ಸೌಜನ್ಯ ಪ್ರಕರಣದ ವಿಶೇಷ ತನಿಖೆಗೆ ಸಿಪಿಐ (ಎಂ) ಆಗ್ರಹ

Update: 2023-08-25 16:05 GMT

ಉಡುಪಿ, ಆ.25: ಈಚೆಗೆ ರಾಜ್ಯದ ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರು ಸೌಜನ್ಯ ಪ್ರಕರಣ ಮುಗಿದ ಅಧ್ಯಾಯ ವೆಂದು ಪ್ರಕಟಿಸಿರುವುದು ಖಂಡನೀಯ. ಸೌಜನ್ಯ ಪ್ರಕರಣ ನಡೆದು ಒಂದು ದಶಕವೇ ಪೂರೈಸಿದ್ದರೂ, ತನಿಖಾ ಸಂಸ್ಥೆಗಳಿಗೆ ಆರೋಪಿಯನ್ನು ಕಂಡು ಹಿಡಿಯಲು ಸಾದ್ಯವಾಗದಿ ರುವಾಗ, ಈ ರೀತಿಯ ಹೇಳಿಕೆಗಳು, ಗೃಹ ಸಚಿವಾಲಯ ಮತ್ತು ರಾಜ್ಯ ಸರಕಾರದ ಕುರಿತಂತೆ ರಾಜ್ಯದ ಜನತೆಗೆ ಅನುಮಾನ ಮೂಡಲು ಕಾರಣವಾಗುತ್ತದೆ ಎಂದು ಸಿಪಿಐ(ಎಂ) ಪ್ರಕಟಣೆಯಲ್ಲಿ ತಿಳಿಸಿದೆ.

ಈಗಲೂ ಸೌಜನ್ಯ ಪ್ರಕರಣದಲ್ಲಿ ಆರೋಪಿ ಯಾರೆಂದು ತನಿಖಾ ಸಮಿತಿಗಳಿಗೆ ಗುರುತಿಸಲಾಗಲಿಲ್ಲ. ಈ ನಡುವೆ ಸೌಜನ್ಯ ಪ್ರಕರಣದ ಪ್ರಮುಖ ಸಾಕ್ಷಿಗಳು ಕೊಲ್ಲಲ್ಪಟ್ಟಿದ್ದಾರೆ. ಇವೆಲ್ಲವೂ ಜನತೆಯ ನಡುವೆ ಪ್ರಶ್ನೆಗಳನ್ನು ಮತ್ತು ಆತಂಕಗಳನ್ನು ಹುಟ್ಟು ಹಾಕಿವೆ. ಈ ಘಟನೆಯ ಸಮಯದ ಸುತ್ತಲೂ ಆ ಪ್ರದೇಶದಲ್ಲಿ 400ಕ್ಕೂ ಹೆಚ್ಚು ಕೊಲೆ ಹಾಗೂ ಆತ್ಮಹತ್ಯೆಗಳು ನಡೆದಿವೆ ಎನ್ನಲಾಗಿದೆ. ಈ ಎಲ್ಲದರ ಕುರಿತು ಆತಂಕಿತ ಜನತೆ ಮತ್ತು ಪ್ರಜಾಸತ್ತಾತ್ಮಕ ಸಂಘಟನೆಗಳು ನ್ಯಾಯ ಕೋರಿ ಜನ ಚಳುವಳಿಗಳನ್ನು ಪುನಹ ಆರಂಭಿಸಿವೆ ಎಂದು ಹೇಳಿಕೆ ತಿಳಿಸಿದೆ.

ಇವೆಲ್ಲವನ್ನು ಗಮನಿಸಿ ರಾಜ್ಯ ಸರಕಾರ, ಗೃಹಸಚಿವ ಡಾ. ಪರಮೇಶ್ವರ್ ಅವರ ಹೇಳಿಕೆಯನ್ನು ಹಿಂಪಡೆದು ಪ್ರಕರಣವನ್ನು ವಿಶೇಷ ತನಿಖಾ ಸಮಿತಿಗೆ ವಹಿಸಿಕೊಡಬೇಕೆಂದು ಸಿಪಿಐ(ಎಂ) ಉಡುಪಿ ಜಿಲ್ಲಾ ಸಮಿತಿ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದೆ.

ಉಡುಪಿ ಜಿಲ್ಲೆಯಿಂದಲೂ ಆ.28ರಂದು (ಸೋಮವಾರ) ಜನಪರ ಸಂಘಟನೆಗಳ ವೇದಿಕೆ ವತಿಯಿಂದ ಬೆಳ್ತಂಗಡಿ ತಾಲೂಕು ಕಚೇರಿ ಎದುರು ನಡೆಯುವ ಧರಣಿ ಸತ್ಯಾಗ್ರಹದಲ್ಲಿ ನೂರಾರು ಜನರು ಭಾಗವಹಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News