ಕೆಲವೊಮ್ಮೆ ಸೋಲುವುದರಿಂದ ಒಳ್ಳೆಯದಾಗುತ್ತದೆ: ಹಾರ್ದಿಕ್ ಪಾಂಡ್ಯ
ಲಾಡೆರ್ ಹಿಲ್: ವೆಸ್ಟ್ ಇಂಡೀಸ್ ವಿರುದ್ದ ಟಿ-20 ಸರಣಿ ಗೆಲ್ಲಬೇಕೆಂಬ ಭಾರತದ ಕನಸಿಗೆ ಬ್ರೆಂಡನ್ ಕಿಂಗ್ ಅಡ್ಡಿಯಾಗಿದ್ದು, ರವಿವಾರ ನಡೆದ ಕೊನೆಯ ಟಿ-20 ಪಂದ್ಯವನ್ನು 8 ವಿಕೆಟ್ ನಿಂದ ಗೆದ್ದುಕೊಂಡ ವಿಂಡೀಸ್ 5 ಪಂದ್ಯಗಳನ್ನು ಸರಣಿಯನ್ನು 3-2 ಅಂತರದಿಂದ ವಶಪಡಿಸಿಕೊಂಡಿದೆ.
ಪಂದ್ಯ ಸೋತ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಭಾರತದ ನಾಯಕ ಹಾರ್ದಿಕ್ ಪಾಂಡ್ಯ, "ನಾವು ಸಾಕಷ್ಟು ಪ್ರಯತ್ನ ಮಾಡಿದ್ದೆವು. ಆದರೆ ಪರಿಸ್ಥಿತಿಯ ಲಾಭ ಪಡೆಯಲು ನಮ್ಮಿಂದ ಸಾಧ್ಯವಾಗಲಿಲ್ಲ. ಜೊತೆಗೆ ಪಂದ್ಯದ ಸೋಲಿನ ಬಗ್ಗೆ ಹೆಚ್ಚು ವಿವರಿಸುವ ಅಗತ್ಯವಿಲ್ಲ ಎಂಬುದನ್ನು ನನ್ನ ಭಾವನೆ. ತಿಲಕ್ ವರ್ಮಾ, ಯಶಸ್ವಿ ಜೈಸ್ವಾಲ್ ರಂತಹ ಯುವ ಆಟಗಾರರು ನಮ್ಮ ತಂಡದಲ್ಲಿದ್ದಾರೆ. ಮುಂದಿನ ದಿನಗಳಲ್ಲಿ ನಾವು ಉತ್ತಮ ಪ್ರದರ್ಶನ ನೀಡಲು ಪ್ರಯತ್ನಿಸುತ್ತೇವೆ''ಎಂದರು.
'ಸೋಲು ಹಾಗೂ ಗೆಲುವು ಆಟದ ಒಂದು ಭಾಗ. ಸೋಲಿನಿಂದಾಗಿ ಹಲವು ಪಾಠ ಕಲಿಯಬಹುದು. ನಮಗೆ ಸೋಲು-ಗೆಲುವಿನ ಲೆಕ್ಕಾಚಾರ ಮಾಡಲು ಸಾಕಷ್ಟು ಸಮಯವಿದೆ. ಕೆಲವೊಮ್ಮೆ ಸೋಲುವುದು ಒಳ್ಳೆಯದು. ಈ ಸೋಲಿಗೆ ನಾನು ಕೂಡ ಕಾರಣನಾಗಿದ್ದೇನೆ ಎಂದು ಪಾಂಡ್ಯ ಅಭಿಪ್ರಾಯಪಟ್ಟಿದ್ದಾರೆ.
ಭಾರತವು ಪಾಂಡ್ಯ ನಾಯಕತ್ವದಲ್ಲಿ ಇದೇ ಮೊದಲ ಬಾರಿ ಸೀಮಿತ ಓವರ್ ಗಳ ಸರಣಿ ಸೋತಿದೆ