ಪಡಿತರ ಚೀಟಿ ಹೆಸರು ಸೇರ್ಪಡೆ, ತಿದ್ದುಪಡಿಗೆ ನಾಳೆ(ಆ.10) ಕೊನೆಯ ದಿನ
Update: 2024-08-09 12:46 GMT
ಬೆಂಗಳೂರು: ಪಡಿತರ ಚೀಟಿ(ರೇಷನ್ ಕಾರ್ಡ್) ತಿದ್ದುಪಡಿಗೆ ಒಂದು ತಿಂಗಳ ಕಾಲಾವಕಾಶ ಕಲ್ಪಿಸಿದ್ದ(ಆ.10 ಕಡೆಯ ದಿನ) ಆಹಾರ ಇಲಾಖೆ, ಈ ಅವಧಿಯನ್ನು ಇನ್ನೂ ವಿಸ್ತರಣೆ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
ಜುಲೈ 1ರಿಂದ ಪಡಿತರ ಚೀಟಿಯ ತಿದ್ದುಪಡಿ ಅವಕಾಶ ನೀಡಿತ್ತು. 40 ದಿನಗಳಲ್ಲಿ ಸಾವಿರಾರು ಫಲಾನುಭವಿಗಳು ಅಗತ್ಯ ತಿದ್ದುಪಡಿ ಮಾಡಿಸಿದ್ದಾರೆ. ನಾಳೆ(ಆ.10) ಕೊನೆಯ ದಿನವಾಗಿದ್ದು, ಬೆಳಗ್ಗೆ 10ರಿಂದ ಸಂಜೆ 5ರ ವರೆಗೆ ತಿದ್ದುಪಡಿಗೆ ಅವಕಾಶವಿದೆ. ಬಾಕಿ ಉಳಿಸಿಕೊಂಡವರು ಶೀಘ್ರವೇ ಅಗತ್ಯ ತಿದ್ದುಪಡಿಗೆ ಅರ್ಜಿ ಸಲ್ಲಿಬಹುದು ಎಂದು ತಿಳಿಸಿದೆ.
ಪಡಿತರ ಚೀಟಿದಾರರು ಹೆಸರು ತಿದ್ದುಪಡಿ, ಹೊಸ ಸದಸ್ಯರ ಸೇರ್ಪಡೆ, ವಿಳಾಸ ಬದಲಾವಣೆ, ಹೆಸರು ತೆಗೆಯುವುದಕ್ಕೆ ಅವಕಾಶ ನೀಡಲಾಗಿದೆ. ತಿದ್ದುಪಡಿ ವೇಳೆ ಅರ್ಜಿದಾರರು ಆಧಾರ್ ಕಾರ್ಡ್, ಹೊಸ ಹೆಸರು ಸೇರ್ಪಡೆಗೆ ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಮೊಬೈಲ್ ಸಂಖ್ಯೆ, ಹಾಲಿ ಪಡಿತರ ಚೀಟಿ ದಾಖಲೆ ನೀಡಬೇಕು ಎಂದು ತಿಳಿಸಲಾಗಿದೆ.