ಎಸೆಸೆಲ್ಸಿ ಪರೀಕ್ಷೆ : ಮೊದಲ ದಿನ 16,313 ವಿದ್ಯಾರ್ಥಿಗಳು ಗೈರು
Update: 2025-03-21 20:42 IST

ಸಾಂದರ್ಭಿಕ ಚಿತ್ರ
ಬೆಂಗಳೂರು : ರಾಜ್ಯಾದ್ಯಂತ ಎಸೆಸೆಲ್ಸಿ ಪರೀಕ್ಷೆಯು ಶುಕ್ರವಾರದಿಂದ(ಮಾ.22) ಪ್ರಾರಂಭವಾಗಿದ್ದು, ಮೊದಲ ದಿನದಂದು ನಡೆದ ಪ್ರಥಮ ಭಾಷೆ ಕನ್ನಡ, ತೆಲಗು, ಹಿಂದಿ, ಮರಾಠಿ, ತಮಿಳು, ಉರ್ದು, ಇಂಗ್ಲಿಷ್, ಸಂಸ್ಕೃತ ಪರೀಕ್ಷೆಗಳು ಯಾವುದೇ ತೊಂದರೆಯಿಲ್ಲದೇ ಸುಸೂತ್ರವಾಗಿ ನಡೆದಿದೆ.
ಪ್ರಥಮ ಭಾಷಾ ಪರೀಕ್ಷೆಯಲ್ಲಿ 16,313 ವಿದ್ಯಾರ್ಥಿಗಳು ಗೈರಾಗಿದ್ದಾರೆ. ಈ ಪರೀಕ್ಷೆಗೆ 8,38,971 ವಿದ್ಯಾರ್ಥಿಗಳು ನೋಂದಣಿಯಾಗಿದ್ದರು. ಇವರ ಪೈಕಿ 8,22,658 ವಿದ್ಯಾರ್ಥಿಗಳು (ಶೇ.98.06) ಪರೀಕ್ಷೆಗೆ ಹಾಜರಾಗಿದ್ದಾರೆ.
ಉಡುಪಿ ಜಿಲ್ಲೆಯಲ್ಲಿ ಕನಿಷ್ಠ 65 ವಿದ್ಯಾರ್ಥಿಗಳು ಗೈರಾಗಿದ್ದು, ಶೇ.98.06ರಷ್ಟು ಹಾಜರಾತಿ ದಾಖಲಾಗಿದೆ. ಕಲಬುರಗಿ ಜಿಲ್ಲೆಯಲ್ಲಿ ಗರಿಷ್ಠ 1,962 ವಿದ್ಯಾರ್ಥಿಗಳು ಗೈರಾಗಿದ್ದು, ರಾಯಚೂರು 1,096, ವಿಜಯಪುರ 1,082, ಬೀದರ್ 986 ಹಾಗೂ ಬೆಂಗಳೂರು ದಕ್ಷಿಣ ಜಿಲ್ಲೆಗಳಲ್ಲಿ 960 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ.