ಪ್ರೊ ಕಬಡ್ಡಿ ಲೀಗ್: ಬೆಂಗಳೂರು ಬುಲ್ಸ್‌ಗೆ ಸತತ 4ನೇ ಸೋಲು

Update: 2023-12-09 17:15 GMT

Photo: PTI 

ಬೆಂಗಳೂರು: ಪ್ರೊ ಕಬಡ್ಡಿ ಲೀಗ್‌ನಲ್ಲಿ ಆತಿಥೇಯ ಬೆಂಗಳೂರು ಬುಲ್ಸ್ ತಂಡ ಸತತ 4ನೇ ಸೋಲು ಕಂಡಿದೆ. ಶನಿವಾರ ಇಲ್ಲಿನ ಕಂಠೀರವ ಸ್ಟೇಡಿಯಮ್‌ನಲ್ಲಿ ನಡೆದ ಪಂದ್ಯದಲ್ಲಿ ಬುಲ್ಸ್ ತಂಡವು ಹರ್ಯಾಣ ಸ್ಟೀಲರ್ಸ್ ವಿರುದ್ಧ 38-32 ಅಂಕಗಳ ಅಂತರದಿಂದ ಸೋತಿದೆ. ಹರ್ಯಾಣದ ಪರ ವಿನಯ್ 8, ಸಿದ್ದಾಂತ್ 7 ಅಂಕ ಗಳಿಸಿದರು. ಸತತ 4ನೇ ಸೋಲು ಕಂಡಿರುವ ಬುಲ್ಸ್ ಪರ ಭರತ್(14 ಅಂಕ)ಏಕಾಂಗಿ ಹೋರಾಟ ನೀಡಿದರು.

ದಿನದ ಮತ್ತೊಂದು ಪಂದ್ಯದಲ್ಲಿ ಯುಪಿ ಯೋಧಾಸ್ ತಂಡವು ತೆಲುಗು ಟೈಟಾನ್ಸ್ ತಂಡವನ್ನು 48-33 ಅಂತರದಿಂದ ಸೋಲಿಸಿದೆ. ಯೋಧಾಸ್ ಪರ ಸುರೇಂದರ್ ಗಿಲ್ 14 ಅಂಕ ಕಲೆ ಹಾಕಿದರು. ಪರಾಜಿತ ಟೈಟಾನ್ಸ್ ಪರ ಪವನ್ ಸೆಹ್ರಾವತ್ 11 ಅಂಕ ಗಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News