ಬಂಟಕಲ್ಲು: ವಿದ್ಯಾರ್ಥಿ ವಿಚಾರಸಂಕಿರಣ ಸಮಾರೋಪ
ಶಿರ್ವ, ಡಿ.22: ಬಂಟಕಲ್ಲು ಶ್ರೀಮಧ್ವ ವಾದಿರಾಜ ತಾಂತ್ರಿಕ ಮಹಾ ವಿದ್ಯಾಲಯದಲ್ಲಿ ಹಮ್ಮಿಕೊಳ್ಳಲಾದ ಎರಡು ದಿನಗಳ ಕಂಪ್ಯೂಟೇಷನಲ್ ಇಂಟೆಲಿಜೆನ್ಸ್ ಮತ್ತು ಸ್ಮಾರ್ಟ್ ಕಮ್ಯುನಿಕೇಷನ್ ಮತ್ತು ಮೆಟೀರಿಯಲ್, ಎನರ್ಜಿ, ಎನ್ವಿರಾನ್ಮೆಂಟ್ ಮತ್ತು ಮ್ಯಾನ್ಯುಫಾಕ್ಚ್ಚರಿಂಗ್ ಎಂಬ ವಿಷಯದ ಕುರಿತ ಅಂತಾರಾಷ್ಟ್ರೀಯ ಸಮ್ಮೇಳನ ಮತ್ತು ವಿದ್ಯಾರ್ಥಿ ವಿಚಾರ ಸಂಕಿರಣದ ಸಮಾರೋಪ ಸಮಾರಂಭವು ಶನಿವಾರ ಜರಗಿತು.
ಈ ಸಮ್ಮೇಳನದಲ್ಲಿ ಭಾಗವಹಿಸಲು ದೇಶ- ದೇಶಗಳಿಂದ ಒಟ್ಟು 237 ಪ್ರಬಂಧಗಳು ಬಂದಿದ್ದು, ಅಂತಿಮವಾಗಿ 12 ಪ್ರಬಂಧಗಳನ್ನು ಆಯ್ಕೆ ಮಾಡಲಾಯಿತು. ಪ್ರಬಂಧ ಮಂಡನೆಯ ಜತೆಗೆ 6 ಹೆಸರಾಂತ ಸಂಶೋಧಕರಿಂದ ಆಧುನಿಕ ತಂತ್ರಜ್ಞಾನದ ಉಪನ್ಯಾಸ ಏರ್ಪಡಿಸಲಾಯಿತು.
ಮುಖ್ಯ ಅತಿಥಿಯಾಗಿ ಮಣಿಪಾಲ್ ಡಾಟ್ ನೆಟ್ ಸಂಸ್ಥೆಯ ನಿರ್ದೇಶಕ ಡಾ.ಯುಸಿ ನಿರಂಜನ್ ಮಾತನಾಡಿ, ಹೊಸ ತಂತ್ರಜ್ಞಾನಗಳ ಕುರಿತು ಆಳವಾದ ಜ್ಞಾನವನ್ನು ಸಂಪಾದಿಸುವುದು ಮತ್ತು ಶ್ರೇಷ್ಠ ವೃತ್ತಿಪರರೊಂದಿಗೆ ಸಂಪರ್ಕವನ್ನು ನಿರ್ಮಿಸುವುದು ಇಂದಿನ ಅಗತ್ಯವಾಗಿದೆ ಎಂದರು.
ಸಂಸ್ಥೆಯ ಪ್ರಾಂಶುಪಾಲ ಡಾ.ತಿರುಮಲೇಶ್ವರ ಭಟ್ ಅಧ್ಯಕ್ಷತೆ ವಹಿಸಿದ್ದರು. ಅತ್ಯುತ್ತಮ ಪ್ರಬಂಧ ಪುರಸ್ಕಾರವನ್ನು ಉಪಪ್ರಾಂಶುಪಾಲ ಡಾ.ಗಣೇಶ್ ಐತಾಳ್ ಘೋಷಿಸಿದರು.
ಎಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯುನಿಕೇಶನ್ ವಿಭಾಗದ ಡಾ.ಶಿಲ್ಪಾ ಕಾಮತ್ ಸ್ವಾಗತಿಸಿದರು. ಸಿವಿಲ್ ಇಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕ ಸುನಿಲ್ ಹಲ್ದಾಂಕರ್ ವಂದಿಸಿದರು. ರಸಾಯನ ಶಾಸ್ತ್ರ ವಿಭಾಗದ ಸ್ವಾತಿ ಮುಖ್ಯ ಅತಿಥಿಗಳನ್ನು ಪರಿಚಯಿಸಿದರು. ಅನಂತ್ ಮಲ್ಯ ಮತ್ತು ಸ್ತುತಿ ಕಾರ್ಯಕ್ರಮ ನಿರೂಪಿಸಿದರು.