ರಾಜ್ಯ ಬಿಜೆಪಿಯ ಬಗ್ಗೆ ಹೈಕಮಾಂಡಿಗೆ ಈ ಮಟ್ಟಿನ ತಾತ್ಸಾರ ಏಕೆ: ಕಾಂಗ್ರೆಸ್
ಬೆಂಗಳೂರು: ಬಿಜೆಪಿ ಶಾಸಕರು ತಮ್ಮ ಗೋಳು ಹೇಳಿಕೊಳ್ಳಲು ಒಬ್ಬ ಶಾಸಕಾಂಗ ಪಕ್ಷದ ನಾಯಕನಿಲ್ಲ, ದೂರು ನೀಡಲು ಒಬ್ಬ ಸಮರ್ಥ ಅಧ್ಯಕ್ಷನಿಲ್ಲ. ಎತ್ತಿ ಮೂಲೆಗೆಸೆಯಲ್ಪಟ್ಟಿದ್ದ ಬಿ ಎಸ್ ಯಡಿಯೂರಪ್ಪ ಅವರೇ ಶಾಸಕರ ಸಭೆ ನಡೆಸುವ ಅನಿವಾರ್ಯ ಸ್ಥಿತಿ ನಿರ್ಮಾಣವಾಗಿದೆ ಎಂದು ಕಾಂಗ್ರೆಸ್ ಟೀಕಿಸಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್, ಅಸಮಾಧಾನಿತರ ನೋವು ಕೇಳಲು ನಳಿನ್ ಕುಮಾರ್ ಕಟೀಲ್ ಅವರಿಗೆ ಸಮರ್ಥ್ಯವಿಲ್ಲವೇ ಅಥವಾ ಇಷ್ಟವಿಲ್ಲವೇ. ರಾಜ್ಯದ ಬಿಜೆಪಿಯ ಬಗ್ಗೆ ಹೈಕಮಾಂಡಿಗೆ ಈ ಮಟ್ಟಿನ ತಾತ್ಸಾರ, ತಿರಸ್ಕಾರ ಇರುವುದೇಕೆ? ಬಹುಶಃ ಅಮಿತ್ ಶಾ ಅವರಿಗೆ ಕರ್ನಾಟಕದ ಬಿಜೆಪಿ ಘಟಕವನ್ನು ವಿಸರ್ಜಿಸಿಬಿಡುವ ಚಿಂತನೆ ಇರಬಹುದೇನೋ ಎಂದು ರಾಜ್ಯ ಬಿಜೆಪಿಯನ್ನು ಪ್ರಶ್ನಿಸಿದೆ.
ಬಿಜೆಪಿ ಶಾಸಕರು ತಮ್ಮ ಗೋಳು ಹೇಳಿಕೊಳ್ಳಲು ಒಬ್ಬ ಶಾಸಕಾಂಗ ಪಕ್ಷದ ನಾಯಕನಿಲ್ಲ,
— Karnataka Congress (@INCKarnataka) August 20, 2023
ದೂರು ನೀಡಲು ಒಬ್ಬ ಸಮರ್ಥ ಅಧ್ಯಕ್ಷನಿಲ್ಲ.
ಎತ್ತಿ ಮೂಲೆಗೆಸೆಯಲ್ಪಟ್ಟಿದ್ದ BSY ಅವರೇ ಶಾಸಕರ ಸಭೆ ನಡೆಸುವ ಅನಿವಾರ್ಯ ಸ್ಥಿತಿ ನಿರ್ಮಾಣವಾಗಿದೆ.
ಅಸಮಾದಾನಿತರ ನೋವು ಕೇಳಲು @nalinkateel ಅವರಿಗೆ ಸಮರ್ಥ್ಯವಿಲ್ಲವೇ ಅಥವಾ ಇಷ್ಟವಿಲ್ಲವೇ @BJP4Karnataka?… pic.twitter.com/S97Yaknkt5