ʼನಮ್ಮ ಮೆಟ್ರೋʼ ರೈಲಿನಲ್ಲಿ ಮೂರ್ಛೆ ಬಂದಂತೆ ನಟನೆ: ಯೂಟ್ಯೂಬರ್ ವಿರುದ್ಧ ಪ್ರಕರಣ ದಾಖಲು

Update: 2023-10-06 17:07 GMT

ಬೆಂಗಳೂರು, ಅ.6: ಮೆಟ್ರೋ ರೈಲಿನೊಳಗೆ ಹಾಗೂ ನಿಲ್ದಾಣದ ಎಸ್ಕಲೇಟರ್ ನಲ್ಲಿ ಮೂರ್ಛೆ ಬಂದವರಂತೆ ನಟಿಸಿದ ಯೂಟ್ಯೂಬರ್ ವಿರುದ್ಧ ಇಲ್ಲಿನ ಗೋವಿಂದರಾಜ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುವುದಾಗಿ ವರದಿಯಾಗಿದೆ.

ಪ್ರಕರಣದ ಕುರಿತು ಬಿಎಂಆರ್‍ಸಿಎಲ್ ಅಧಿಕಾರಿಗಳು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದ್ದು, ಆರೋಪಿ ಪತ್ತೆಗೆ ಶೋಧ ನಡೆಸಲಾಗಿದೆ.

ವಿಜಯನಗರದಿಂದ ಮೆಜೆಸ್ಟಿಕ್ ಕಡೆಗೆ ಚಲಿಸುತ್ತಿದ್ದ ಮೆಟ್ರೋ ರೈಲಿನಲ್ಲಿ ಆರೋಪಿಯು ಮೂರ್ಛೆ ಬಂದವರಂತೆ ಪ್ರಾಂಕ್ ಮಾಡಿದ್ದು, ಅಲ್ಲದೆ ಮತ್ತೊಂದೆಡೆ ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದ ಎಸ್ಕಲೇಟರ್ ನಲ್ಲಿ ಬರುವಾಗ ವಯಸ್ಸಾದ ವೃದ್ಧೆಯ ಮುಂದೆ ಪ್ರಾಂಕ್ ಮಾಡಿದ್ದು, ಪ್ರಯಾಣಿಕರು ಗಾಬರಿಗೊಂಡಿದ್ದಾರೆ.

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲೂ ವಿಡಿಯೋ ಹಂಚಿಕೊಂಡು ಉದ್ಧಟತನ ಮೆರೆದಿದ್ದಾನೆ. ಆತನ ಹೆಸರು ಪ್ರ್ಯಾಂಕ್ ಪ್ರಜ್ಜು ಎಂಬುದು ತಿಳಿದು ಬಂದಿದೆ. ಈ ಪ್ರಕರಣ ಬಗ್ಗೆ ಪ್ರತಿಕ್ರಿಯಿಸಿರುವ ಮೆಟ್ರೋ ಅಧಿಕಾರಿಗಳು ʼʼಆರೋಪಿ ಯುವಕನ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದು, ಕ್ರಮ ಕೈಗೊಳ್ಳಲಾಗುವುದುʼʼ ಎಂದು ತಿಳಿಸಿದ್ದಾರೆ.


Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News