ಉಡುಪಿಯಲ್ಲಿ ಕುಮಾರವ್ಯಾಸ ಜಯಂತಿ ಆಚರಣೆ

Update: 2024-01-14 14:26 GMT

ಉಡುಪಿ: ಉಡುಪಿ ಜಿಲ್ಲಾ ಮತ್ತು ತಾಲೂಕು ಗಮಕ ಕಲಾ ಪರಿಷತ್ತಿನ ವತಿಯಿಂದ ಕುಮಾರವ್ಯಾಸ ಜಯಂತಿಯನ್ನು ಉಡುಪಿ ಕುಕ್ಕಿಕಟ್ಟೆಯ ಮುಚ್ಲುಕೋಡು ಶ್ರೀವಾಸುಕಿ ಸುಬ್ರಹ್ಮಣ್ಯ ದೇವಳದ ವಠಾರದಲ್ಲಿ ಆಚರಿಸಲಾಯಿತು.

ಪಡುಬಿದ್ರೆ ಗಣಪತಿ ಪ್ರೌಢಶಾಲಾ ಪ್ರಾಧ್ಯಾಪಕರಾದ ಡಾ. ರಾಘವೇಂದ್ರ ರಾವ್ ಕಟಪಾಡಿ ತಮ್ಮ ವಿಶೇಷ ಉಪನ್ಯಾಸದಲ್ಲಿ ಕುಮಾರವ್ಯಾಸನ ಜೀವನ ಮತ್ತು ಸಾಹಿತ್ಯ ರಚನೆಗಳ ಬಗ್ಗೆ ವಿಸ್ತೃತ ಚಿತ್ರಣವನ್ನು ನೀಡಿದರು.

ಗಮಕ ಕಲಾ ಪರಿಷತ್ತಿನ ಜಿಲ್ಲಾ ಅಧ್ಯಕ್ಷ ಸತೀಶ್ ಕುಮಾರ್ ಕೆಮ್ಮಣ್ಣು, ಉಡುಪಿ ತಾಲೂಕು ಗಮಕ ಕಲಾ ಪರಿಷತ್ತಿನ ಅಧ್ಯಕ್ಷ ಪ್ರೊ. ಎಂ.ಎಲ್. ಸಾಮಗ, ಕುಂದಾಪುರ ತಾಲೂಕು ಗಮಕ ಕಲಾ ಪರಿಷತ್ತಿನ ಅಧ್ಯಕ್ಷ ಸುಜಯೀಂದ್ರ ಹಂದೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಮಾರಂಭದ ಅಂಗವಾಗಿ ನಡೆದ ಗಮಕ ವಾಚನ-ವ್ಯಾಖ್ಯಾನ ಕಾರ್ಯಕ್ರಮದಲ್ಲಿ ಮೂಡುಬೆಳ್ಳೆಯ ಸೈಂಟ್ ಜೋಸೆಫ್ ಪಿ ಯು ಕಾಲೇಜಿನ ನಿವೃತ್ತ ಉಪನ್ಯಾಸಕಿ ಚಂದ್ರಕಲಾ ಶರ್ಮ ವಾಚನವನ್ನೂ, ಗಮಕ ಕಲಾ ಪರಿಷತ್ತಿನ ಸಕ್ರಿಯ ಸದಸ್ಯೆ ಸುಜಲಾ ಎನ್ ಭಟ್ ವ್ಯಾಖ್ಯಾನವನ್ನೂ ನಡೆಸಿಕೊಟ್ಟರು.

ಉಡುಪಿಯ ಸರಕಾರಿ ಪಾಲಿಟೆಕ್ನಿಕ್ ಕಾಲೇಜಿನ ಉಪನ್ಯಾಸಕಿ ವಂದನಾ ಸ್ವಾಗತಿಸಿದರು. ಹಿರಿಯಡ್ಕ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಉಪನ್ಯಾಸಕಿ ಡಾ. ಸೌಮ್ಯಲತಾ ಹೆಬ್ಬಾರ್ ವಂದಿಸಿದರು. ಗಮಕ ಕಲಾ ಪರಿಷತ್ತಿನ ಜಿಲ್ಲಾ ಖಜಾಂಚಿ ಕೃಷ್ಣಕುಮಾರ್ ರಾವ್ ಮಟ್ಟು ಕಾರ್ಯಕ್ರಮ ಸಂಯೋಜಿಸಿದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News