ಉಡುಪಿಯ ಅಲ್-ಇಬಾದ ಇಂಡಿಯನ್ ಸ್ಕೂಲ್‌ಗೆ ಸಿಬಿಎಸ್‌ಇ ಮಾನ್ಯತೆ
ಉಡುಪಿ: ಝೈದ್ ಅಕಾಡೆಮಿ ಆಡಳಿತದಲ್ಲಿ ಉಡುಪಿಯ ಪೆರಪಂಳ್ಳಿಯಲ್ಲಿ ಮುನ್ನಡೆಯುತ್ತಿರುವ ಪ್ರತಿಷ್ಠಿತ ಅಲ್-ಇಬಾದ ಇಂಡಿಯನ್ ಸ್ಕೂಲ್ ಇದೀಗ ಭಾರತ ಸರಕಾರದಿಂದ ಸಿಬಿಎಸ್‌ಇ ಮಾನ್ಯತೆ ಪಡೆದುಕೊಂಡಿದೆ.
ಹಮ್ಮದ್ ಬಶೀರ್ ಇದಿನಬ್ಬ ಮತ್ತು ಅಬ್ದುಲ್ ಲತೀಫ್ ಮದನಿ 2013ರಲ್ಲಿ ಅಲ್-ಇಬಾದ ಇಂಡಿಯನ್ ಸ್ಕೂಲ್ ಅನ್ನು ಸ್ಥಾಪಿಸಿದರು. ಝೈದ್ ಅಕಾಡೆಮಿಯ ಅಧ್ಯಕ್ಷರಾಗಿ ಹಮ್ಮದ್ ಬಶೀರ್ ಇದಿನಬ್ಬ ಹಾಗೂ ಕಾರ್ಯದರ್ಶಿ ಮತ್ತು ಆಡಳಿತ ನಿರ್ದೇಶಕರಾಗಿ ಅಬ್ದುಲ್ ಲತೀಫ್ ಮದನಿ, ಪ್ರಾಂಶುಪಾಲರಾಗಿ ಜುವೇರಿಯಾ ಹಯಾತ್ ಕಾರ್ಯನಿರ್ವಹಿಸುತ್ತಿದ್ದಾರೆ.
ನಮ್ಮ ಶಾಲೆಯಲ್ಲಿರುವ ಎಲ್ಲ ರೀತಿಯ ಆಧುನಿಕ ಸೌಲಭ್ಯ, ತಂತ್ರಜ್ಞಾನ, ತರಗತಿ, ಆಟದ ಮೈದಾನ, ಮಕ್ಕಳ ಶಿಕ್ಷಣ, ಶಿಕ್ಷಕ ವೃಂದ ಮತ್ತು ಶಿಕ್ಷಕೇತರ ವೃಂದ, ಕಟ್ಟಡ ವಿನ್ಯಾಸಗಳ ಆಧಾರದಲ್ಲಿ ಸಿಬಿಎಸ್‌ಸಿ ಮಾನ್ಯತೆಯನ್ನು ಭಾರತ ಸರಕಾರ ನೀಡಿದೆ. ಇದು ನಮ್ಮ ಸಂಸ್ಥೆಯ ಬಹಳ ದೊಡ್ಡ ಸಾಧನೆಯಾಗಿದೆ ಎಂದು ಅಬ್ದುಲ್ ಲತೀಫ್ ಮದನಿ ತಿಳಿಸಿದ್ದಾರೆ.
