ಅಡ್ಡಬಂದ ನಾಯಿ: ಬೈಕ್ ಸ್ಕೀಡ್ ಆಗಿ ಸಹಸವಾರ ಮೃತ್ಯು

Update: 2024-08-23 21:14 IST
ಅಡ್ಡಬಂದ ನಾಯಿ: ಬೈಕ್ ಸ್ಕೀಡ್ ಆಗಿ ಸಹಸವಾರ ಮೃತ್ಯು
  • whatsapp icon

ಬೈಂದೂರು, ಆ.23: ನಾಯಿ ರಸ್ತೆಗೆ ಅಡ್ಡ ಬಂದ ಪರಿಣಾಮ ಬೈಕೊಂದು ಬಿದ್ದು ಸಹಸವಾರ ಮೃತಪಟ್ಟ ಘಟನೆ ಸೂರ್ಕುಂದ ಕಾಳಿಕಾಂಬಾ ಇಂಜಿನಿ ಯರ್ ವರ್ಕ್ಸ್ ಬಳಿ ಆ.22ರಂದು ರಾತ್ರಿ 9.30ರ ಸುಮಾರಿಗೆ ನಡೆದಿದೆ.

ಮೃತರನ್ನು ಬೈಕ್ ಸಹಸವಾರ ವಿನಯ ಎಂದು ಗುರುತಿಸಲಾಗಿದೆ. ಸವಾರ ಮಣಿದೀಪ ಎಂಬವರು ಗಾಯಗೊಂಡು ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬೈಂದೂರು ಕಡೆಯಿಂದ ಸೂರ್ಕುಂದ ಕಡೆಗೆ ಹೋಗುತ್ತಿ ದ್ದಾಗ ಬೈಕಿಗೆ ನಾಯಿಯೊಂದು ಅಡ್ಡ ಬಂತು. ಅದನ್ನು ತಪ್ಪಿಸುವ ಭರದಲ್ಲಿ ಬೈಕ್ ಹತೋಟಿ ತಪ್ಪಿರಸ್ತೆಗೆ ಬಿತ್ತೆನ್ನಲಾಗಿದೆ.

ಇದರಿಂದ ರಸ್ತೆಗೆ ಬಿದ್ದು ಇಬ್ಬರು ಗಾಯಗೊಂಡಿದ್ದು, ಇವರಲ್ಲಿ ಗಂಭೀರ ವಾಗಿ ಗಾಯಗೊಂಡಿದ್ದ ವಿನಯ ಉಡುಪಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು ಎಂದು ತಿಳಿದುಬಂದಿದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News