ವಿಶ್ವ ಪ್ಯಾರಾ ಅತ್ಲೆಟಿಕ್ಸ್ ಚಾಂಪಿಯನ್‌ಶಿಪ್: ಜಾವೆಲಿನ್ ಎಸೆತದಲ್ಲಿ ರಿಂಕುಗೆ ಕಂಚು

Update: 2024-05-24 17:04 GMT

ರಿಂಕು

ಹೊಸದಿಲ್ಲಿ: ವಿಶ್ವ ಪ್ಯಾರಾ ಅತ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಶುಕ್ರವಾರ ನಡೆದ ಪುರುಷರ ಜಾವೆಲಿನ್ ಎಸೆತದ ಎಫ್ 46 ವಿಭಾಗದಲ್ಲಿ ಭಾರತದ ರಿಂಕು ಕಂಚಿನ ಪದಕ ಗೆದ್ದುಕೊಂಡಿದ್ದಾರೆ.

ತನ್ನ ನಾಲ್ಕನೇ ಪ್ರಯತ್ನದಲ್ಲಿ ರಿಂಕು 62.77 ಮೀ.ದೂರಕ್ಕೆ ಜಾವೆಲಿನ್ ಎಸೆದಿದ್ದು ಇದರೊಂದಿಗೆ ಭಾರತವು ಟೂರ್ನಮೆಂಟ್‌ನಲ್ಲಿ 13ನೇ ಪದಕ ಹಾಗೂ ನಾಲ್ಕನೇ ಕಂಚಿನ ಪದಕ ಜಯಿಸಿದೆ.

ಕ್ಯೂಬಾದ ಗುಲ್ಲೆರ್ಮೊ ವರೊನ ಹಾಗೂ ಶ್ರೀಲಂಕಾದ ದಿನೇಶ್ ಪ್ರಿಯಾಂಥಾ ಕ್ರಮವಾಗಿ 65.16 ಮೀ. ಹಾಗೂ 64.59 ಮೀ.ದೂರಕ್ಕೆ ಜಾವೆಲಿನ್ ಎಸೆದು ಚಿನ್ನ ಹಾಗೂ ಬೆಳ್ಳಿ ಪದಕ ಜಯಿಸಿದ್ದಾರೆ.

ಪ್ರಸ್ತುತ ಭಾರತವು ಐದು ಚಿನ್ನ, ನಾಲ್ಕು ಬೆಳ್ಳಿ ಹಾಗೂ ನಾಲ್ಕು ಕಂಚು ಸಹಿತ ಒಟ್ಟು 13 ಪದಕಗಳನ್ನು ಗೆದ್ದುಕೊಂಡಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News