ಬೆಂಗಳೂರು ಮೆಟ್ರೋಗೆ ಚಾಲಕ ರಹಿತ ರೈಲು!

Update: 2024-02-15 09:06 GMT

ಸಾಂದರ್ಭಿಕ ಚಿತ್ರ (ndtv.com)

ಬೆಂಗಳೂರು: ಆರು ಬೊಗಿಗಳನ್ನು ಒಳಗೊಂಡ ಮೊಟ್ಟಮೊದಲ ಚಾಲಕರಹಿತ ಮೆಟ್ರೊ ರೈಲು ಬುಧವಾರ ಚೀನಾದಿಂದ ನಗರಕ್ಕೆ ಅಗಮಿಸಿದೆ ಎಂದು ಬೆಂಗಳೂರು ಮೆಟ್ರೊ ರೈಲು ನಿಗಮ ಪ್ರಕಟಿಸಿದೆ. ಈ ಬೋಗಿಗಳು ದಕ್ಷಿಣ ಬೆಂಗಳೂರಿನ ಐಟಿ ಹಬ್ ಎಲೆಕ್ಟ್ರಾನಿಕ್ ಸಿಟಿಯ ಹೆಬ್ಬಗೋಡಿ ಡಿಪೋಗೆ ಬಂದಿವೆ. ಈ ರೈಲು ಬಿಎಂಆರ್‍ಸಿಎಲ್‍ನ ಹಳದಿ ಮಾರ್ಗದಲ್ಲಿ ಅಂದರೆ ಆರ್.ವಿ.ರಸ್ತೆಯಿಂದ ಸಿಲ್ಕ್‍ಬೋರ್ಡ್ ಮಾರ್ಗವಾಗಿ ಎಲೆಕ್ಟ್ರಾನಿಕ್ ಸಿಟಿಗೆ ಸಂಚರಿಸಲಿವೆ.

ಈ ರೈಲು ಹಾಗೂ ಕೋಚ್‍ಗಳನ್ನು ಚೀನಾದ ಕಂಪನಿ ನಿರ್ಮಿಸಿದ್ದು, ಒಟ್ಟು 216 ಬೋಗಿಗಳ ನಿರ್ಮಾಣಕ್ಕೆ ಬಿಎಂಅರ್‍ಸಿಎಲ್‍ನಿಂದ ಗುತ್ತಿಗೆ ಪಡೆದಿದೆ.

"ನಾವು 216 ಬೋಗಿಗಗಳಿಗೆ ಬೇಡಿಕೆ ಸಲ್ಲಿಸಿದ್ದೇವೆ. ಈ ಪೈಕಿ 90 ಅಂದರೆ 15 ರೈಲುಗಳು ಹಳದಿ ಮಾರ್ಗದಲ್ಲಿ ಸಂಚರಿಸಲಿವೆ. ಈಗ ಆಗಮಿಸಿರುವ ಒಂದು ಬೋಗಿ ಪ್ರೊಟೊಟೈಪ್ ಆಗಿರುತ್ತದೆ" ಎಂದು ಬಿಎಂಆರ್‍ಸಿಎಲ್ ಅಧಿಕಾರಿಗಳು ವಿವರಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Safwan

contributor

Byline - ವಾರ್ತಾಭಾರತಿ

contributor

Similar News