ಕಾಂಗ್ರೆಸ್ ಹಿರಿಯ ನಾಯಕನ ಮನೆಗೆ ಬಿಜೆಪಿ ಸಂಸದ ಸಂಗಣ್ಣ ಕರಡಿ ಭೇಟಿ; ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ
Update: 2023-07-08 09:19 GMT
ಗಂಗಾವತಿ (ಕೊಪ್ಪಳ): ಮಾಜಿ ಸಂಸದ ಹಾಗೂ ಕಾಂಗ್ರೆಸ್ ಹಿರಿಯ ನಾಯಕ ಎಚ್.ಜಿ. ರಾಮುಲು ಅವರ ನಿವಾಸಕ್ಕೆ ಬಿಜೆಪಿ ಸಂಸದ ಸಂಗಣ್ಣ ಕರಡಿ ಶುಕ್ರವಾರ ಭೇಟಿ ನೀಡಿದ್ದು ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.
ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ 13 ಜನ ಹಾಲಿ ಸಂಸದರಿಗೆ ಟಿಕೆಟ್ ಕೈ ತಪ್ಪಲಿದೆ ಎನ್ನುವ ಚರ್ಚೆ ನಡೆಯುತ್ತಿರುವಾಗಲೇ ಉಭಯ ನಾಯಕರ ಈ ಭೇಟಿ ಕುತೂಲ ಮೂಡಿಸಿದೆ.
ಕಾಂಗ್ರೆಸ್ ಸೇರ್ಪಡೆ?
ಸಂಸದ ಸಂಗಣ್ಣ ಕರಡಿ ಭೇಟಿ ಬಗ್ಗೆ ಪ್ರತಿಕ್ರಿಯಿಸಿದ ಎಚ್.ಜಿ. ರಾಮುಲು ಅವರ ಪುತ್ರ ಹಾಗೂ ಕಾಂಗ್ರೆಸ್ ಮುಖಂಡ ಎಚ್.ಆರ್. ಶ್ರೀನಾಥ್, 'ಸಂಗಣ್ಣ ಕರಡಿ ತಂದೆ ಬಳಿ ಗೌಪ್ಯವಾಗಿ ಚರ್ಚೆ ನಡೆಸಿದ್ದು, ಯಾವ ವಿಷಯದ ಬಗ್ಗೆ ಮಾತನಾಡಿದ್ದಾರೆ ಎನ್ನುವುದು ಗೊತ್ತಿಲ್ಲ. ಒಂದು ವೇಳೆ ಅವರು ಕಾಂಗ್ರೆಸ್‌ಗೆ ಬರುವುದಾದರೆ ಸ್ವಾಗತ’ ಎಂದು ಹೇಳಿದ್ದಾರೆ.