ಸುಳ್ಯದ ‘ಚಿರಾಪುಂಜಿ’ ಮಂಡೆಕೋಲಿನಲ್ಲಿ ಅತೀ ಹೆಚ್ಚು ಮಳೆ: ಕಳೆದ 24 ಗಂಟೆಯಲ್ಲಿ 217 ಮಿ.ಮಿ. ಮಳೆ ದಾಖಲು

Update: 2023-07-25 08:31 GMT

ಸಾಂದರ್ಭಿಕ ಚಿತ್ರ

ಸುಳ್ಯ: ರಾಜ್ಯ ವಿವಿಧ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿದ್ದು ಕಳೆದ 24 ಗಂಟೆಯಲ್ಲಿ ಸುಳ್ಯ ತಾಲೂಕಿನ ಮಂಡೆಕೋಲಿನಲ್ಲಿ ಎರಡನೇ ಬಾರಿ ರಾಜ್ಯದಲ್ಲಿಯೇ ಅತೀ ಹೆಚ್ಚು ಮಳೆಯಾಗಿದೆ. ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರ (ಕೆಎಸ್‌ಎನ್‌ಡಿಎಂಸಿ) ನೀಡಿದ ಮಳೆ ದಾಖಲೆ ಮಾಹಿತಿಯಂತೆ

ಜು.24 ಬೆಳಿಗ್ಗೆ 8.30ರಿಂದ ಜು.25 ಬೆಳಿಗ್ಗೆ 8.30ರ ತನಕ 24 ಗಂಟೆಯಲ್ಲಿ ಮಂಡೆಕೋಲಿನಲ್ಲಿ 217 ಮಿ.ಮಿ.ಮಳೆಯಾಗಿದೆ. ರಾಜ್ಯದ ಅತೀ ಹೆಚ್ಚು ಮಳೆ ಸುರಿದ 60 ಕೇಂದ್ರಗಳ ಪಟ್ಟಿಯನ್ನು ಕೆಎಸ್ಎನ್‌ಡಿಎಂಸಿ ಬಿಡುಗಡೆ ಮಾಡಿದ್ದು ಸುಳ್ಯ ತಾಲೂಕಿನ ಅರಂತೋಡಿನಲ್ಲಿ 185 ಮಿ.ಮಿ, ಬೆಳ್ಳಾರೆಯಲ್ಲಿ 183.5 ಮಿ.ಮಿ, ಸಂಪಾಜೆಯಲ್ಲಿ 158 ಮಿ.ಮಿ, ದೇವಚಳ್ಳ 155 ಮಿ.ಮಿ. ನೆಲ್ಲೂರು ಕೆಮ್ರಾಜೆ‌ 148 .5 ಮಳೆಯಾಗಿದೆ. ಇತ್ತಿಚಿನ ದಿನಗಳಲ್ಲಿ ರಾಜ್ಯದಲ್ಲಿ ಅತೀ ಹೆಚ್ಚು ಮಳೆಯಾಗುವ ಮೂಲಕ ಮಂಡೆಕೋಲು ಗಮನ ಸೆಳೆದಿದೆ. ಕಳೆದ 24 ಗಂಟೆಯಲ್ಲಿ ದಕ್ಷಿಣ ಕನ್ನಡ, ಕೊಡಗು, ಉಡುಪಿ, ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಭಾರೀ ಮಳೆಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News