ಕೋಟದಲ್ಲಿ ಸೌಹಾರ್ದ ಈದ್ ಮಿಲನ
ಕೋಟ : ಧರ್ಮ ಧರ್ಮದ ನಡುವೆ ಸಂಬಂಧಗಳು ಗಟ್ಟಿಗೊಂಡು ಸಹಬಾಳ್ವೆ ಜೀವನ ನಡೆಸುವಂತಾಗಬೇಕು. ರಂಜಾನ್ ಹಬ್ಬ ಸೌಹಾರ್ದತೆಯ ಜತೆ ಸಾಮರಸ್ಯ ಬೆಸೆಯುವ ಕಾರ್ಯ ಮಾಡುತ್ತದೆ ಎಂದು ಕೋಟದ ಸೈಂಟ್ ಜೋಸೇಫ್ ಚರ್ಚ್ ನ ಧರ್ಮಗುರು ಫಾದರ್ ಸ್ಟ್ಯಾನಿ ತಾವ್ರೋ ಹೇಳಿದ್ದಾರೆ.
ಕೋಟ ಜಾಮಿಯ ಮಸೀದಿಯ ಆಶ್ರಯದಲ್ಲಿ ರಮಝಾನ್ ಅಂಗವಾಗಿ ಸೋಮವಾರ ನಡೆದ ಸೌಹಾರ್ದ ಈದ್ ಮಿಲನ ರಮಝಾನ್-2025 ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಮುಸ್ಲಿಂ ಭಾಂಧವ್ಯ ವೇದಿಕೆ ಕರ್ನಾಟಕ ಸಂಚಾಲಕ ಮುಸ್ತಾಕ್ ಹೆನ್ನೆಬೈಲ್ ಈದ್ ಸಂದೇಶ ನೀಡಿದರು. ಈ ಸಂದರ್ಭದಲ್ಲಿ ಅನಾರೋಗ್ಯ ಪೀಡಿತರನ್ನು ಗುರುತಿಸಿ ಸಹಾಯಹಸ್ತ ನೀಡಲಾಯಿತು. ಕೋಟ ಮಸೀದಿ ಉಪಾಧ್ಯಕ್ಷ ವಾಹಿದ್ ಅಲಿ ಅಧ್ಯಕ್ಷತೆ ವಹಿಸಿದ್ದರು.
ಕೋಟತಟ್ಟು ಗ್ರಾಪಂ ಅಧ್ಯಕ್ಷ ಸತೀಶ್ ಕುಂದರ್, ಸದಸ್ಯ ಚಂದ್ರ ಪೂಜಾರಿ, ಮಸೀದಿ ಧರ್ಮಗುರು ಮೌಲಾನ ಮೋಮಿನ್ ಅಶ್ಭಕ್ ಉಪಸ್ಥಿತರಿದ್ದರು. ಮಸೀದಿ ಕಾರ್ಯದರ್ಶಿ ಅಬ್ದುಲ್ ಬಷೀರ್ ಸಾಹೇಬ್ ಸ್ವಾಗತಿಸಿ, ಕಾರ್ಯ ಕ್ರಮ ನಿರೂಪಿಸಿದರು. ಮಾಜಿ ಅಧ್ಯಕ್ಷ ಇಬ್ರಾಹಿಂ ಸಾಹೇಬ್ ಕೋಟ ವಂದಿಸಿದರು.