ದೇವಾಡಿಗರಿಗೆ ಜಾಗತಿಕ ಮಟ್ಟದ ಸಂಘಟನೆ ಅಗತ್ಯ: ಐಕಳ ಹರೀಶ್ ಶೆಟ್ಟಿ

ಉಡುಪಿ, ಎ.7: ದೇವರಿಗೆ ಹತ್ತಿರವಾಗಿರುವ ದೇವಾಡಿಗ ಸಮುದಾಯವು ಬಂಟರ ಸಮಾಜಕ್ಕೂ ತೀರಾ ಹತ್ತಿರವಾಗಿದೆ. ದೇವಾಡಿಗ ಸಮಾಜ ಎಲ್ಲಾ ಸಮಾಜವನ್ನು ಪ್ರೀತಿಸುವ ಸಮಾಜ. ಮುಂದೆ ಜಾಗತಿಕ ಮಟ್ಟದಲ್ಲಿ ದೇವಾಡಿಗರ ಸಂಘಟನೆಯನ್ನು ಮಾಡುವ ಉದ್ದೇಶವಿದ್ದಲ್ಲಿ ಅದರ ನಿಜಕ್ಕೂ ಅಗತ್ಯವಿದೆ. ನಮ್ಮ ನಾಡಿನ ಎಲ್ಲಾ ಸಮಾಜ ಬಾಂಧವರು ವಿಶ್ವಮಟ್ಟದಲ್ಲಿದ್ದು ಅವರೆಲ್ಲರನ್ನು ಒಂದೆಡೆ ಸೇರಿಸಲು ವಿಶ್ವ ಮಟ್ಟದ ಸಂಘಟನೆಯ ಅಗತ್ಯವಿದೆ. ಗುರುತಿಸಿ ಯುವ ಜನಾಂಗವು ಈ ಸಮಾಜದಲ್ಲಿ ದುಡಿಯುತ್ತಾ ಸಮಾಜವನ್ನು ಮುಂದುವರಿಸುವ ಅಗತ್ಯವಿದೆ ಎಂದು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ನುಡಿದರು.
ಮುಂಬಯಿಯ ಕುರ್ಲಾ ಬಂಟರ ಭವನದ ಸಭಾಗ್ರಹದಲ್ಲಿ ರವಿವಾರ ನಡೆದ ದೇವಾಡಿಗ ಸಂಘ ಮುಂಬೈ ಇದರ ಶತಮಾನೋತ್ಸವ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು.
ಮಾಜಿ ಮುಖ್ಯಮಂತ್ರಿ ಡಾ.ವೀರಪ್ಪ ಮೊಯ್ಲಿ, ದುಬೈಯ ಪಾರ್ಚೂನ್ ಗ್ರೂಫ್ ಆಫ್ ಹೋಟೆಲ್ಸ್ ಆಡಳಿತ ನಿರ್ದೇಶಕ ಪ್ರವೀಣ್ ಕುಮಾರ್ ಶೆಟ್ಟಿ ವಕ್ವಾಡಿ, ದುಬೈಯ ಉದ್ಯಮಿ ಡಾ.ಡೇವಿಡ್ ಫ್ರ್ಯಾಂಕ್ ಫರ್ನಾಂಡಿಸ್, ಭಾರತ್ ಬ್ಯಾಂಕಿನ ಕಾರ್ಯಾಧ್ಯಕ್ಷ ಸೂರ್ಯಕಾಂತ್ ಜಯ ಸುವರ್ಣ, ಬಿಲ್ಲವರ ಅಸೋಸಿಯೇಷನ್ ಮುಂಬಯಿಯ ಅಧ್ಯಕ್ಷ ಹರೀಶ್ ಜಿ.ಅಮೀನ್, ಬಂಟರ ಸಂಘ ಮುಂಬೈಯ ನಿಕಟಪೂರ್ವ ಅಧ್ಯಕ್ಷ ಚಂದ್ರಹಾಸ ಶೆಟ್ಟಿ, ಜಯ ಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಸಂಸ್ಥಾಪಕ ತೋನ್ಸೆ ಜಯಕೃಷ್ಣ ಎ.ಶೆಟ್ಟಿ ಮಾತನಾಡಿದರು.
ಮಹಾರಾಷ್ಟ್ರ ಸರಕಾರದ ಪ್ರವಾಸೋದ್ಯಮ ಮತ್ತು ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಖಾತೆಯ ಸಚಿವ, ಮಂಗಲ್ ಪ್ರಭಾತ್ ಲೋಧಾ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಸಮಾಜದ ವಿವಿಧ ಸಾಧಕರನ್ನು ಗೌರವಿಸಲಾಯಿತು. ಸ್ಮರಣ ಸಂಚಿಕೆ ಹಾಗೂ ಸಂಘದ ಮಾಜಿ ಅಧ್ಯಕ್ಷ ಧರ್ಮಪಾಲ ದೇವಾಡಿಗರ ಸಾಧನೆ ಕುರಿತ ಗ್ರಂಥವನ್ನು ಬಿಡುಗಡೆಗೊಳಿಸ ಲಾಯಿತು.
ದೇವಾಡಿಗ ಸಂಘ ಮುಂಬಯಿ ಅಧ್ಯಕ್ಷ ಪ್ರವೀಣ್ ದೇವಾಡಿಗ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿಗಳಾದ ರವಿ ಎಸ್.ಶೆಟ್ಟಿ, ಕುಸುಮೋದರ ಡಿ.ಶೆಟ್ಟಿ ಚೆಲ್ಲಡ್ಕ, ಸಿಎ ಸದಾಶಿವ ಎಸ್.ಶೆಟ್ಟಿ, ವಿಶ್ವಾಸ್ ಎಂ.ಅತ್ತಾವರ, ಅನಿಲ್ ಜೈನ್, ಧರ್ಮಪಾಲ್ ದೇವಾಡಿಗ, ಹರೀಶ್ ಶೇರಿಗಾರ್, ಹಿರಿಯಡ್ಕ ಮೋಹನ್ ದಾಸ್, ವಾಸು ಎಸ್.ದೇವಾಡಿಗ ಮೊದಲಾದವರು ಉಪಸ್ಥಿತರಿದ್ದರು. ದೀಕ್ಷಿತಾ ದೇವಾಡಿಗ, ಶ್ರದ್ಧಾ ಮೊಯಿಲಿ, ಸ್ಪೂರ್ತಿ ಮೊಯಿಲಿ, ತನ್ವಿ ದೇವಾಡಿಗ, ಹರ್ಷ ದೇವಾಡಿಗ, ಅಶ್ವಿನಿ ದೇವಾಡಿಗ, ಸೋನಾಲಿ ಶೇರಿಗಾರ್ ಕಾರ್ಯಕ್ರಮ ನಿರೂಪಿಸಿದರು.