ಏಕದಿನ ವಿಶ್ವಕಪ್: ದಕ್ಷಿಣ ಆಫ್ರಿಕಾ ತಂಡದ ನೊರ್ಟ್ಜೆ, ಸಿಸಾಂಡ ಮಗಲಾ ಔಟ್

Update: 2023-09-21 17:55 GMT

ನೊರ್ಟ್ಜೆ| Photo: X \ @CricCrazyJohns

ಕೇಪ್ಟೌನ್: ಅನ್ರಿಚ್ ನೊರ್ಟ್ಜೆ ಹಾಗೂ ಸಿಸಾಂಡ ಮಗಲಾ ಫಿಟ್ನೆಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ವಿಫಲವಾಗಿದ್ದು, ಏಕದಿನ ವಿಶ್ವಕಪ್ ಗಿಂತ ಮೊದಲು ದಕ್ಷಿಣ ಆಫ್ರಿಕಾವು ಆಟಗಾರರ ಗಾಯದ ಸಮಸ್ಯೆಯ ವಿರುದ್ಧ ತನ್ನ ಹೋರಾಟ ಮುಂದುವರಿಸಿದೆ.

ದಕ್ಷಿಣ ಆಫ್ರಿಕಾದ ಮೊದಲ 15 ಸದಸ್ಯರ ಏಕದಿನ ವಿಶ್ವಕಪ್ ತಂಡದಲ್ಲಿ ನೊರ್ಟ್ಜೆ ಸ್ಥಾನ ಪಡೆದಿದ್ದರು. ಆಸ್ಟ್ರೇಲಿಯ ವಿರುದ್ಧ ಸ್ವದೇಶದಲ್ಲಿ ನಡೆದಿದ್ದ ಏಕದಿನ ಸರಣಿಯ ಬಳಿಕ ಉಭಯ ಆಟಗಾರರು ಚೇತರಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ.

ಟ್ವೆಂಟಿ-20 ಸರಣಿಯಲ್ಲಿ ವಿಶ್ರಾಂತಿ ಪಡೆದ ನಂತರ ನೊರ್ಟ್ಜೆ ಆಸ್ಟ್ರೇಲಿಯ ವಿರುದ್ಧದ ಮೊದಲ ಏಕದಿನ ಪಂದ್ಯದಿಂದಲೂ ವಂಚಿತರಾಗಿದ್ದರು. ಅವರು ಎರಡನೇ ಏಕದಿನ ಪಂದ್ಯಕ್ಕೆ ವಾಪಸಾಗಿದ್ದರು. ಆದರೆ ಕೇವಲ 5 ಓವರ್ ಬೌಲಿಂಗ್ ಮಾಡಿದ್ದರು.

ಗಾಯಗೊಂಡಿರುವ ವೇಗಿಗಳ ಬದಲಿಯಾಗಿ ಆ್ಯಂಡಿಲ್ ಫೆಹ್ಲುಕ್ವಾಯೊ ಹಾಗೂ ಲಿಝಾಡ್ ವಿಲಿಯಮ್ಸ್ ಅವರನ್ನು ಆಯ್ಕೆ ಮಾಡಲಾಗಿದೆ.

ದಕ್ಷಿಣ ಆಫ್ರಿಕಾದ ವೇಗದ ಬೌಲಿಂಗ್ ವಿಭಾಗದಲ್ಲಿ ಐವರು ವೇಗಿಗಳಿದ್ದಾರೆ. ಕಾಗಿಸೊ ರಬಾಡ ನೇತೃತ್ವದ ಬೌಲಿಂಗ್ ವಿಭಾಗದಲ್ಲಿ ಮಾರ್ಕೊ ಜಾನ್ಸನ್, ಲುಂಗಿ ಗಿಡಿ ಹಾಗೂ ಗೆರಾಲ್ಡ್ ಕೊಟ್ಝೀ ಅವರಿದ್ದಾರೆ.

ದಕ್ಷಿಣ ಆಫ್ರಿಕಾ ತಂಡವು ಶನಿವಾರ ಭಾರತಕ್ಕೆ ಪ್ರಯಾಣಿಸಲಿದ್ದು, ಅಕ್ಟೋಬರ್ 7ರಂದು ದಿಲ್ಲಿಯಲ್ಲಿ ಶ್ರೀಲಂಕಾ ತಂಡವನ್ನು ಎದುರಿಸುವ ಮೂಲಕ ತನ್ನ ವಿಶ್ವಕಪ್ ಯಾನ ಆರಂಭಿಸಲಿದೆ.

ದಕ್ಷಿಣ ಆಫ್ರಿಕಾದ ಪರಿಷ್ಕೃತ ವಿಶ್ವಕಪ್ ತಂಡ: ಟೆಂಬಾ ಬವುಮಾ(ನಾಯಕ), ಜೆರಾಲ್ಡ್ ಕೊಯೆಟ್ಝಿ, ಕ್ವಿಂಟನ್ ಡಿಕಾಕ್, ರೀಝಾ ಹೆಂಡ್ರಿಕ್ಸ್, ಮಾರ್ಕೊ ಜಾನ್ಸನ್, ಹೆನ್ರಿಚ್ ಕ್ಲಾಸೆನ್, ಕೇಶವ್ ಮಹಾರಾಜ್, ಐಡೆನ್ ಮರ್ಕ್ರಮ್, ಡೇವಿಡ್ ಮಿಲ್ಲರ್, ಲುಂಗಿ ಗಿಡಿ, ಆ್ಯಂಡಿಲ್ ಫೆಹ್ಲುಕ್ವಾಯೊ, ಕಾಗಿಸೊ ರಬಾಡ, ತಬ್ರೈಝ್ ಶಂಸಿ, ರಾಸ್ಸಿ ವಾನ್ ಡೆರ್ ಡುಸೆನ್ ಹಾಗೂ ಲಿಝಾಡ್ ವಿಲಿಯಮ್ಸ್.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News