'ಯಶಸ್ವಿ' ರನ್ ಮಳೆಗೆ ನಲುಗಿದ ಆಸ್ಟ್ರೇಲಿಯ; 236 ರನ್ ಗಳ ಬೃಹತ್ ಗುರಿ ನೀಡಿದ ಭಾರತ
ತಿರುವನಂತಪುರಂ : ಇಲ್ಲಿನ ಗ್ರೀನ್ ಫೀಲ್ಡ್ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯ ವಿರುದ್ಧದ ಟಿ20 ಸರಣಿಯ ಎರಡನೇ ಪಂದ್ಯದಲ್ಲಿ ಭಾರತ 236 ರನ್ ಗುರಿ ನೀಡಿದೆ .
ಪ್ರತೀ ಪಂದ್ಯದಲ್ಲಿ ಪ್ರಯೋಗ ಮಾಡುವ, ಟಾಸ್ ಗೆದ್ದ ಆಸ್ಟ್ರೇಲಿಯ ಭಾರತವನ್ನು ಬ್ಯಾಟಿಂಗ್ ಗೆ ಆಹ್ವಾನಿಸಿ ಪ್ರಯೋಗ ಕ್ಕೆ ಇಳಿಯಿತು.
ಭಾರತದ ಪರ ಇನ್ನಿಂಗ್ಸ್ ಆರಂಭಿಸಿದ ಆರಂಭಿಸಿದ ಯಶಸ್ವಿ ಜೈಸ್ವಾಲ್ ಋತುರಾಜ್ ಗಾಯಕ್ವಾಡ್ ಜೋಡಿ ಆಸ್ಟ್ರೇಲಿಯ ಕ್ಕೆ ಮೈದಾನದ ಅಷ್ಟ ದಿಕ್ಕು ತೋರಿಸಿದರು. ಯಶಸ್ವಿ 25 ಎಸೆತಗಳಲ್ಲಿ 52 ರನ್ ಗಳಿಸಿ ಟಿ 20 ಪಂದ್ಯದ ಜೋಶ್ ಹೆಚ್ಚಿಸಿದರು. ನಾಥನ್ ಎಲಿಸ್ ಎಸೆತದಲ್ಲಿ ಝಂಪಾಗೆ ಕ್ಯಾಚ್ ನೀಡಿ ಔಟ್ ಆದರು.
77 ರನ್ ಗಳಿಗೆ ಭಾರತದ ಮೊದಲ ವಿಕೆಟ್ ಪಡೆದ ಆಸ್ಟ್ರೇಲಿಯ,ಸಿಕ್ಕಿದ ಯಶಸ್ಸು ಎಂದು ಭಾವಿಸಿದರೂ ಮೂರನೇ ಕ್ರಮಾಂಕದಲ್ಲಿ ಬಂದ ಇಶಾನ್ ಕಿಶನ್ ಋತುರಾಜ್ ಗಾಯಕ್ವಾಡ್ ಗೆ ಸಾಥ್ ನೀಡಿ ಭಾರತದ ಯುವಪಡೆಯ ಬೀಸುವ ಕಲೆ ಮುಂದುವರಿಸಿದರು. 32 ಎಸೆತಗಳಲ್ಲಿ 52 ರನ್ ಗಳಿಸಿದ ಇಶಾನ್ ರನ್ ಪೇರಿಸಲು ಮಹತ್ತರ ಕೊಡುಗೆ ನೀಡಿದರು. ತಂಡ 164 ರನ್ ಗಳಿಸಿದ್ದಾಗ ಮಾರ್ಕುಸ್ ಸ್ಟೊಯಿನಿಸ್ ಎಸೆತದಲ್ಲಿ ನಾಥನ್ ಎಲಿಸ್ ಗೆ ಕ್ಯಾಚ್ ನೀಡಿ ವಿಕೆಟ್ ಒಪ್ಪಿಸಿದರು.
ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಗೆ ಬಂದ ನಾಯಕ ಸೂರ್ಯ ಕುಮಾರ್ ಯಾದವ್ ಬೀಸುವ ಪ್ರಯತ್ನ ಮಡಿದರಾದರೂ ಹೆಚ್ಚು ಹೊತ್ತು ಕ್ರೀಸ್ ನಲ್ಲಿ ಅವರು ನಿಲ್ಲಲಿಲ್ಲ. 10 ಎಸೆತಕ್ಕೆ 19 ರನ್ ಗಳಿಸಿ ನಾಥನ್ ಎಲಿಸ್ ಗೆ ವಿಕೆಟ್ ಒಪ್ಪಿಸಿದರು.
ಕ್ರೀಸ್ ನಲ್ಲಿ ಬಹಳ ಹೊತ್ತಿನವರೆಗೆ ನಿಂತಿದ್ದ ಋತುರಾಜ್ ಗಾಯಕ್ವಾಡ್ 43 ಎಸೆತಗಳಲ್ಲಿ 58 ರನ್ ಗಳಿಸಿ ತಂಡದ ಮೊತ್ತ 200 ದಾಟುವಂತೆ ನೋಡಿಕೊಂಡರು. ಕೊನೆ ಕ್ಷಣಕ್ಕೆ ಬ್ಯಾಟಿಂಗ್ ಗೆ ಬಂದ ರಿಂಕು ಸಿಂಗ್ 'ಕ್ಯಾಪ್ಟನ್ ಕೂಲ್'ನಂತೆ 9 ಎಸೆತಗಳಲ್ಲಿ 31 ರನ್ ಗಳಿಸಿ ಉತ್ತಮ ಫಿನಿಷರ್ ಆಗಿ ಭಾರತದ ಮೊತ್ತವನ್ನು 235 ಕ್ಕೆ ಏರಿಸಿದರು.
ನಾಥನ್ ಎಲ್ಲಿಸ್ 3 ವಿಕೆಟ್, ಮಾರ್ಕಸ್ ಸ್ಟೊಯಿನಿಸ್ 1 ವಿಕೆಟ್ ಪಡೆದರು.