ವಿಶ್ವ ಅತ್ಲೆಟಿಕ್ಸ್ ಕಾಂಟಿನೆಂಟಲ್ ಟೂರ್ | ರಾಷ್ಟ್ರೀಯ ದಾಖಲೆ ಮುರಿದು ಚಿನ್ನ ಗೆದ್ದ ಗುಲ್ವೀರ್ ಸಿಂಗ್

Update: 2024-09-28 15:46 GMT

ಗುಲ್ವೀರ್ ಸಿಂಗ್ | PC : PTI 

ಹೊಸದಿಲ್ಲಿ: ಜಪಾನಿನ ನಿಗಾಟಾದಲ್ಲಿ ಶನಿವಾರ ನಡೆದ ವಿಶ್ವ ಅತ್ಲೆಟಿಕ್ಸ್ ಕಾಂಟಿನೆಂಟಲ್ ಟೂರ್‌ನ ಪುರುಷರ 5,000 ಮೀ. ಓಟದ ಸ್ಪರ್ಧೆಯಲ್ಲಿ ತನ್ನದೇ ರಾಷ್ಟ್ರೀಯ ದಾಖಲೆಯನ್ನು ಮುರಿದಿರುವ ಗುಲ್ವೀರ್ ಸಿಂಗ್ ಚಿನ್ನದ ಪದಕ ಜಯಿಸಿದ್ದಾರೆ.

ಗುಲ್ವೀರ್ 13:11.82 ಸೆಕೆಂಡ್‌ನಲ್ಲಿ ಗುರಿ ತಲುಪಿ ಈ ಸಾಧನೆ ಮಾಡಿದ್ದಾರೆ.

ಈ ವರ್ಷದ ಜೂನ್‌ನಲ್ಲಿ ಗುಲ್ವೀರ್ ಅವರು ಪೋರ್ಟ್‌ಲ್ಯಾಂಡ್ ಟ್ರ್ಯಾಕ್ ಫೆಸ್ಟಿವಲ್‌ನಲ್ಲಿ 13:18.92 ಸೆಕೆಂಡ್‌ನಲ್ಲಿ ಗುರಿ ತಲುಪಿ ಅವಿನಾಶ್ ಸಾಬ್ಳೆ 2023ರಲ್ಲಿ ನಿರ್ಮಿಸಿದ್ದ ದಾಖಲೆಯನ್ನು (13:19.30 ಸೆ.)ಮುರಿದಿದ್ದರು.

26ರ ಹರೆಯದ ಗುಲ್ವೀರ್ 13 ಸೆಕೆಂಡ್‌ನಿಂದ ಪ್ಯಾರಿಸ್ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುವಲ್ಲಿ ವಿಫಲರಾಗಿದ್ದರು.

ಗುಲ್ವೀರ್ ಈ ವರ್ಷದ ಮಾರ್ಚ್‌ನಲ್ಲಿ ಕ್ಯಾಲಿಫೋರ್ನಿಯಾದಲ್ಲಿ ನಡೆದಿದ್ದ ದಿ ಟೆನ್ ಟ್ರ್ಯಾಕ್ ಕ್ರೀಡಾಕೂಟದಲಿ ಪುರುಷರ 10,000 ಮೀ. ಓಟದಲ್ಲಿ 27:41.81 ಸೆಕೆಂಡ್‌ನಲ್ಲಿ ಗುರಿ ತಲುಪಿದ್ದರು. ಈ ಮೂಲಕ ಭಾರತೀಯ ಪುರುಷರ ಟ್ರ್ಯಾಕ್ ಆ್ಯಂಡ್ ಫೀಲ್ಡ್‌ನ ಎರಡನೇ ಅತಿ ಹಳೆಯ ದಾಖಲೆ ಮುರಿದಿದ್ದರು. 2008ರಲ್ಲಿ 16 ವರ್ಷಗಳ ಹಿಂದೆ ಸುರೇಂದರ್ ಸಿಂಗ್ ನಿರ್ಮಿಸಿದ್ದ ದಾಖಲೆ(28:02.89)ಯನ್ನು ಮುರಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News