ಎಲ್‌ಕೆಜಿಯಿಂದ 9ನೇ ತರಗತಿಯವರೆಗೆ 500ಕ್ಕೂ ಅಧಿಕ ವಿದ್ಯಾರ್ಥಿಗಳು ನಮ್ಮಲ್ಲಿ ಕಲಿಯುತ್ತಿದ್ದಾರೆ. ಕಾಪು, ಶಿರ್ವದಿಂದ ಕುಂದಾಪುರದವರೆಗಿನ ಮಕ್ಕಳು ಕೂಡ ನಮ್ಮ ಶಾಲೆಗೆ ಬರುತ್ತಾರೆ. ಮಕ್ಕಳ ಸುರಕ್ಷತೆಯ ದೃಷ್ಠಿಯಿಂದ ಶಾಲೆಯ ಒಳಗೂ ಹೊರಗು ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಲಿಫ್ಟ್ ಸೇರಿದಂತೆ ಅತ್ಯಾಧುನಿಕ ಸೌಲಭ್ಯಗಳನ್ನು ಶಾಲೆಯಲ್ಲಿ ಒದಗಿಸಲಾಗಿದೆ. ಅಗ್ನಿ ಸುರಕ್ಷತೆ ಕ್ರಮ ವಹಿಲಾಗಿದೆ. ನಮ್ಮಲ್ಲಿ 10 ಶಾಲಾ ವಾಹನಗಳಿದ್ದು, 38 ಶಿಕ್ಷಕರು, 30 ಶಿಕ್ಷಕೇತರ ಸಿಬ್ಬಂದಿಗಳಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ನಾವು ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಮತ್ತು ಸಮಗ್ರ ಅಭಿವೃದ್ಧಿಗೆ ಬೇಕಾದ ಸಂಸ್ಕಾರಯುತ ಹಾಗೂ ಗುಣಮಟ್ಟದ ಶಿಕ್ಷಣವನ್ನು ನೀಡುತ್ತ ಬರುತ್ತಿದ್ದೇವೆ. ಸೃಜನಶೀಲ, ಹೊಸತನ ಹಾಗೂ ಕೌಶಲ್ಯ ಆಧಾರಿತ ಶಿಕ್ಷಣವನ್ನು ಮಾತ್ರವಲ್ಲದೆ ನೈತಿಕ ಅಧ್ಯಯನಗಳನ್ನು ಕೂಡ ಮಕ್ಕಳಿಗೆ ನೀಡುತ್ತಿದ್ದೇವೆ. ನಮ್ಮಲ್ಲಿ ಕ್ರೀಡೆಗೂ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಈ ವರ್ಷದ ಎಲ್‌ಕೆಜಿಯಿಂದ 9ನೇ ತರಗತಿವರೆಗೆ ಪ್ರವೇಶ ಲಭ್ಯವಿದೆ ಎಂದು ಅಬ್ದುಲ್ ಲತೀಫ್ ಮದನಿ ತಿಳಿಸಿದ್ದಾರೆ.
ವೈಜ್ಞಾನಿಕ ಪ್ರಯೋಗಗಳನ್ನು ನಡೆಸಲು ನಮ್ಮಲ್ಲಿ ಅತ್ಯಾಧುನಿಕ ವಿಜ್ಞಾನ ಪ್ರಯೋಗಾಳಯಗಳಿವೆ. ನಾವು ನಮ್ಮ ವಿದ್ಯಾರ್ಥಿಗಳ ಸಾಮರ್ಥ್ಯವನ್ನು ಸಾಬೀತುಪಡಿಸಲು ವೈಜ್ಞಾನಿಕ ಪ್ರದರ್ಶನಗಳನ್ನು ನಡೆಸುತ್ತೇವೆ. ಕಂಪ್ಯೂಟರ್ ಶಿಕ್ಷಣಕ್ಕಾಗಿ ಕಂಪ್ಯೂಟರ್ ಲ್ಯಾಬ್ ಗಳಿವೆ. ನಮ್ಮ ಮಕ್ಕಳ ಚೈತನ್ಯಯುತ ಆರೋಗ್ಯಕ್ಕಾಗಿ ತಜ್ಞರಿಂದ ಏರೋಬಿಕ್ ವ್ಯಾಯಾಮವನ್ನು ನೀಡುತ್ತೇವೆ ಎಂದು ಅವರು ಹೇಳಿದರು.
"ನಮ್ಮ ಸಂಸ್ಥೆಗೆ ಭಾರತ ಸರಕಾರದಿಂದ ಸಿಬಿಎಸ್‌ಇ ಮಾನ್ಯತೆ ದೊರೆತಿರುವುದು ಬಹಳ ದೊಡ್ಡ ಮೈಲಿಗಲ್ಲು ಆಗಿದೆ. ನಮ್ಮ ಶಾಲೆಯಲ್ಲಿ ಮಕ್ಕಳ ಸಮಗ್ರ ಅಭಿವೃದ್ಧಿ ರೂಪಿಸುವಂತಹ ಶಿಕ್ಷಣ ನೀಡುತ್ತಿದ್ದು, ಅದಕ್ಕೆ ಬೇಕಾದ ಶಿಕ್ಷಕರು ಸೇರಿದಂತೆ ಎಲ್ಲ ರೀತಿಯ ಅತ್ಯಾಧುನಿಕ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಈ ಎಲ್ಲ ಸೌಲಭ್ಯ ಹಾಗೂ ಸೇವೆಗಳ ಪ್ರಯೋಜನವನ್ನು ಉಡುಪಿಯ ಜಿಲ್ಲೆಯ ಜನತೆ ಪಡೆಯಲಿದ್ದಾರೆ’
-ಹಮ್ಮದ್ ಬಶೀರ್ ಇದಿನಬ್ಬ, ಅಧ್ಯಕ್ಷರು, ಝೈದ್ ಅಕಾಡೆಮಿ
ಶಾಲೆಯ ಕುರಿತ ವಿಡಿಯೋಗಳ ಲಿಂಕ್ ಇಲ್ಲಿದೆ: https://www.youtube.com/@alibaadahindianschool978