ಇರಾನ್ ಪೊಲೀಸರ ಬೆಂಗಾವಲು ಪಡೆಯ ಮೇಲೆ ದಾಳಿ : 10 ಅಧಿಕಾರಿಗಳ ಮೃತ್ಯು

Update: 2024-10-26 16:49 GMT

ಸಾಂದರ್ಭಿಕ ಚಿತ್ರ | PC : timesofindia

ಟೆಹ್ರಾನ್ : ಇರಾನ್‍ನ ಪ್ರಕ್ಷುಬ್ಧ ಆಗ್ನೇಯ ಪ್ರಾಂತದಲ್ಲಿ ಶನಿವಾರ ನಡೆದ ದಾಳಿಯಲ್ಲಿ ದೇಶದ ರಾಷ್ಟ್ರೀಯ ಪೊಲೀಸ್ ಪಡೆಯ 10 ಅಧಿಕಾರಿಗಳು ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಇರಾನ್ ರಾಜಧಾನಿ ಟೆಹ್ರಾನ್‍ನ ಆಗ್ನೇಯಕ್ಕೆ ಸುಮಾರು 1,200 ಕಿ.ಮೀ ದೂರದಲ್ಲಿರುವ ಗೊಹರ್ ಕುಹ್ ಪ್ರದೇಶದಲ್ಲಿ ಪೊಲೀಸ್ ಬೆಂಗಾವಲು ಪಡೆಯ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿದ್ದು 10 ಅಧಿಕಾರಿಗಳು ಬಲಿಯಾಗಿದ್ದಾರೆ. ಯಾವುದೇ ಗುಂಪು ದಾಳಿಯ ಹೊಣೆ ವಹಿಸಿಲ್ಲ ಎಂದು ಸರಕಾರಿ ಸ್ವಾಮ್ಯದ ಇರ್ನಾ ಸುದ್ದಿಸಂಸ್ಥೆ ವರದಿ ಮಾಡಿದೆ.

ಭದ್ರತಾ ಪಡೆಗಳ ಎರಡು ವಾಹನಗಳನ್ನು ಗುರಿಯಾಗಿಸಿ ಗುಂಡಿನ ದಾಳಿ ನಡೆದಿದೆ. ಯಾವುದೇ ಸ್ಫೋಟ ನಡೆದಿಲ್ಲ. ಘಟನೆಯ ಬಗ್ಗೆ ತನಿಖೆಗೆ ಸರಕಾರ ಆದೇಶಿಸಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

Tags:    

Writer - ವಾರ್ತಾಭಾರತಿ

contributor

Editor - Mushaveer

contributor

Byline - ವಾರ್ತಾಭಾರತಿ

contributor

Similar News