ಕಾರ್ಕಳ: ಸರಕಾರಿ ಉರ್ದು ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಶೇಕ್ ಸಮಿಯುಲ್ಲಾರಿಗೆ ಬೀಳ್ಕೊಡುಗೆ

Update: 2023-07-28 09:16 GMT

ಕಾರ್ಕಳ : ಕಳೆದ 16 ವರ್ಷಗಳಿಂದ ಕಾರ್ಕಳ ಸರಕಾರಿ ಉರ್ದು ಪ್ರಾಥಮಿಕ ಶಾಲೆಯಲ್ಲಿ ಉಪಾಧ್ಯಾಯರಾಗಿ, ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿ ಇದೀಗ ತಮ್ಮ ಸ್ವಂತ ಊರಾದ ತರೀಕೆರೆಗೆ ವರ್ಗಾವಣೆಗೊಂಡ ಮುಖ್ಯೋಪಾಧ್ಯಾಯರಾದ ಶೇಕ್ ಸಮಿಯುಲ್ಲಾರವರಿಗೆ ಕಾರ್ಕಳ ಮುಸ್ಲಿಂ ಜಮಾತಿನ ವತಿಯಿಂದ ಸನ್ಮಾನ ಹಾಗೂ ಬೀಳ್ಕೊಡುಗೆ ಸಮಾರಂಭವು ಜಮಾತಿನ ಕಚೇರಿಯಲ್ಲಿ ನಡೆಯಿತು .

ಜಮಾತಿನ ಅಧ್ಯಕ್ಷರಾದ ಅಷ್ಪಾಕ್ ಅಹಮ್ಮದ್ ರವರು ಶಾಲು ಹೊದಿಸಿ ಫಲ ಪುಷ್ಪ ಸ್ಮರಣಿಕೆಯನ್ನು ನೀಡಿ ಗೌರವಿಸಿದರು.

ಜಾಮಿಯಾ ಮಸೀದಿ ಧರ್ಮ ಗುರುಗಳಾದ ಮೌಲನ ಜಹೀರ್ ಅಹ್ಮದ್ ಅಲ್ ಖಾಸ್ಮಿ ದುವ ನೆರವೇರಿಸಿದರು

ಜಮೀಯತುಲ್ ಫಲಾಹ್ ಕಾರ್ಕಳ ಘಟಕದ ಅಧ್ಯಕ್ಷರಾದ ಮೊಹಮ್ಮದ್ ಯಾಕೂಬ್ ಸ ಕಾರ್ಯದರ್ಶಿ ಸೈಯದ್ ಹಸನ್, ಕಾರ್ಕಳ ಮುಸ್ಲಿಂ ಜಮಾತಿನ ಕಾರ್ಯದರ್ಶಿ ಶಬ್ಬೀರ್ ಅಹಮದ್, ಅಬ್ದುಲ್ ರಶೀದ್ ಬಂಗ್ಲೆಗುಡ್ಡೆ ಕಾರ್ಕಳ ಸೇವಾ ದಳದ ಅಧ್ಯಕ್ಷ ಅಬ್ದುಲ್ಲಾ ಪುಲ್ಕೆರಿ ಮುಹಮ್ಮದ್ ಮುಸ್ತಫ, ಏಜಾಜ್ ಶರೀಫ್ , ಸಯ್ಯದ್ ಅಬ್ಬಾಸ್ ಇನ್ನಿತರರು ಉಪಸಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News