ವಿಶ್ವಕಪ್ 2023: ಅರ್ಧಶತಕ ಬಾರಿಸಿದ ಕೊಹ್ಲಿ; 191 ಕ್ಕೆ 5 ವಿಕೆಟ್ ಕಳೆದುಕೊಂಡ ಭಾರತ
ಧರ್ಮಶಾಲ: ಇಲ್ಲಿನ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಶನ್ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ 2023 ಟೂರ್ನಿಯು ಭಾರತ ಮತ್ತು ನ್ಯೂಝಿಲ್ಯಾಂಡ್ ನಡುವಣ ಪಂದ್ಯದಲ್ಲಿ ನ್ಯೂಝಿಲ್ಯಾಂಡ್ ನೀಡಿದ 274 ರನ್ ಬೆನ್ನತ್ತಿದ ಭಾರತ ಮೊದಲ ವಿಕೆಟ್ ನಷ್ಟಕ್ಕೆ 71 ರನ್ ಜೊತೆಯಾಟ ಆಡಿತು.
ನಾಯಕ ರೋಹಿತ್ ಶರ್ಮಾ 4 ಬೌಂಡರಿ 4 ಸಿಕ್ಸರ್ ಸಹಿತ 46 ರನ್ ಗಳಿಸಿದರೆ ಅವರಿಗೆ ಸಾಥ್ ನೀಡಿದ್ದ ಶುಬ್ ಮನ್ ಗಿಲ್ 26 ರನ್ ಬಾರಿಸಿ ಕ್ರಮವಾಗಿ ಲೋಕಿ ಫರ್ಗ್ಯುಸನ್ ಬೌಲಿಂಗ್ ನಲ್ಲಿ ವಿಕೆಟ್ ಒಪ್ಪಿಸಿದರು. ಬಳಿಕ ಬ್ಯಾಟಿಂಗ್ ಗೆ ಬಂದ ವಿರಾಟ್ ಕೊಹ್ಲಿ ಹಾಗೂ ಶ್ರೇಯಸ್ ಅಯ್ಯರ್, ಬ್ಯಾಟ್ ಮಾಡುತ್ತಿದ್ದ ಸಂದರ್ಭ ದಟ್ಟ ಮಂಜು ಕಾಣಿಸಿಕೊಂಡಿದ್ದರಿಂದ ಕೆಲ ಸಮಯ ಪಂದ್ಯ ನಿಲ್ಲಿಸಲಾಗಿತ್ತು. ನಂತರ ಮಂಜು ತಿಳಿಯಾದ ಮೇಲೆ ಅಂಪೈರ್ ನಿರ್ಣಯದಂತೆ ಪಂದ್ಯವನ್ನು ಪ್ರಾರಂಭಿಸಲಾಯಿತು.
ಬಳಿಕ ಕ್ರೀಸ್ ಗೆ ಬಂದ ಶ್ರೇಯಸ್ ಅಯ್ಯರ್ 33 ರನ್ ಬಾರಿಸಿ ಟ್ರೆಂಟ್ ಬೌಲ್ಟ್ ಬೌಲಿಂಗ್ ನಲ್ಲಿ ವಿಕೆಟ್ ಕಳೆದುಕೊಂಡರೆ ಕೆಎಲ್ ರಾಹುಲ್ 27 ರನ್ ಗಳಿಸಿರುವಾಗ ಮಿಷೆಲ್ ಸಾಂಟ್ನರ್ ಎಲ್ ಬಿಡಬ್ಲೂ ಬಲೆಗೆ ಬಿದ್ದರು. ತಂಡ ವನ್ನು ಗೆಲ್ಲಿಸುವ ಜವಾಬ್ದಾರಿ ಹೊತ್ತಿದ್ದ ವಿರಾಟ್ ಕೊಹ್ಲಿ 5 ಬೌಂಡರಿ 1 ಸಿಕ್ಸರ್ ಸಹಿತ 55 ರನ್ ಬಾರಿಸಿ ಅರ್ಧಶತಕ ಸಿಡಿಸಿ ಸಂಭ್ರಮಿಸಿದರು. ಸೂರ್ಯಕುಮಾರ್ 2 ರನ್ ಗಳಿಸಿ ರನೌಟ್ ಆದರು.