ಕೈಮಗ್ಗಕ್ಕೆ ನಬಾರ್ಡ್ ಅನುದಾನ ಶೀಘ್ರ ಬಿಡುಗಡೆ: ರಮೇಶ್ ಟಿ
ಉಡುಪಿ : ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮ್ ರವರ ಶಿಫಾರಸಿನ ಮೇರೆಗೆ ನಬಾರ್ಡ್ ಕರ್ನಾಟಕದ ವಿಭಾಗೀಯ ಮುಖ್ಯ ಮಹಾ ಪ್ರಬಂಧಕ ರಮೇಶ್ ಟಿ., ಡಿಡಿಎಂ ಸಂಗೀತಾ ಎಸ್.ಕರ್ತಾ ಅವರೊಂದಿಗೆ ಶನಿವಾರ ಉಡುಪಿಯ ಪ್ರಾಥಮಿಕ ನೇಕಾರರ ಸೇವಾ ಸಹಕಾರಿ ಸಂಘದ ಕಚೇರಿಗೆ ಭೇಟಿ ನೀಡಿದರು.
ಸಹಕಾರಿ ಸಂಘದ ಕೈಮಗ್ಗ ನೇಕಾರಿಕೆಯ ಅಭಿವೃದ್ಧಿ ಮತ್ತು ಉಡುಪಿ ಸೀರೆಗಳ ಪುನಶ್ಚೇತನದ ಕಾರ್ಯಕ್ರಮಗಳ ಮುಂದಿನ ಕಾರ್ಯ ಯೋಜನೆಗಳ ಬಗ್ಗೆ ಆಡಳಿತ ಮಂಡಳಿಯ ಜೊತೆ ಸಮಾಲೋಚನೆ ನಡೆಸಿ ಮಾಹಿತಿ ಸಂಗ್ರಹ ಮಾಡಿದ ಅವರು, ಈ ಅಭಿವೃದ್ಧಿ ಚಟುವಟಿಕೆಗಳಿಗೆ ನಬಾರ್ಡ್‌ನ ಮೂಲಕ ದೊರಕುವ ಅನುದಾನಗಳನ್ನು ಶೀಘ್ರದಲ್ಲಿ ಬಿಡುಗಡೆ ಮಾಡುವ ಬಗ್ಗೆ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಅವರನ್ನು ನೇಕಾರರ ಸಹಕಾರಿ ಸಂಘದ ಪರವಾಗಿ ಸಂಘದ ಪರವಾಗಿ ಅಭಿನಂದಿಸಲಾಯಿತು. ಉಡುಪಿ ಪ್ರಾಥಮಿಕ ನೇಕಾರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ರತ್ನಾಕರ್ ಇಂದ್ರಾಳಿ, ನಿರ್ದೇಶಕರಾದ ಮಂಜುನಾಥ್ ಮಣಿಪಾಲ, ಪ್ರೇಮಾನಂದ್ ಶೆಟ್ಟಿಗಾರ್, ದೇವರಾಯ ಶೆಟ್ಟಿಗಾರ್, ಕೇಶವ ಶೆಟ್ಟಿಗಾರ್, ಸಹಕಾರಿ ಸಂಘದ ಮುಖ್ಯ ಸೇವಾದಾರರು ಕಾರ್ಯನಿರ್ವಹಣಾಧಿಕಾರಿ ದಿನೇಶ್ ಕುಮಾರ್, ಸರಕಾರಿ ಇಲಾಖೆಗಳ ಪ್ರತಿನಿಧಿಗಳಾದ ಜಯಮಾಲಾ ಮತ್ತು ನವ್ಯ ಮತ್ತಿತರರು ಹಾಜರಿದ್ದರು.