ಪಾಕಿಸ್ತಾನಕ್ಕೆ 345 ರನ್ ಗುರಿ ನೀಡಿದ ಶ್ರೀಲಂಕಾ
ಇಲ್ಲಿನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ 2023 ಟೂರ್ನಿಯ 8 ನೇ ಪಂದ್ಯದಲ್ಲಿ ಶ್ರೀಲಂಕಾ ತಂಡ ಪಾಕಿಸ್ತಾನಕ್ಕೆ 345 ರನ್ ಗಳ ಗುರಿ ನೀಡಿದೆ.
ಹೈದರಾಬಾದ್ :ಇಲ್ಲಿನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ 2023 ಟೂರ್ನಿಯ 8 ನೇ ಪಂದ್ಯದಲ್ಲಿ ಶ್ರೀಲಂಕಾ ತಂಡ ಪಾಕಿಸ್ತಾನಕ್ಕೆ 345 ರನ್ ಗಳ ಗುರಿ ನೀಡಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಶ್ರೀಲಂಕಾ ಗೆ ಕುಸಾಲ್ ಪರೇರಾ ವಿಕೆಟ್ ಶೂನ್ಯಕ್ಕೆ ಕಬಳಿಸುವುದರೊಂದಿಗೆ ಹಸನ್ ಅಲಿ ಆರಂಭಿಕ ಆಘಾತ ನೀಡಿದರು. ಇನ್ನೋರ್ವ ಆರಂಭಿಕ ಪತುಮ್ ನಿಸಾಂಕ ಅರ್ಧಶತಕ ಬಾರಿಸಿ ಶಾದಾಬ್ ಖಾನ್ ಗೆ ವಿಕೆಟ್ ಒಪ್ಪಿಸಿದರು. ಆದರೆ, ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಗೆ ಬಂದ ಕುಸಾಲ್ ಮೆಂಡಿಸ್ 77 ಎಸೆತಗಳಲ್ಲಿ 14 ಬೌಂಡರಿ 6 ಸಿಕ್ಸರ್ ಸಹಿತ 122 ರನ್ ಸ್ಫೋಟಕ ಬ್ಯಾಟಿಂಗ್ ಮೂಲಕ ಬಾಲ್ ಗೆ ಕ್ರೀಡಾಂಗಣದ ಅಷ್ಟ ದಿಕ್ಕು ದರ್ಶನ ಮಾಡಿಸಿದರು. ನಂತರ ಬ್ಯಾಟಿಂಗ್ ಗೆ ಬಂದ ಸದೀರ ಸಮರ ವಿಕ್ರಮ 89 ಎಸೆತಗಳಲ್ಲಿ 11 ಬೌಂಡರಿ 2 ಸಿಕ್ಸರ್ ಸಹಿತ 108 ರನ್ ಸಿಡಿಸಿ ಇನಿಂಗ್ಸ್ ನ ಎರಡನೇ ಆಕರ್ಷಕ ಶತಕ ಬಾರಿಸಿ ತಂಡದ ಮೊತ್ತ 300 ದಾಟುವಂತೆ ಮಾಡಿದರು. ಆದರೆ ಅವರಿಗೆ ಯಾವೊಬ್ಬ ಲಂಕಾ ಬ್ಯಾಟರ್ ಸಾಥ್ ನೀಡಲಿಲ್ಲ. ನಾಯಕ ದಸುನ್ ಶನಕ 12, ದುನಿತ್ ವೆಲ್ಲಾಳ 10 ರನ್ ಗೆ ವಿಕೆಟ್ ಒಪ್ಪಿಸಿದರು. ಶ್ರೀಲಂಕಾ 9 ವಿಕೆಟ್ ಕಳೆದುಕೊಂಡು 344 ಕ್ಕೆ ಇನ್ನಿಂಗ್ಸ್ ಕೊನೆಗೊಳಿಸಿತು.
ಪಾಕಿಸ್ತಾನ ಪರ ಹಸನ್ ಅಲಿ ಅಧಿಕ 4 ವಿಕೆಟ್ ಪಡೆದರೆ ಹಾರಿಸ್ 2 ಹಾಗೂ ಶಾಹೀನ್ ಆಫ್ರಿದಿ, ನವಾಝ್, ಶದಾಬ್, ತಲಾ ಒಂದೊಂದು ವಿಕೆಟ್ ಗಳಿಸಿದರು.