ನಿಧಾನಗತಿಯ ಬೌಲಿಂಗ್: ಗುಜರಾತ್ ಟೈಟಾನ್ಸ್ ನಾಯಕ ಗಿಲ್‌ಗೆ 24 ಲಕ್ಷ ರೂ. ದಂಡ

Update: 2024-05-11 16:05 GMT

 ಶುಭಮನ್ ಗಿಲ್‌ | PC : PTI 

ಅಹ್ಮದಾಬಾದ್: ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಶುಕ್ರವಾರ ನಡೆದ ಐಪಿಎಲ್ ಪಂದ್ಯದ ವೇಳೆ ನಿಧಾನಗತಿಯ ಬೌಲಿಂಗ್ ಮಾಡಿರುವ ಗುಜರಾತ್ ಟೈಟಾನ್ಸ್ ನಾಯಕ ಶುಭಮನ್ ಗಿಲ್‌ಗೆ 24 ಲಕ್ಷ ರೂ. ದಂಡ ವಿಧಿಸಲಾಗಿದೆ.

ಗುಜರಾತ್ ಈ ಋತುವಿನಲ್ಲಿ ಎರಡನೇ ಬಾರಿ ನಿಧಾನಗತಿಯ ಬೌಲಿಂಗ್ ಮಾಡಿದೆ. ಸ್ಲೋ ಓವರ್ ರೇಟ್ ಕಾಯ್ದುಕೊಂಡಿರುವುದಕ್ಕೆ ಇಂಪ್ಯಾಕ್ಟ್ ಆಟಗಾರ ಸಹಿತ ಆಡುವ 11 ಸದಸ್ಯರುಗಳು ವೈಯಕ್ತಿಕವಾಗಿ 6 ಲಕ್ಷ ರೂ. ಅಥವಾ ಪಂದ್ಯಶುಲ್ಕದಲ್ಲಿ ಶೇ.25ರಷ್ಟು ದಂಡ ತೆರಬೇಕಾಗಿದೆ.

ಗುಜರಾತ್ ತಂಡ ಶುಕ್ರವಾರ ಹಾಲಿ ಚಾಂಪಿಯನ್ ಸಿಎಸ್‌ಕೆ ತಂಡವನ್ನು 35 ರನ್‌ಗಳಿಂದ ಮಣಿಸಿ ಐಪಿಎಲ್‌ನಲ್ಲಿ ಸ್ಪರ್ಧೆಯಲ್ಲಿ ಉಳಿದುಕೊಂಡಿದೆ.

ಗಿಲ್ ಹಾಗೂ ಸಾಯಿ ಸುದರ್ಶನ್ ಸಿಡಿಸಿದ ಶತಕಗಳ ನೆರವಿನಿಂದ ಗುಜರಾತ್ 3 ವಿಕೆಟ್‌ಗಳ ನಷ್ಟಕ್ಕೆ 231 ರನ್ ಗಳಿಸಿತು. ಗೆಲ್ಲಲು ಕಠಿಣ ಗುರಿ ಪಡೆದಿದ್ದ ಸಿಎಸ್‌ಕೆ ತಂಡವನ್ನು 8 ವಿಕೆಟ್‌ಗಳ ನಷ್ಟಕ್ಕೆ 196 ರನ್‌ಗೆ ನಿಯಂತ್ರಿಸಿತು.

12 ಪಂದ್ಯಗಳಲ್ಲಿ 10 ಅಂಕಗಳಿಸಿರುವ ಗುಜರಾತ್ ತಂಡ ಅಂಕಪಟ್ಟಿಯಲ್ಲಿ 8ನೇ ಸ್ಥಾನದಲ್ಲಿದೆ. ಸಿಎಸ್‌ಕೆ ಸೋತ ಹೊರತಾಗಿಯೂ 12 ಪಂದ್ಯಗಳಲ್ಲಿ 12 ಅಂಕ ಗಳಿಸಿ 4ನೇ ಸ್ಥಾನ ಉಳಿಸಿಕೊಂಡಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News