ಐಪಿಎಲ್‌ನಲ್ಲಿ ಮೊದಲ ಬಾರಿ ಅವಕಾಶ ಪಡೆದ ಶಮರ್ ಜೋಸೆಫ್

Update: 2024-02-10 17:35 GMT

ಶಮರ್ ಜೋಸೆಫ್‌ | Photo: NDTV 

ಹೊಸದಿಲ್ಲಿ: ಮುಂಬರುವ 2024ರ ಐಪಿಎಲ್ ಟೂರ್ನಿಗೆ ವೇಗದ ಬೌಲರ್ ಮಾರ್ಕ್ ವುಡ್ ಬದಲಿಗೆ ಶಮರ್ ಜೋಸೆಫ್‌ಗೆ ಲಕ್ನೊ ಸೂಪರ್ ಜೈಂಟ್ಸ್ ಮಣೆ ಹಾಕಿದೆ.

ಗಾಬಾದಲ್ಲಿ ಇತ್ತೀಚೆಗೆ ನಡೆದಿದ್ದ ಟೆಸ್ಟ್ ಪಂದ್ಯದಲ್ಲಿ ಜೋಸೆಫ್ 68 ರನ್‌ಗೆ 7 ವಿಕೆಟ್‌ಗಳನ್ನು ಉರುಳಿಸಿ ವೆಸ್ಟ್‌ಇಂಡೀಸ್ ತಂಡ ಆಸ್ಟ್ರೇಲಿಯ ವಿರುದ್ಧ ಐತಿಹಾಸಿಕ ಗೆಲುವು ದಾಖಲಿಸಲು ನೆರವಾಗಿದ್ದರು. ತನ್ನ ಬೌಲಿಂಗ್‌ನಿಂದ ವಿಶ್ವದ ಗಮನ ಸೆಳೆದಿದ್ದ ಜೋಸೆಫ್ 3 ಕೋ.ರೂ.ಗೆ ಲಕ್ನೊಗೆ ಸೇರ್ಪಡೆಯಾಗಿದ್ದಾರೆ.

ಬ್ರಿಸ್ಬೇನ್‌ನಲ್ಲಿ ನಡೆದಿದ್ದ 2ನೇ ಟೆಸ್ಟ್ ಪಂದ್ಯದಲ್ಲಿ ಮಿಚೆಲ್ ಸ್ಟಾರ್ಕ್ ಯಾರ್ಕರ್‌ಗೆ ಕಾಲ್ಬೆರಳಿಗೆ ಗಾಯವಾಗಿದ್ದರೂ ಅದನ್ನು ಲೆಕ್ಕಿಸದೆ ಅಮೋಘ ಪ್ರದರ್ಶನ ನೀಡಿದ್ದ ಜೋಸೆಫ್ 68 ರನ್‌ಗೆ 7 ವಿಕೆಟ್‌ಗಳನ್ನು ಉರುಳಿಸಿದ್ದರು. ಈ ಮೂಲಕ ಪಂದ್ಯದ ದಿಕ್ಕನ್ನೇ ಬದಲಿಸಿದ್ದರು.

ಜೋಸೆಫ್ ವೀರೋಚಿತ ಪ್ರದರ್ಶನದ ನೆರವಿನಿಂದ ವೆಸ್ಟ್‌ಇಂಡೀಸ್ ತಂಡ ಆಸ್ಟ್ರೇಲಿಯ ವಿರುದ್ಧ ಅದರದೆ ನೆಲದಲ್ಲಿ 1997ರ ನಂತರ ಮೊದಲ ಬಾರಿ ಟೆಸ್ಟ್ ಪಂದ್ಯ ಜಯಿಸಿತ್ತು. ಕ್ರಿಕೆಟ್ ವೆಸ್ಟ್‌ಇಂಡೀಸ್ ತನ್ನ ವಾರ್ಷಿಕ ಗುತ್ತಿಗೆಯಲ್ಲಿ ಜೋಸೆಫ್‌ಗೆ ಭಡ್ತಿ ನೀಡಿತ್ತು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News