WPL | ರೋಚಕ ಪಂದ್ಯದಲ್ಲಿ ಆರ್ ಸಿ ಬಿ ವಿರುದ್ಧ ಮುಂಬೈ ಇಂಡಿಯನ್ಸ್ ಗೆ 4 ವಿಕೆಟ್ ಗಳ ಜಯ

Update: 2025-02-21 23:07 IST
WPL | ರೋಚಕ ಪಂದ್ಯದಲ್ಲಿ ಆರ್ ಸಿ ಬಿ ವಿರುದ್ಧ ಮುಂಬೈ ಇಂಡಿಯನ್ಸ್ ಗೆ 4 ವಿಕೆಟ್ ಗಳ ಜಯ
  • whatsapp icon

ಬೆಂಗಳೂರು : ಇಲ್ಲಿನ ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್‌ಸಿಬಿ) ವಿರುದ್ಧದ ಡಬ್ಲುಪಿಎಲ್‌ನ 7ನೇ ಪಂದ್ಯವನ್ನು 4 ವಿಕೆಟ್ ಗಳ ಅಂತರದಿಂದ ಗೆದ್ದುಕೊಂಡಿತು.

ಆರ್ ಸಿ ಬಿ ನೀಡಿದ್ದ 168 ರನ್ ಗಳ ಗುರಿ ಬೆನ್ನತ್ತಲು ಬ್ಯಾಟಿಂಗ್ ಗೆ ಇಳಿದ ಮುಂಬೈ ಇಂಡಿಯನ್ಸ್ ತಂಡ ಕಲಪೆ ಆರಂಭ ಪಡೆಯಿತು. ಆರಂಭಿಕರಾಗಿ ಬ್ಯಾಟಿಂಗ್ ಇಳಿದಿದ್ದ ಯಾಸ್ತಿಕಾ ಭಾಟಿಯಾ 8 ಎಸೆತಗಳಲ್ಲಿ 2 ಬೌಂಡರಿ ನೆರವಿನೊಂದಿಗೆ 8 ರನ್ ಗಳಿಸಿ ಔಟಾದರೆ, ಹೇಲಿ ಮ್ಯಾಥ್ಯೂಸ್ 10 ಎಸೆತಗಳಲ್ಲಿ 2 ಬೌಂಡರಿ ನೆರವಿನೊಂದಿಗೆ 15 ರನ್ ಗಳಿಸಿ ಔಟಾದರು.

ನಂತರ ಕ್ರಮಾಂಕದಲ್ಲಿ ಬಂದ ನ್ಯಾಟ್ ಸ್ಕಿವರ್-ಬ್ರಂಟ್ ಉತ್ತಮ ಪ್ರದರ್ಶನ ನೀಡಿದರೂ, 7.2ನೇ ಓವರ್ ನಲ್ಲಿ ನ್ಯಾಟ್ ಸ್ಕಿವರ್-ಬ್ರಂಟ್ 21 ಎಸೆತಗಳಲ್ಲಿ 9 ಬೌಂಡರಿ ನೆರವಿನೊಂದಿಗೆ 42 ರನ್ ಗಳಿಸಿ ಔಟಾದರೆ, ಅಮೆಲಿಯಾ ಕೆರ್ 6 ಎಸೆತಗಳಲ್ಲಿ 2 ರನ್ ಗಳಿಸಿ ಔಟಾದರು.

ಬಳಿಕ ಬ್ಯಾಟಿಂಗ್ ಮಾಡಿದ ತಂಡದ ನಾಯಕಿ ಹರ್ಮನ್ ಪ್ರೀತ್ ಕೌರ್ 38 ಎಸೆತಗಳಲ್ಲಿ 8 ಬೌಂಡರಿ, 1 ಸಿಕ್ಸ್ ನೆರವಿನೊಂದಿಗೆ 50 ರನ್ ಗಳಿಸಿ ಔಟಾದರು.

ಅಮನ್ಜೋತ್ ಕೌರ್ 26 ಎಸೆತಗಳಲ್ಲಿ 2 ಬೌಂಡರಿ, 2 ಸಿಕ್ಸ್ ನೆರವಿನೊಂದಿಗೆ 33 ರನ್ ಗಳಿಸಿದರೆ, ಅವರಿಗೆ ಜೊತೆಯಾದ ಕಮಲಿನಿ ಗುಣಲನ್ 8 ಎಸೆತಗಳಲ್ಲಿ 1 ಬೌಂಡರಿ ನೆರವಿನೊಂದಿಗೆ 11 ರನ್ ಗಳಿಸಿ ತಂಡವನ್ನು ಗೆಲುವಿನತ್ತ ತಂಡವನ್ನು ಗೆಲುವಿನ ದಡ ಸೇರಿಸುವಲ್ಲಿ ಯಶಸ್ವಿಯಾದರು.

ಆರ್ ಸಿ ಬಿ ಪರ ಜಾರ್ಜಿಯಾ ವೇರ್ಹ್ಯಾಮ್ 3 ವಿಕೆಟ್ ಪಡೆದರೆ, ಕಿಮ್ ಗಾರ್ತ್ 2 ವಿಕೆಟ್, ಏಕ್ತಾ ಬಿಷ್ತ್ 1 ವಿಕೆಟ್ ಪಡೆದರು.

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News