ಇಂಡಿಗೊ ವಿಮಾನದಲ್ಲಿ ಕೈಕೊಟ್ಟ AC; ಪರದಾಡಿದ ಪ್ರಯಾಣಿಕರು

Update: 2023-08-06 11:45 GMT

Photo: Twitter/@RajaBrar_INC

ಚಂಡೀಗಢ: ಚಂಡೀಗಢ-ಜೈಪುರ ಮಾರ್ಗವಾಗಿ ಪ್ರಯಾಣ ಬೆಳೆಸಿದ್ದ ಇಂಡಿಗೊ 6E7261 ವಿಮಾನದಲ್ಲಿನ ತಮ್ಮ ಭಯಾನಕ ಅನುಭವವನ್ನು ಶನಿವಾರ ಹಂಚಿಕೊಂಡಿರುವ ಪಂಜಾಬ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಅಮರಿಂದರ್ ಸಿಂಗ್ ರಾಜಾ, "ವಿಮಾನದಲ್ಲಿದ್ದ ಪ್ರಯಾಣಿಕರ ಪಾಲಿಗೆ ಅದು 90 ನಿಮಿಷಗಳ ಭಯಾನಕ ಅನುಭವವಾಗಿತ್ತು. ಅವರನ್ನು ಹವಾನಿಯಂತ್ರಣ ವ್ಯವಸ್ಥೆಯಿಲ್ಲದ ವಿಮಾನದಲ್ಲಿ ಕೂರುವಂತೆ ಮಾಡಲಾಗಿತ್ತು" ಎಂದು ಸಾಮಾಜಿಕ ಮಾಧ್ಯಮ ಪೋಸ್ಟ್ ಒಂದರಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ ಎಂದು indiatoday.in ವರದಿ ಮಾಡಿದೆ.

ಈ ಕುರಿತು ದೂರಿರುವ ಕಾಂಗ್ರೆಸ್ ನಾಯಕ, “ಪ್ರಯಾಣಿಕರಿಗೆ ಮೊದಲು ತೀವ್ರ ಸೆಖೆಯಲ್ಲಿ 10-15 ನಿಮಿಷ ಸರತಿಯಲ್ಲಿ ಕಾಯುವಂತೆ ಮಾಡಲಾಯಿತು. ನಂತರ ಹವಾನಿಯಂತ್ರಣ ವ್ಯವಸ್ಥೆಯನ್ನು ಚಾಲನೆ ಮಾಡದೆ ವಿಮಾನ ಟೇಕಾಫ್ ಆಯಿತು" ಎಂದು ಹೇಳಿದ್ದಾರೆ.

"ವಿಮಾನ ಭೂಸ್ಪರ್ಶ ಆಗುವವರೆಗೂ ಪ್ರಯಾಣಿಕರನ್ನು ನರಳುವಂತೆ ಮಾಡಲಾಯಿತು. ವಿಮಾನದಲ್ಲಿನ ಈ ಗಂಭೀರ ಸಮಸ್ಯೆಯ ಕುರಿತು ಯಾರೂ ಗಮನ ನೀಡಲಿಲ್ಲ. ವಾಸ್ತವವಾಗಿ, ಪ್ರಯಾಣಿಕರು ತಮ್ಮ ಬೆವರನ್ನು ಒರೆಸಿಕೊಳ್ಳಲು ಗಗನಸಖಿಯು ಟಿಶ್ಯೂ ಪೇಪರ್‌ಗಳನ್ನು ಪೂರೈಸಿದಳು" ಎಂದು ಅವರು ಟ್ವೀಟ್ ಮಾಡಿದ್ದಾರೆ.

ಅವರು ತಮ್ಮ ಟ್ವೀಟ್‌ನೊಂದಿಗೆ ನಾಗರಿಕ ವಿಮಾನ ಯಾನ ಮಹಾ ನಿರ್ದೇಶನಾಲಯ ಹಾಗೂ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರಗಳನ್ನು ಲಗತ್ತಿಸಿದ್ದು, ವಿಮಾನ ಯಾನ ಸಂಸ್ಥೆಯ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ್ದಾರೆ.

ತಾಂತ್ರಿಕ ತೊಂದರೆಯಿಂದ ಇಂತಹ ಘಟನೆ ನಡೆಯುತ್ತಿರುವುದು ಇದು ಮೂರನೆಯ ಬಾರಿಯಾಗಿದೆ.

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News