ ಮೊದಲು ಯಾವುದೇ ಕಾಮೆಂಟ್ ಗಳನ್ನು ಮಾಡಲು ನಿಮ್ಮನ್ನು ಆಹ್ವಾನಿಸಲು ಔಪಚಾರಿಕ ಸೂಚನೆ ನೀಡುತ್ತಿದ್ದೇವೆ. ದಯವಿಟ್ಟು ಈ ಪತ್ರವನ್ನು ಎಚ್ಚರಿಕೆಯಿಂದ ಓದಿ, ಇದು ನಿಮಗೆ ಗಂಭೀರ ಪರಿಣಾಮಗಳನ್ನು ಉಂಟುಮಾಡಬಹುದು,' ಎಂದು ನಾಡಾದಿಂದ ಸೂಚನೆ ನೀಡಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Sathish

contributor

Byline - ವಾರ್ತಾಭಾರತಿ

contributor

Similar News