IPL 2024: ರಿಷಬ್‌ ಪಂತ್‌ಗೆ ಒಂದು ಪಂದ್ಯ ನಿಷೇಧ

Update: 2024-05-11 16:52 IST
IPL 2024: ರಿಷಬ್‌ ಪಂತ್‌ಗೆ ಒಂದು ಪಂದ್ಯ ನಿಷೇಧ

ರಿಷಬ್ ಪಂತ್‌ (PTI)

  • whatsapp icon

ಹೊಸದಿಲ್ಲಿ: ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಕಪ್ತಾನ ರಿಷಬ್ ಪಂತ್‌ ಅವರ ಮೇಲೆ ಮುಂದಿನ ಒಂದು ಪಂದ್ಯಕ್ಕೆ ನಿಷೇಧ ಹೇರಲಾಗಿದೆ ಹಾಗೂ ಅವರಿಗೆ ರೂ. 30 ಲಕ್ಷ ದಂಡ ವಿಧಿಸಲಾಗಿದೆ. ರಾಜಸ್ಥಾನ ರಾಯಲ್ಸ್‌ ತಂಡದ ವಿರುದ್ದ ದಿಲ್ಲಿಯಲ್ಲಿ ಮೇ 7ರಂದು ನಡೆದ ಪಂದ್ಯದಲ್ಲಿ ನಿಧಾನಗತಿಯ ಓವರ್‌ ಮೂಲಕ ಐಪಿಎಲ್‌ ನೀತಿ ಸಂಹಿತೆ ವಿರೋಧಿಸಿದ್ದಕ್ಕಾಗಿ ಅವರ ವಿರುದ್ಧ ಈ ಕ್ರಮ ಕೈಗೊಳ್ಳಲಾಗಿದೆ.

ಇದರಿಂದಾಗಿ ರವಿವಾರ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ರಾಯಲ್‌ ಚ್ಯಾಲೆಂಜರ್ಸ್‌ ಬೆಂಗಳೂರು ತಂಡದ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್‌ನ ಮಹತ್ವದ ಪಂದ್ಯದಿಂದ ಪಂತ್‌ ಹೊರಗುಳಿಯಲಿದ್ದಾರೆ. ಐಪಿಎಲ್‌ನ ಈ ಮಹತ್ವದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ಸೋತಿದ್ದೇ ಆದಲ್ಲಿ ತಂಡ ಹೊರಬೀಳಲಿದೆ.

ನಿಧಾನಗತಿಯ ಓವರ್‌ ಕುರಿತಂತೆ ಮ್ಯಾಚ್‌ ರೆಫ್ರಿ ನಿರ್ಧಾರದ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್‌ ತಂಡವು ಬಿಸಿಸಿಐ ಓಂಬಡ್ಸ್‌ಮ್ಯಾನ್‌ಗೆ ಮನವಿ ಸಲ್ಲಿಸಿದರೂ ವರ್ಚುವಲ್‌ ವಿಚಾರಣೆಯಲ್ಲಿ ಮ್ಯಾಚ್‌ ರೆಫ್ರಿಯ ತೀರ್ಮಾನವನ್ನೇ ಅಂತಿಮ ಎಂದು ಘೋಷಿಸಿದೆ.

ಪ್ರಸ್ತುತ ಡೆಲ್ಲಿ ಕ್ಯಾಪಿಟಲ್ಸ್‌ ತಂಡ ಅಂಕಗಳ ಟೇಬಲ್‌ನಲ್ಲಿ 5ನೇ ಸ್ಥಾನದಲ್ಲಿದ್ದು ಸಿಎಸ್‌ಕೆ ಮತ್ತು ಎಲ್‌ಎಸ್‌ಜಿ ತಂಡಗಳಷ್ಟೇ ಅಂಕ ಪಡೆದಿದೆ.


Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News