ಮುರುಘಾ ಶ್ರೀಗೆ ಜಾಮೀನು; ಒಡನಾಡಿ ಸಂಸ್ಥೆಯ ಸ್ಟ್ಯಾನ್ಲಿ ಅವರ ಪ್ರತಿಕ್ರಿಯೆ ಏನು?
ಬೆಂಗಳೂರು, ನ.8: ಅಪ್ರಾಪ್ತ ಬಾಲಕಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಸಂಬಂಧ ನ್ಯಾಯಾಂಗ ಬಂಧನದಲ್ಲಿರುವ ಚಿತ್ರದುರ್ಗ ಮುರುಘಾ ಮಠದ ಡಾ.ಶಿವಮೂರ್ತಿ ಶರಣರಿಗೆ ಹೈಕೋರ್ಟ್ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ.
ಈ ಬಗ್ಗೆ ಒಡ ನಾಡಿ ಸಂಸ್ಥೆಯ ಸ್ಟ್ಯಾನ್ಲಿ ಪ್ರತಿಕ್ರಿಯಿಸಿ, 'ಮುಂದಿನ ದಿನಗಳಲ್ಲಿ ಕಾನೂನು ಹೋರಾಟ ಮುಂದುವರೆಸುತ್ತೇವೆ. ಈ ಪ್ರಕರಣದಲ್ಲಿ ಕೆಲವು ಲೋಪದೋಷಗಳ ಕಾಣುತ್ತಿವೆ. ಪೊಲೀಸರ ಚಾರ್ಜ್‍ಶೀಟ್ ಸಲ್ಲಿಸುವ ವೇಳೆ ಲೋಪವಾಗಿದೆ. ಹೀಗಾಗಿ ಜಾಮೀನು ಸಿಕ್ಕಿದೆ. ಜೈಲಿನಲ್ಲಿದುಕೊಂಡೇ ಸ್ವಾಮೀಜಿಗಳು ಪ್ರಭಾವ ಬೀರಿದ್ದಾರೆ ' ಎಂದು ಆರೋಪಿಸಿದ್ದಾರೆ.
'ಚಿತ್ರದುರ್ಗಕ್ಕೆ ಹೋಗಬಾರದು ಎಂದು ನ್ಯಾಯಾಲಯ ಹೇಳಿರುವುದು ಸ್ವಾಗತಾರ್ಹ. ಈ ಪ್ರಕರಣದಲ್ಲಿ ಚಿಕ್ಕ ಮಕ್ಕಳು ಸಾಕಷ್ಟು ನೊಂದಿದ್ದು, ನಾವು ಅವರ ಪರವಾಗಿ ನಾವಿದ್ದೇವೆ. ಮುರಘಾ ಶ್ರೀಗೆ ಖಂಡಿತವಾಗಿಯೂ ಶಿಕ್ಷೆ ಆಗಲಿದೆ' ಎಂದು ಹೇಳಿದರು.
ಮುರುಘಾ ಶ್ರೀ ಬಿಡುಗಡೆ ಸದ್ಯಕ್ಕೆ ಇಲ್ಲ..!
ಮುರುಘಾ ಶ್ರೀಗಳಿಗೆ ಜಾಮೀನು ಸಿಕ್ಕಿದ್ದರೂ ಸದ್ಯಕ್ಕೆ ಬಿಡುಗಡೆಯ ಭಾಗ್ಯವಿಲ್ಲ. ಏಕೆಂದರೆ, ಒಂದು ಪ್ರಕರಣದಲ್ಲಿ ಮಾತ್ರ ಜಾಮೀನು ದೊರೆತಿದ್ದು, ಇನ್ನು ಒಂದು ಪ್ರಕರಣದ ವಿಚಾರಣೆ ಬಾಕಿ ಉಳಿದಿದೆ. ಈ ಪ್ರಕರಣ ಇತ್ಯರ್ಥವಾಗುವವರೆಗೂ ಶ್ರೀಗಳಿಗೆ ಬಿಡುಗಡೆ ಭಾಗ್ಯ ಲಭಿಸುವುದಿಲ್ಲ ಎಂದು ಮೂಲಗಳು ತಿಳಿಸಿವೆ.